ಪಾಕಿಸ್ತಾನವು ಅಫಗಾನಿಸ್ತಾನದ ಮೇಲೆ ನಡೆಸಿದ ವಾಯುದಾಳಿಯಲ್ಲಿ ೩೦ ಜನರ ಸಾವು

ಪಾಕಿಸ್ತಾನದ ವಾಯುದಳವು ಅಫಗಾನಿಸ್ತಾನದ ಖೊಸ್ತ ಪ್ರಾಂತ್ಯದಲ್ಲಿನ ಸಪುರಾ ಜಿಲ್ಲೆ ಹಾಗೂ ಕುನಾರ ಪ್ರಾಂತ್ಯದಲ್ಲಿ ನಡೆಸಿದ ದಾಳಿಯಲ್ಲಿ ೩೦ ಜನರು ಮೃತಪಟ್ಟಿದ್ದಾರೆ. ಅವರ ಪೈಕಿ ಮಹಿಳೆಯರು ಹಾಗೂ ಮಕ್ಕಳ ಸಮಾವೇಶವಿತ್ತು. ಉಗ್ರಗಾಮಿಗಳನ್ನು ನಾಶ ಮಾಡಲು ಈ ಕಾರ್ಯಾಚರಣೆ ನಡೆಸಿರುವುದಾಗಿ ಪಾಕಿಸ್ತಾನವು ಹೇಳಿಕೊಂಡಿದೆ.

ರಷ್ಯಾವು ಉಕ್ರೇನ ಮೇಲೆ ಪರಮಾಣು ಬಾಂಬ ಹಾಕುವ ಸಾಧ್ಯತೆ !

ರಷ್ಯಾ ಮತ್ತು ಉಕ್ರೇನ ನಡುವಿನ ಯುದ್ಧ ನಡೆದು ೫೦ ದಿನಗಳಿಗಿಂತ ಹೆಚ್ಚು ಕಳೆದಿದೆ, ಆದರೂ ರಷ್ಯಾಗೆ ಉಕ್ರೇನನ್ನು ಸೋಲಿಸಲಾಗಲಿಲ್ಲ. ಈ ಹಿನ್ನೆಲೆಯಲ್ಲಿ ರಷ್ಯಾವು ಉಕ್ರೇನ ಮೇಲೆ ಪರಮಾಣು ಬಾಂಬ ಹಾಕುವ ಸಾಧ್ಯತೆಯನ್ನು ಪರಿಗಣಿಸುತ್ತಿದೆ.

ಜೆರುಸಲೆಮ್ (ಇಸ್ರೇಲ್)ನಲ್ಲಿ ಅಲ್ ಅಕ್ಸಾ ಮಸೀದಿಯಲ್ಲಿ ಇಸ್ರೇಲಿ ಪೊಲೀಸರು ಮತ್ತು ಪ್ಯಾಲೆಸ್ಟೀನಿಗಳ ನಡುವೆ ಹಿಂಸಾಚಾರ

ಅಲ್-ಅಕ್ಸಾ ಮಸೀದಿಯಲ್ಲಿ ಪ್ಯಾಲೆಸ್ಟೀನ್ ನಾಗರಿಕರ ಮತ್ತು ಇಸ್ರೇಲಿ ಪೊಲೀಸರ ನಡುವಿನ ಘರ್ಷಣೆಯಲ್ಲಿ ಕನಿಷ್ಠ ೫೯ ಪ್ಯಾಲೆಸ್ಟೀನಿಗಳು ಗಾಯಗೊಂಡಿದ್ದಾರೆ. ‘ಈ ಹಿಂಸೆಗೆ ಕಾರಣವೇನು ?’ ಎಂದು ಕಂಡುಹಿಡಿದಿಲ್ಲ.

ಬಾಂಗ್ಲಾದೇಶದಲ್ಲಿ ಕಟ್ಟರತೆಯನ್ನು ವಿರೋಧಿಸಿದ ಪ್ರಾಧ್ಯಾಪಕನನ್ನು ಕೊಂದ ೪ ಜಿಹಾದಿ ಭಯೋತ್ಪಾದಕರಿಗೆ ಮರಣದಂಡನೆ !

ಒಂದು ಸ್ಥಳೀಯ ನ್ಯಾಯಾಲಯವು ವಿಶ್ವವಿದ್ಯಾಲಯದ ಪ್ರಸಿದ್ಧ ಲೇಖಕ ಹಾಗೂ ಸಾಹಿತಿ ಪ್ರಾ. ಹುಮಾಯೂ ಆಜಾದ್ ಹತ್ಯೆಗೆ ಸಂಬಂಧಿಸಿದಂತೆ ೧೮ ವರ್ಷಗಳ ಹಿಂದಿನ ಪ್ರಕರಣದಲ್ಲಿ ನಾಲ್ವರು ಜಿಹಾದಿ ಭಯೋತ್ಪಾದಕರಿಗೆ ಮರಣದಂಡನೆ ವಿದಿಸಿದೆ.

ನ್ಯೂಯಾರ್ಕ(ಅಮೇರಿಕಾ)ನಲ್ಲಿ ಇಬ್ಬರು ಸಿಖ್ಖರ ಮೇಲೆ ದಾಳಿ

ಇಲ್ಲಿಯ ರಿಚಮಂಡ ಹಿಲ ಪ್ರದೇಶದಲ್ಲಿ ಇಬ್ಬರು ಸಿಖ್ಖರ ಮೇಲೆ ದಾಳಿ ಮಾಡಲಾಗಿದೆ. ದಾಳಿಕೊರರಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಭಾರತೀಯ ರಾಯಭಾರಿ ಕಚೇರಿ ಈ ದಾಳಿಯನ್ನು ಖಂಡಿಸಿದೆ. ಇಬ್ಬರು ವ್ಯಕ್ತಿಗಳು ಬೆಳಿಗ್ಗೆ ತಿರುಗಾಡಲು ಹೊದಾಗ ಈ ಘಟನೆ ನಡೆದಿದೆ.

ಭಾರತ-ನೇಪಾಳ ಗಡಿಯ ಬಳಿ ಮದರಸಾ ಮತ್ತು ಮಸೀದಿಗಳ ಸಂಖ್ಯೆಯಲ್ಲಿ ಹೆಚ್ಚಳ !

ಕೇವಲ ಅಂಕಿಅಂಶವನ್ನು ಸಂಗ್ರಹಿಸಿ ಪ್ರಯೋಜನವಿಲ್ಲ, ಇಲ್ಲಿನ ಅನಧೀಕೃತ ಮಸೀದಿ ಮತ್ತು ಮದರಸಾಗಳ ಮೇಲೆ ತಕ್ಷಣ ಕಾರ್ಯಾಚರಣೆಯನ್ನು ಮಾಡಬೇಕು ! ‘ಇಂತಹ ಕಾನೂನುಬಾಹಿರ ನಿರ್ಮಾಣವಾಗುವ ವರೆಗೆ ಆಡಳಿತ ಹಾಗೂ ಗುಪ್ತಚರ ಇಲಾಖೆಯು ಏನು ಮಾಡುತ್ತಿತ್ತು ?’, ಇದರ ಬಗ್ಗೆಯೂ ಗಮನ ನೀಡುವುದು ಆವಶ್ಯಕವಾಗಿದೆ !

ವಾಯುಮಾಲಿನ್ಯದಿಂದ ಪ್ರತಿ ನಿಮಿಷಕ್ಕೆ ಜಗತ್ತಿನ ೧೩ ಜನರು ಮರಣೋನ್ಮುಖಿ !

ವಿಜ್ಞಾನವು ಮನುಷ್ಯನಿಗೆ ಸಹಾಯಕವಾಗುವುದರ ಬದಲಾಗಿ ವಿನಾಶಕಾರಿಯಾಗುತ್ತಿದೆ, ಎಂದು ಈ ಅಂಕಿ-ಅಂಶಗಳಿಂದ ಸಿದ್ಧಗೊಳ್ಳುತ್ತಿದೆ ! ಸನಾತನ ಧರ್ಮವನ್ನು ಪಾಲಿಸಿ ಭೌತಿಕ ಪ್ರಗತಿಯನ್ನು ಸಾಧಿಸುವುದೊಂದೇ ಈ ಭಯಾನಕ ಜಗತ್ತಿನ ಸಮಸ್ಯೆಗೆ ಏಕೈಕ ಪರಿಹಾರವೆಂದು ತಿಳಿಯಿರಿ !

ಶ್ರೀಲಂಕಾಗೆ ಅರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ೨೨ ಸಾವಿರ ಕೋಟಿ ರೂಪಾಯಿಗಳು ಬೇಕಾಗಿದೆ !

ಶ್ರೀಲಂಕಾ ದಿವಾಳಿಯಾಗಿದೆ. ದೇಶದಲ್ಲಿ ಕೇವಲ ೫ ಸಾವಿರ ಕೋಟಿ ರೂಪಾಯಿಗಳ ವಿದೇಶಿ ವಿನಿಮಯ ಸಂಗ್ರಹದಲ್ಲಿ ಬಾಕಿ ಉಳಿದಿರುವುದು. ಈ ಪರಿಸ್ಥಿತಿಯಿಂದ ಹೊರಬರಲು ಶ್ರೀಲಂಕಾಗೆ ಸುಮಾರು ೨೨ ಸಾವಿರ ಕೋಟಿ ರೂಪಾಯಿಗಳ ಅವಶ್ಯಕತೆ ಇದೆ.

ಬುಚಾ ನಗರದಲ್ಲಿ ನಾವು ನರಸಂಹಾರ ನಡೆಸಿಲ್ಲ ! – ರಷ್ಯಾದ ಹೇಳಿಕೆ

ಬುಚಾ ನಗರದಲ್ಲಿ ನಾವು ನರಸಂಹಾರ ನಡೆಸಿಲ್ಲ, ಎಂದು ರಷ್ಯಾ ಹೇಳಿಕೆ ನೀಡಿದೆ. ಈ ಸಂಪೂರ್ಣ ಪ್ರಕರಣ ಸುಳ್ಳಾಗಿದೆಯೆಂದು ವಾದಿಸುವ ಒಂದು ವಿಡಿಯೊವನ್ನು ರಷ್ಯಾ ಪ್ರಸಾರ ಮಾಡಿದೆ. ಬುಚಾ ನಗರದಲ್ಲಿ ೪೧೦ ಕ್ಕಿಂತ ಹೆಚ್ಚು ಆವಗಳು ಸಿಕ್ಕಿದೆ. ರಷ್ಯಾದ ಸೈನ್ಯವು ನಾಗರಿಕರನ್ನು ಸಾಮೂಹಿಕ ಹತ್ಯೆ ಮಾಡಿರುವ ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರುವ ಆರೋಪವಿದೆ.

ನ್ಯೂಯಾರ್ಕ್‌ನ ‘ಟೈಮ್ಸ್ ಸ್ಕ್ವೇರ್’ನಲ್ಲಿ ಮೊಟ್ಟ ಮೊದಲು ಬಾರಿ ಸಾಮೂಹಿಕ ನಮಾಜ್

ನಗರದ ಪ್ರಸಿದ್ಧ ‘ಟೈಮ್ಸ್ ಸ್ಕ್ವೇರ್’ ಈ ಸಾರ್ವಜನಿಕ ಸ್ಥಳದಲ್ಲಿ ಮೊಟ್ಟಮೊದಲ ಬಾರಿಗೆ ನೂರಾರು ಮುಸಲ್ಮಾನರಿಂದ ಸಾಮೂಹಿಕ ನಮಾಜ್ ಮಾಡಲಾಯಿತು. ಶನಿವಾರ ಏಪ್ರಿಲ್ ೩ ರಂದು ನಮಾಜ್ ಮಾಡಲಾಯಿತು.