ಭಾರತ-ನೇಪಾಳ ಗಡಿಯ ಬಳಿ ಮದರಸಾ ಮತ್ತು ಮಸೀದಿಗಳ ಸಂಖ್ಯೆಯಲ್ಲಿ ಹೆಚ್ಚಳ !

  • ಮುಸಲ್ಮಾನರ ಜನಸಂಖ್ಯೆಯಲ್ಲಿಯೂ ಹೆಚ್ಚಳ

  • ಗುಪ್ತಚರ ಇಲಾಖೆಯು ಜಾಗೃತವಾಗಿದೆ

ಕೇವಲ ಅಂಕಿಅಂಶವನ್ನು ಸಂಗ್ರಹಿಸಿ ಪ್ರಯೋಜನವಿಲ್ಲ, ಇಲ್ಲಿನ ಅನಧೀಕೃತ ಮಸೀದಿ ಮತ್ತು ಮದರಸಾಗಳ ಮೇಲೆ ತಕ್ಷಣ ಕಾರ್ಯಾಚರಣೆಯನ್ನು ಮಾಡಬೇಕು ! ‘ಇಂತಹ ಕಾನೂನುಬಾಹಿರ ನಿರ್ಮಾಣವಾಗುವ ವರೆಗೆ ಆಡಳಿತ ಹಾಗೂ ಗುಪ್ತಚರ ಇಲಾಖೆಯು ಏನು ಮಾಡುತ್ತಿತ್ತು ?’, ಇದರ ಬಗ್ಗೆಯೂ ಗಮನ ನೀಡುವುದು ಆವಶ್ಯಕವಾಗಿದೆ !

ನವದೆಹಲಿ – ಉತ್ತರಪ್ರದೇಶ, ಉತ್ತರಾಖಂಡ ಮತ್ತು ಬಿಹಾರ ರಾಜ್ಯಗಳ ನೇಪಾಳ ಗಡಿಯ ಭಾಗದಲ್ಲಿ ಮದರಸಾ ಮತ್ತು ಮಸೀದಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಹಾಗೆಯೇ ಇಲ್ಲಿನ ಮುಸಲ್ಮಾನರ ಜನಸಂಖ್ಯೆಯೂ ಹೆಚ್ಚಾಗಿದ್ದರಿಂದ ಗುಪ್ತಚರ ಇಲಾಖೆಯು ಜಾಗೃತವಾಗಿದೆ. ಪಕ್ಕದಲ್ಲಿರುವ ನೇಪಾಳದೊಂದಿಗೆ ಭಾರತದ ಸಂಬಂಧವು ಸ್ನೇಹಮಯವಾಗಿದೆ. ಆದರೆ ಚಿಂತೆಯ ವಿಷಯವೆಂದರೆ ನೇಪಾಳದ ಗಡಿಯ ಬಳಿ ಇರುವ ಭಾರತೀಯ ಜಿಲ್ಲೆಗಳಲ್ಲಿ ಮದರಸಾಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಭಾರತದ ೭ ಜಿಲ್ಲೆಗಳಿಗೆ ತಾಗಿರುವ ನೇಪಾಳದ ೫೫೦ ಕಿಲೋಮಿಟರ್‌ ಗಡಿಯು ಜನಸಂಖ್ಯೆಯ ಸಮತೋಲನೆಯ ದೃಷ್ಟಿಯಿಂದ ಸಂವೇದನಾಶೀಲವಾಗುತ್ತಿದೆ. ಗೋರಖಪುರ ಮತ್ತುಅದರ ಬಳಿ ಇರುವ ಜಿಲ್ಲೆಗಳಿಗೆ ತಾಗಿರುವ ನೇಪಾಳದ ಗಡಿಯು ಹೆಚ್ಚು ಸಂವೇದನಾಶೀಲವಾಗಿದೆ. ಮದರಸಾಗಳ ಸಂಖ್ಯೆ ಹಾಗೂ ಅವುಗಳ ಕೆಲಸಕಾರ್ಯದ ಬಗ್ಗೆ ಎರಡೂ ದೇಶಗಳ ಅಧಿಕಾರಿಗಳಲ್ಲಿ ಚರ್ಚೆಯಾಗಿದೆ. ಆದರೆ ಇನ್ನೂ ಯಾವುದೇ ಕಾರ್ಯಾಚರಣೆಯಾಗಿಲ್ಲ.

೧. ಉತ್ತರಪ್ರದೇಶದಲ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ೨೦೦೦ರಲ್ಲಿ ೧೪೭ ಮದರಸಾಗಳಿದ್ದವು. ಸದ್ಯ ಇಲ್ಲಿ ೫೯೭ ಮದರಸಾಗಳಿದ್ದು ಇವುಗಳಲ್ಲಿ ೧೪೫ ಮದರಸಾಗಳ ನೋಂದಣಿಯಾಗಿಲ್ಲ.

೨. ಮಹಾರಾಜಗಂಜ ಜಿಲ್ಲೆಯಲ್ಲಿ ೨೫೨ ಮಾನ್ಯತೆಗೊಳಗಾದ ಮದರಸಾಗಳು ಕಾರ್ಯನಿರತವಾಗಿವೆ; ಆದರೆ ಈ ಜಿಲ್ಲೆಯ ೮೪ ಕಿಲೋಮೀಟರಿನ ನೇಪಾಳ ಗಡಿಯಲ್ಲಿ ಮದರಸಾಗಳ ಸಂಖ್ಯೆಯು ಇದರ ಒಂದೂವರೆ ಪಟ್ಟು ಹೆಚ್ಚಾಗಿದೆ.

೩. ಭಾರತದ ಗಡಿಗಡ ತಾಗಿರುವ ನೇಪಾಳದ ರೂಪಂದೇಹಿ ಮತ್ತು ನವಲಪರಾಸಿ ಜಿಲ್ಲೆಗಳಲ್ಲಿ ಅನೇಕ ಮದರಸಾಗಳಿವೆ.

೪. ನೇಪಾಳದಲ್ಲಿನ ಬೈರಹವಾದಲ್ಲಿನ ಮದರಸಾಗಳಲ್ಲಿ ಪಾಕಿಸ್ತಾನಿ ಗುಪ್ತಚರ ಸಂಸ್ಥೆಯಾದ ‘ಇಂಟರ್‌ ಸರ್ವಿಸೆಸ್‌ ಇಂಟೆಲಿಜನ್ಸ್‌’ನ (‘ಆಯ್‌. ಎಸ್‌. ಆಯ್‌.’ ನ) ಸಹಾಯಕರ ವಾಸ್ತವ್ಯದ ಬಗ್ಗೆ ಮಾಹಿತಿ ದೊರೆತಿತ್ತು.

೫. ಭಾರತೀಯ ಗಡಿಗೆ ತಾಗಿರುವ ೭೮೪ ಊರುಗಳಲ್ಲಿ ೨೦೫ ಮದರಸಾಗಳಿದ್ದರೆ ನೇಪಾಳದ ೧೫೭ ಊರುಗಳಲ್ಲಿ ೫೩ ಮದರಸಾಗಳಿವೆ.

೬. ೧೯೯೮ರಲ್ಲಿ ಗಡಿಗೆ ತಾಗಿರುವ ನೇಪಾಳದ ಕೃಷ್ಣನಗರದಲ್ಲಿರುವ ಮದರಸಾಗಳಲ್ಲಿ ೨ ಕಾಶ್ಮೀರಿ ತರುಣರನ್ನುಬಂಧಿಸಲಾಯಿತು. ಅವರ ಸಂಬಂಧವು ‘ಆಯ್‌. ಎಸ್‌. ಆಯ್‌.’ ನ ಸಹಾಯಕರೊಂದಿಗೆ ಇರುವುದು ಸಾಬೀಯಾಗಿತ್ತು.

೭. ಬಿಹಾರದ ನೇಪಾಳ ಗಡಿಯಲ್ಲಿರುವ ಮಧುಬನೀ, ಪೂರ್ವಿ ಚಂಪಾರಣ, ಪಶ್ಚಿಮ ಚಂಪಾರಣ ಮತ್ತು ಸೀತಾಮಢಿ ಜಿಲ್ಲೆಯಲ್ಲಿ ಕಳೆದ ೧೦ ವರ್ಷಗಳಲ್ಲಿ ಮದರಸಾಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ಗಡಿಯಲ್ಲಿರುವ ರಕ್ಸೌಲ, ರಾಮಗಢವಾ, ಆದಾಪೂರ, ಛೌಡಾದಾನೋ ಪ್ರಾಂತ್ಯಗಳಲ್ಲಿರುವ ಚಿಕ್ಕ ಊರುಗಳಲ್ಲಿ ಚಿಕ್ಕ ಮತ್ತು ದೊಡ್ಡ ಹೀಗೆ ೧೪೯ ಮದರಸಾಗಳಿವೆ. ಇವುಗಳಲ್ಲಿ ಕೇವಲ ೯ ಮದರಸಾಗಳ ನೋಂದಣಿಯಾಗಿದೆ. ಇಲ್ಲಿನ ಮುಸಲ್ಮಾನರ ಜನಸಂಖ್ಯೆಯು ಹಿಂದೂಗಳ ತುಲನೆಯಲ್ಲಿ ಎರಡುಪಟ್ಟು ಹೆಚ್ಚಾಗಿದೆ.

೮. ನೇಪಾಳದ ಗಡಿಯಲ್ಲಿರುವ ಪರಸಾ, ಬಾರಾ ಮತ್ತು ರೌತಹಟ ಜಿಲ್ಲೆಗಳಲ್ಲಿಯೂ ೩೦೦ಕ್ಕೂ ಹೆಚ್ಚು ಮದರಸಾಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿನ ೪೫ ಮದರಸಾಗಳು ಕಳೆದ ೫ ವರ್ಷಗಳಲ್ಲಿ ನಿರ್ಮಾಣವಾಗಿವೆ. ಇಲ್ಲಿನ ಮುಸಲ್ಮಾನರ ಜನಸಂಖ್ಯೆಯೂ ಹೆಚ್ಚಾಗಿದೆ.

೯. ಭಾರತೀಯ ಗುಪ್ತಚರ ವಿಭಾಗದ ಮಾಹಿತಿಯ ಅನುಸಾರ ಉತ್ತರಪ್ರದೇಶ, ಬಿಹಾರ, ಹರಿಯಾಣಾ ಮತ್ತು ಪಂಜಾಬ ಈ ರಾಜ್ಯಗಳಿಂದ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶ ಈ ದೇಶಗಳಿಗೆ ಹೋಗಲು ಮುಸಲ್ಮಾನರಿಗಾಗಿ ಒಂದು ವಿಶೇಷ ಮಾರ್ಗವನ್ನು ಸಿದ್ಧಪಡಿಸಲಾಗುತ್ತಿದೆ. ಕಳೆದ ೧೦ ವರ್ಷಗಳಲ್ಲಿ ಇದೇ ಮಾರ್ಗದಿಂದ ನುಸುಳುಕೋರ ಮುಸಲ್ಮಾನರು ವಿವಿಧ ಪ್ರದೇಶಗಳನ್ನು ತಲುಪಿದ್ದಾರೆ ಮತ್ತು ಅವರು ವಾಸ್ತವ್ಯ ಹೂಡಿದರು.
೧೦. ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ಕೇವಲ ೫೦ ಕಿಲೋಮೀಟರಿನ ಕ್ಷೇತ್ರದಲ್ಲಿ ೩ ಮಸೀದಿಗಳ ನಿರ್ಮಾಣಕ್ಕಾಗಿ ಕಾಶ್ಮೀರದ ಮೂಲಕ ಆರ್ಥಿಕ ಸಹಾಯ ಮಾಡಲಾಗಿದೆ.

೧೧. ಕೇರಳದ ‘ರಿಲೀಫ್‌ ಅಂಡ್‌ ಚಾರಿಟೇಬಲ್‌ ಫೌಂಡೇಶನ್‌ ಆಫ್‌ ಇಂಡಿಯಾ’ವು ೨೦೧೯ರಲ್ಲಿ ಪಂಜಾಬಿನಲ್ಲಿ ಮಸೀದಿಯನ್ನು ಕಟ್ಟಿಸಿದೆ. ಈ ಸಂಸ್ಥೆಯು ಕಾಶ್ಮೀರದ ಬಾರಾಮುಲ್ಲಾದಿಂದ ೨ ಜನರ ಮೂಲಕ ಇದಕ್ಕಾಗಿ ಹಣವನ್ನು ಕಳಿಸಿತ್ತು. ಈ ಸಂಸ್ಥೆಯು ಮಸೀದಿಯನ್ನು ಕಟ್ಟಲು ವಿದೇಶದಿಂದ ೭೦ ಕೋಟಿ ರೂಪಾಯಿ ಸಂಗ್ರಹಿಸಿತ್ತು.