ಜೆರುಸಲೆಮ್ (ಇಸ್ರೇಲ್)ನಲ್ಲಿ ಅಲ್ ಅಕ್ಸಾ ಮಸೀದಿಯಲ್ಲಿ ಇಸ್ರೇಲಿ ಪೊಲೀಸರು ಮತ್ತು ಪ್ಯಾಲೆಸ್ಟೀನಿಗಳ ನಡುವೆ ಹಿಂಸಾಚಾರ

೫೯ ಪ್ಯಾಲೆಸ್ಟೀನ್ ನಾಗರಿಕರಿಗೆ ಗಾಯ

ಜೆರುಸಲೆಮ್ (ಇಸ್ರೇಲ್) – ಇಲ್ಲಿಯ ಅಲ್-ಅಕ್ಸಾ ಮಸೀದಿಯಲ್ಲಿ ಪ್ಯಾಲೆಸ್ಟೀನ್ ನಾಗರಿಕರ ಮತ್ತು ಇಸ್ರೇಲಿ ಪೊಲೀಸರ ನಡುವಿನ ಘರ್ಷಣೆಯಲ್ಲಿ ಕನಿಷ್ಠ ೫೯ ಪ್ಯಾಲೆಸ್ಟೀನಿಗಳು ಗಾಯಗೊಂಡಿದ್ದಾರೆ. ‘ಈ ಹಿಂಸೆಗೆ ಕಾರಣವೇನು ?’ ಎಂದು ಕಂಡುಹಿಡಿದಿಲ್ಲ.

ಇಲ್ಲಿ ಬೆಳಗ್ಗೆ ಸಾವಿರಾರು ಮುಸ್ಲಿಮರು ನಮಾಜಗಾಗಿ ಜಮಾಯಿಸಿದ್ದರು. ಆಗ ಇಸ್ರೇಲಿ ಪೊಲೀಸರೂ ಮಸೀದಿಗೆ ಬಂದರು. ಈ ವೇಳೆ ಪೊಲೀಸರ ಹಾಗೂ ನಾಗರಿಕರ ನಡುವೆ ವಾಗ್ವಾದ ನಡೆದು, ಅದು ಹಿಂಸಾಚಾರಕ್ಕೆ ತಿರುಗಿತು. ಈ ಘಟನೆಯ ಕೆಲವು ವಿಡಿಯೋಗಳೂ ಪ್ರಸಾರವಾಗಿವೆ. ಇದರಲ್ಲಿ ಪ್ಯಾಲೆಸ್ಟೀನಿಯನ್ನರು ಕಲ್ಲುತೂರಾಟ ಮಾಡುವುದು ಮತ್ತು ಪೊಲೀಸರು ನಾಗರಿಕರ ಮೇಲೆ ಅಶ್ರುವಾಯು ಹಾರಿಸುವುದು ಕಂಡು ಬರುತ್ತಿದೆ. ಈ ಘಟನೆಯ ಕುರಿತು ಇಸ್ರೇಲಿ ಪೊಲೀಸರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.