ಬಾಂಗ್ಲಾದೇಶದಲ್ಲಿ ಕಟ್ಟರತೆಯನ್ನು ವಿರೋಧಿಸಿದ ಪ್ರಾಧ್ಯಾಪಕನನ್ನು ಕೊಂದ ೪ ಜಿಹಾದಿ ಭಯೋತ್ಪಾದಕರಿಗೆ ಮರಣದಂಡನೆ !

ಢಾಕಾ (ಬಾಂಗ್ಲಾದೇಶ) – ಇಲ್ಲಿಯ ಒಂದು ಸ್ಥಳೀಯ ನ್ಯಾಯಾಲಯವು ವಿಶ್ವವಿದ್ಯಾಲಯದ ಪ್ರಸಿದ್ಧ ಲೇಖಕ ಹಾಗೂ ಸಾಹಿತಿ ಪ್ರಾ. ಹುಮಾಯೂ ಆಜಾದ್ ಹತ್ಯೆಗೆ ಸಂಬಂಧಿಸಿದಂತೆ ೧೮ ವರ್ಷಗಳ ಹಿಂದಿನ ಪ್ರಕರಣದಲ್ಲಿ ನಾಲ್ವರು ಜಿಹಾದಿ ಭಯೋತ್ಪಾದಕರಿಗೆ ಮರಣದಂಡನೆ ವಿದಿಸಿದೆ. ಎಲ್ಲಾ ಅಪರಾಧಿಗಳು ನಿಷೇಧಿತ ‘ಜಮಾತ-ಉಲ್-ಮುಜಾಹಿದಿನ್ ಬಾಂಗ್ಲಾದೇಶ’ (ಜೆ.ಎಂ.ಬಿ.) ಈ ಜಿಹಾದಿ ಸಂಘಟನೆಯ ಸದಸ್ಯರಾಗಿದ್ದರು. ಪ್ರಾ. ಹುಮಾಯೂ ಆಜಾದ್ ಅವರನ್ನು ಫೆಬ್ರವರಿ ೨೦೦೪ ರಲ್ಲಿ ಢಾಕಾ ವಿಶ್ವವಿದ್ಯಾಲಯದ ಪರಿಸರದಲ್ಲಿ ಚಾಕುವಿನಿಂದ ಇರಿದು ಕೊಲ್ಲಲಾಗಿತ್ತು.

ಕಟ್ಟರತೆಯ ಸಿದ್ಧಾಂತವನ್ನು ಪ್ರಚಾರ ಮಾಡುವ ಜೆ.ಎಂ.ಬಿ. ಮತ್ತು ಇತರ ಭಯೋತ್ಪಾದಕ ಸಂಘಟನೆಗಳನ್ನು ಪ್ರಾ. ಆಜಾದ್ ಬರವಣಿಗೆ ಮೂಲಕ ಪ್ರತಿಭಟಿಸುತ್ತಿದ್ದರು. ಆಕ್ರಮಣಕ್ಕೆ ಕೆಲವು ದಿನಗಳ ಮೊದಲು ಅವರು ಬರೆದ ಪುಸ್ತಕವು ೧೯೭೧ ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯದ ಸಮಯದಲ್ಲಿ ಪಾಕಿಸ್ತಾನಿ ಅಧಿಕಾರಿಗಳ ಪಾತ್ರವನ್ನು ಟೀಕಿಸಿದ್ದರು.