ನ್ಯೂಯಾರ್ಕ(ಅಮೇರಿಕಾ)ನಲ್ಲಿ ಇಬ್ಬರು ಸಿಖ್ಖರ ಮೇಲೆ ದಾಳಿ

ಒಬ್ಬ ದಾಳಿಕೊರನ ಬಂಧನ

ಭಾರತದಲ್ಲಿಯ ಮಾನವ ಹಕ್ಕುಗಳ ಬಗ್ಗೆ ಚಿಂತೆ ವ್ಯಕ್ತ ಮಾಡುವ ಅಮೇರಿಕಾವು ತನ್ನದೇ ದೇಶದಲ್ಲಿ ಇಂತಹ ಪ್ರಕಾರದ ಘಟನೆ ಘಟಿಸುತ್ತಿರುವಾಗ ಅದನ್ನು ತಡೆಯುವದರ ಕಡೆಗೆ ಹೆಚ್ಚಿನ ಗಮನ ಕೊಡಬೇಕು !

ನ್ಯೂಯಾರ್ಕ (ಅಮೇರಿಕಾ) – ಇಲ್ಲಿಯ ರಿಚಮಂಡ ಹಿಲ ಪ್ರದೇಶದಲ್ಲಿ ಇಬ್ಬರು ಸಿಖ್ಖರ ಮೇಲೆ ದಾಳಿ ಮಾಡಲಾಗಿದೆ. ದಾಳಿಕೊರರಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಭಾರತೀಯ ರಾಯಭಾರಿ ಕಚೇರಿ ಈ ದಾಳಿಯನ್ನು ಖಂಡಿಸಿದೆ. ಇಬ್ಬರು ವ್ಯಕ್ತಿಗಳು ಬೆಳಿಗ್ಗೆ ತಿರುಗಾಡಲು ಹೊದಾಗ ಈ ಘಟನೆ ನಡೆದಿದೆ.

ಅವರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಲಾಯಿತು ಮತ್ತು ಅವರ ಪಗಡಿಯನ್ನು ತೆಗೆದು ಹಾಕಲಾಯಿತು. ೧೦ ದಿನಗಳ ಹಿಂದೆ ಇದೇ ಸ್ಥಳದಲ್ಲಿ ಸಿಖ್ಖರ ಮೇಲೆ ದಾಳಿ ನಡೆಸಲಾಗಿತ್ತು.