ಅವಿರತವಾಗಿ ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಿರುವ ರಾಮನಾಥಿ (ಗೋವಾ)ಯ ಸನಾತನದ ಆಶ್ರಮಕ್ಕೆ ಧಾನ್ಯಗಳನ್ನು ಅರ್ಪಿಸಿ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಿ

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಮೇಲಿನ ಧಾನ್ಯಗಳು, ಮಸಾಲೆ ಪದಾರ್ಥಗಳು ಇತ್ಯಾದಿಗಳನ್ನು ಅರ್ಪಣೆಯ ರೂಪದಲ್ಲಿ ನೀಡಬಯಸುವ ಅಥವಾ ಅದನ್ನು ಖರೀದಿಸಲು ಧನದ ರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಬಯಸುವವರು ಸಂಪರ್ಕಿಸಬೇಕು.

ಸನಾತನದ ಆಶ್ರಮಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ಬೇಕಾಗುವ ವಿವಿಧ ಉಪಕರಣಗಳು !

ಸನಾತನದ ವಿವಿಧೆಡೆಗಳಲ್ಲಿರುವ ಆಶ್ರಮಗಳಲ್ಲಿ ರಾಷ್ಟ ಮತ್ತು ಧರ್ಮಕ್ಕಾಗಿ ನಿಸ್ವಾರ್ಥವಾಗಿ ಸೇವೆ ಮಾಡುತ್ತಿರುವ ವಿವಿಧ ವಯೋಮಾನದ ನೂರಾರು ಸಾಧಕರು ಇರುತ್ತಾರೆ. ಆಶ್ರಮದಲ್ಲಿನ ವೃದ್ಧ ಸಾಧಕರಿಗೆ ಹಾಗೂ ಮಧುಮೇಹ, ಸಂಧಿವಾತ, ಹೃದಯಕ್ಕೆ ಸಂಬಂಧಿತ ರೋಗಗಳು ಇವೇ ಮುಂತಾದ ದೈಹಿಕ ಕಾಯಿಲೆಗಳಿಂದ ಬಳಲುತ್ತಿರುವ ಸಾಧಕರಿಗೆ ವೈದ್ಯಕೀಯ ಚಿಕಿತ್ಸೆಗೆ ಬೇಕಾಗುವ ಉಪಕರಣಗಳ ಅವಶ್ಯಕತೆ ಇದೆ.

ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಇನ್ನೂ ೮೦೦೦ ಗ್ರಂಥಗಳನ್ನು ಪ್ರಕಟಿಸುವಷ್ಟು ಜ್ಞಾನ ಸಂಗ್ರಹವಾಗಿದೆ. ಈ ಅಗಾಧ ಪ್ರಮಾಣದಲ್ಲಿರುವ ಗ್ರಂಥಸಂಪತ್ತನ್ನು ಮರಾಠಿಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವ ಸೇವೆಯಲ್ಲಿ ಭಾಗಿಯಾಗುವುದೆಂದರೆ ಈ ಧರ್ಮಕಾರ್ಯದ ಅಮೂಲ್ಯ ಅವಕಾಶವೇ ಆಗಿದೆ.

ಸನಾತನದ ರಾಮನಾಥಿ (ಗೋವಾ) ಆಶ್ರಮಕ್ಕೆ ವಿದ್ಯುತ್‍ಚಾಲಿತ ದ್ವಿಚಕ್ರ ವಾಹನದ ಆವಶ್ಯಕತೆ !

ಪ್ರಸ್ತುತ ಪೆಟ್ರೋಲ್‍ನ ಬೆಲೆ ಏರುತ್ತಿರುವುದರಿಂದ, ಪೆಟ್ರೋಲ್‍ನಿಂದ ಚಲಿಸುವ ದ್ವಿಚಕ್ರ ವಾಹನಗಳ ವೆಚ್ಚ ಅಧಿಕವಾಗುತ್ತಿದೆ. ಈ ವೆಚ್ಚವನ್ನು ಕಡಿಮೆ ಮಾಡಲು ಸನಾತನದ ರಾಮನಾಥಿ (ಗೋವಾ) ಆಶ್ರಮದಲ್ಲಿ ವಿದ್ಯುತ್‍ಚಾಲಿತ ದ್ವಿಚಕ್ರ ವಾಹನಗಳ ಆವಶ್ಯಕತೆಯಿದೆ.

ಸನಾತನದ ಸಾಧಕ ಎಂದು ಹೇಳಿಕೊಂಡು ಆರ್ಥಿಕ ವಂಚನೆ ಮಾಡುವ ಸುಳ್ಯದ ಶಿವಾನಂದ ಪ್ರಭು ಇವರಿಂದ ಎಚ್ಚರದಿಂದಿರಿ !

ಸನಾತನದ ಸಾಧಕ ಎಂದು ಹೇಳಿ ಓರ್ವ ವ್ಯಕ್ತಿಯು ಅನೇಕರಿಗೆ ಆರ್ಥಿಕವಾಗಿ ವಂಚಿಸಿರುವುದು ಗಮನಕ್ಕೆ ಬಂದಿದೆ. ಆತ ಸುಳ್ಯದವನಾಗಿದ್ದು ತನ್ನ ಹೆಸರು ಶಿವಾನಂದ ಪ್ರಭು ಎಂದು ಹೇಳಿ ವಂಚನೆ ಮಾಡಿದ್ದಾನೆಂದು ಮೋಸ ಹೋದ ವ್ಯಕ್ತಿಯಿಂದ ತಿಳಿದುಬಂದಿದೆ.

ಸಾಪ್ತಾಹಿಕ ಮತ್ತು ಪಾಕ್ಷಿಕ ‘ಸನಾತನ ಪ್ರಭಾತ’ಗಳಲ್ಲಿ ಮುದ್ರಿತ ಲೇಖನಗಳನ್ನುಈಗ ಜಾಲತಾಣದ ಒಂದೇ ‘ಲಿಂಕ್’ನಲ್ಲಿ ವೀಕ್ಷಿಸುವ ಸೌಲಭ್ಯ ಲಭ್ಯ !

ಸಾಪ್ತಾಹಿಕ ಸನಾತನ ಪ್ರಭಾತದ ಆಯಾ ವಾರದ ಸಂಚಿಕೆಯು ಒಂದೇ ಲಿಂಕ್‌ನಲ್ಲಿ ಓದುವ ವ್ಯವಸ್ಥೆ ಇದೆ. ಅದಕ್ಕಾಗಿ ಜಾಲತಾಣದ ಮುಖ್ಯ ಪುಟದಲ್ಲಿನ ‘ಮೆನುಬಾರ್’ ನಲ್ಲಿನ ‘ಈ ವಾರದ ಸಾಪ್ತಾಹಿಕದ ಮೇಲೆ ಕ್ಲಿಕ್ ಮಾಡಿದರೆ, ಆ ಲಿಂಕ್‌ನಲ್ಲಿ ಆ ವಾರದ ಸಾಪ್ತಾಹಿಕದ ಎಲ್ಲ ಲೇಖನಗಳು ‘ಪೋಸ್ಟ್’ಗಳ ರೂಪದಲ್ಲಿ ಒಂದರ ಕೆಳಗೆ ಒಂದರಂತೆ ಕಾಣಿಸಿಕೊಳ್ಳುತ್ತವೆ.

ಆಪತ್ಕಾಲದ ಪೂರ್ವಸಿದ್ಧತೆಯೆಂದು ಕಾರ್ತಿಕ ಏಕಾದಶಿಯಿಂದ (೧೫.೧೧.೨೦೨೧) ಆರಂಭವಾದ ಸನಾತನದ ‘ಮನೆ ಮನೆಯಲ್ಲಿ ಕೈದೋಟ’ ಅಭಿಯಾನದಲ್ಲಿ ಪಾಲ್ಗೊಳ್ಳಿ

ಇಂದು ಮಾರುಕಟ್ಟೆಯಲ್ಲಿ ಸಿಗುವ ತರಕಾರಿ, ಹಣ್ಣು ಇತ್ಯಾದಿಗಳ ಮೇಲೆ ಹಾನಿಕರ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತದೆ. ಇಂತಹ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುವುದರಿಂದ ವಿಷಯುಕ್ತ ಪದಾರ್ಥಗಳು ನಮ್ಮ ಹೊಟ್ಟೆ ಸೇರುತ್ತವೆ. ಇದರಿಂದ ರೋಗಗಳು ಉಂಟಾಗುತ್ತದೆ. ಸಾಧನೆಗಾಗಿ ದೇಹವು ಆರೋಗ್ಯಕರವಾಗಿರಬೇಕು.

‘ಹೋಮಿಯೋಪತಿ ಸ್ವಯಂ ಚಿಕಿತ್ಸೆ’ ಈ ಸಂದರ್ಭದಲ್ಲಿ ಮಾಹಿತಿ ತಿಳಿಸಿ !

ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ‘ಹೋಮಿಯೋಪತಿಯ ಸ್ವಯಂಚಿಕಿತ್ಸೆ’ ಈ ವಿಷಯವಾಗಿ ಮಾಹಿತಿ ಇದ್ದರೆ ಅವರು ಈ ಮಾಹಿತಿ ಬರೆದು ಅಥವಾ ಬೆರಳಚ್ಚು ಮಾಡಿ ಆದಷ್ಟು ಬೇಗನೆ ಸೌ. ಭಾಗ್ಯಶ್ರೀ ಸಾಮಂತ ಇವರ ಹೆಸರಿಗೆ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಕಳುಹಿಸಬೇಕು.

ಸನಾತನದ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ವಾಸಿಸುವ ಸಾಧಕರು, ಹಾಗೆಯೇ ಪ್ರಸಾರದ ಸೇವೆಯನ್ನು ಮಾಡುವ ಸಾಧಕರು ಹಾಗೂ ಅವರ ಕುಟುಂಬದವರಿಗೆ ಆಪತ್ಕಾಲದಲ್ಲಿ ತುರ್ತಾಗಿ ವೈದ್ಯಕೀಯ ಸೌಲಭ್ಯ ದೊರಕಲು ೩ ತುರ್ತುರೋಗಿವಾಹಕ (ಅಂಬ್ಯುಲನ್ಸ್)ಗಳ ಆವಶ್ಯಕತೆ ಇದೆ !

ಗಂಭೀರ ಸ್ಥಿತಿಯಲ್ಲಿರುವ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಥವಾ ಹೆಚ್ಚು ಕುಶಲ ವೈದ್ಯಕೀಯ ಉಪಚಾರವನ್ನು ಪಡೆಯಲು ಬೇರೆಡೆ ಸಾಗಿಸಲು, ಮುಂತಾದವುಗಳಿಗಾಗಿ ತುರ್ತುರೋಗಿವಾಹಕಗಳು ಕೂಡಲೇ ಮತ್ತು ಸಹಜವಾಗಿ ಲಭ್ಯವಾಗುವುದು ಅನಿವಾರ್ಯವಾಗಿದೆ.

ಸಂಶೋಧನೆಯ ಮಾಧ್ಯಮದಿಂದ ಇಡೀ ಮನುಕುಲಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡುವ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಂಶೋಧನಾ ಕಾರ್ಯಕ್ಕಾಗಿ ಛಾಯಾಚಿತ್ರಕಗಳು (‘ಕ್ಯಾಮೆರಾ’) ಬೇಕಾಗಿವೆ !

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಲು ಸುವರ್ಣಾವಕಾಶ !