ವಾಯುಮಾಲಿನ್ಯದಿಂದ ಪ್ರತಿ ನಿಮಿಷಕ್ಕೆ ಜಗತ್ತಿನ ೧೩ ಜನರು ಮರಣೋನ್ಮುಖಿ !

‘ವಾಯುಮಾಲಿನ್ಯ’ವು ಜಗತ್ತಿನಲ್ಲಿನ ಸಾವಿನ ಮುಖ್ಯ ಕಾರಣವಾಗಿದ್ದು, ಇದರಿಂದ ಪ್ರತಿವರ್ಷ ೭೦ ಲಕ್ಷಕ್ಕಿಂತ ಅಧಿಕ ಜನರು ಪ್ರಾಣ ಕಳೆದುಕೊಳ್ಳುತ್ತಾರೆ !

ವಿಜ್ಞಾನವು ಮನುಷ್ಯನಿಗೆ ಸಹಾಯಕವಾಗುವುದರ ಬದಲಾಗಿ ವಿನಾಶಕಾರಿಯಾಗುತ್ತಿದೆ, ಎಂದು ಈ ಅಂಕಿ-ಅಂಶಗಳಿಂದ ಸಿದ್ಧಗೊಳ್ಳುತ್ತಿದೆ ! ಸನಾತನ ಧರ್ಮವನ್ನು ಪಾಲಿಸಿ ಭೌತಿಕ ಪ್ರಗತಿಯನ್ನು ಸಾಧಿಸುವುದೊಂದೇ ಈ ಭಯಾನಕ ಜಗತ್ತಿನ ಸಮಸ್ಯೆಗೆ ಏಕೈಕ ಪರಿಹಾರವೆಂದು ತಿಳಿಯಿರಿ !

ಜಗತ್ತಿನ ವಾಯುಮಾಲಿನ್ಯದ ಅಪಾಯಕಾರಿ ಅಂಕಿ-ಅಂಶಗಳು !

ವಾಯುಮಾಲಿನ್ಯವು ಜಗತ್ತಿನಲ್ಲಿ ಸಾವಿಗೆ ಪ್ರಮುಖ ಕಾರಣ !

ಹೊರಗಿನ ಮತ್ತು ಮನೆಯೊಳಗಿನ ವಾಯು ಮಾಲಿನ್ಯದಿಂದ ಪ್ರತಿ ವರ್ಷ ೭೦ ಲಕ್ಷಕ್ಕಿಂತ ಅಧಿಕ ಜನರ ಸಾವು !

ಜಗತ್ತಿನ ಶೇ. ೯೧ ರಷ್ಟು ಜನಸಂಖ್ಯೆಯು ವಾಯು ಮಾಲಿನ್ಯದ ಅತ್ಯುಚ್ಚ ಮಟ್ಟದ ಕ್ಷೇತ್ರದಲ್ಲಿ ವಾಸ್ತವ್ಯ. ಇದು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬಂದಿದೆ.

ಅಡುಗೆಮನೆಯಿಂದ ಹೊರ ಸೂಸುವ ಹೊಗೆಯಿಂದ ಪ್ರತಿವರ್ಷ ೩೮ ಲಕ್ಷ ಜನರ ಅರೆಕಾಲಿಕ ಸಾವು !

ಜಿನೀವಾ (ಸ್ವಿಡ್ಜರಲ್ಯಾಂಡ) – ಜಗತ್ತಿನಾದ್ಯಂತ ವಾಯುಮಾಲಿನ್ಯ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ಪುಪ್ಪುಸದ ಕರ್ಕರೋಗ, ಹೃದಯವಿಕಾರ ಮತ್ತು ಪಾರ್ಶ್ವವಾಯುಗಳಂತಹ ಗಂಭೀರ ರೋಗಗಳ ಅಪಾಯವೂ ಹೆಚ್ಚಾಗಿದೆ. ಇದರಿಂದ ಪ್ರತಿಯೊಂದು ನಿಮಿಷಕ್ಕೆ ಕಡಿಮೆಯೆಂದರೂ ೧೩ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ(‘ಡಬ್ಲ್ಯೂ.ಎಚ್.ಓ.’ವು) ಟ್ವೀಟ ಮಾಡಿ ಈ ಅಪಾಯಕಾರಿ ಮಾಹಿತಿಯನ್ನು ನೀಡಿದೆ.
ಎಣ್ಣೆ, ಕಲ್ಲಿದ್ದಲು ಮತ್ತು ನೈಸರ್ಗಿಕ ವಾಯುಗಳಂತಹ ಇಂಧನಗಳನ್ನು ಸುಡುವುದರಿಂದ ವಾಯುಮಾಲಿನ್ಯ ಆಗುತ್ತದೆ ಹಾಗೂ ಅತೀ ಶೀಘ್ರವಾಗಿ ನಿಲ್ಲಿಸುವ ಆವಶ್ಯಕತೆ ಇದೆಯೆಂದು ಸಂಘಟನೆಯು ಸೂಚಿಸಿದೆ.

ವಾಯುಮಾಲಿನ್ಯ ಕಡಿಮೆಗೊಳಿಸಲೇಬೇಕು ! – ಡಬ್ಲ್ಯೂ.ಎಚ್.ಓ.

‘ಕೊರೊನಾ ಕಾಲದಲ್ಲಿ ‘ನಮಗೆ ನಮ್ಮ ಪುಪ್ಪುಸ ಎಷ್ಟು ಅಶಕ್ತವಿದೆ’ ಎನ್ನುವುದು ಅನುಭವಕ್ಕೆ ಬಂದಿದೆ. ಕೊರೊನಾ ಇದು ಶ್ವಾಸ ಮತ್ತು ಪುಪ್ಪುಸಗಳಿಗೆ ಸಂಬಂಧಿಸಿದ ರೋಗವಾಗಿತ್ತು. ಯಾರ ಪುಪ್ಪುಸ ಅಶಕ್ತ
ಇದೆಯೋ, ಅವನಿಗೆ ಕೊರೊನಾ ಬಂದಾಗ ಅದರೊಂದಿಗೆ ಹೋರಾಡಬೇಕಾಗುತ್ತಿತ್ತು. ಇದರಿಂದ ಮುಂದಿನ ರೋಗದಿಂದ ರಕ್ಷಿಸಿಕೊಳ್ಳಲು ವಾಯು ಮಾಲಿನ್ಯವನ್ನು ಕಡಿಮೆ ಮಾಡಲೇ ಬೇಕಾಗಿದೆ’, ಎಂದೂ ಕೂಡ ವಿಶ್ವ ಆರೋಗ್ಯ ಸಂಘಟನೆಯು ತಿಳಿಸಿದೆ.