ರಷ್ಯಾವು ಉಕ್ರೇನ ಮೇಲೆ ಪರಮಾಣು ಬಾಂಬ ಹಾಕುವ ಸಾಧ್ಯತೆ !

ಅಮೇರಿಕಾದ ಗುಪ್ತಚರ ಸಂಸ್ಥೆಯ ಮುಖ್ಯಸ್ಥರ ಹೇಳಿಕೆ !

ಮಾಸ್ಕೋ (ರಷ್ಯಾ) – ರಷ್ಯಾ ಮತ್ತು ಉಕ್ರೇನ ನಡುವಿನ ಯುದ್ಧ ನಡೆದು ೫೦ ದಿನಗಳಿಗಿಂತ ಹೆಚ್ಚು ಕಳೆದಿದೆ, ಆದರೂ ರಷ್ಯಾಗೆ ಉಕ್ರೇನನ್ನು ಸೋಲಿಸಲಾಗಲಿಲ್ಲ. ಈ ಹಿನ್ನೆಲೆಯಲ್ಲಿ ರಷ್ಯಾವು ಉಕ್ರೇನ ಮೇಲೆ ಪರಮಾಣು ಬಾಂಬ ಹಾಕುವ ಸಾಧ್ಯತೆಯನ್ನು ಪರಿಗಣಿಸುತ್ತಿದೆ. ಅಮೇರಿಕಾದ ಗುಪ್ತಚರ ಸಂಸ್ಥೆ ಸಿಐಒದ ಮುಖ್ಯಸ್ಥ ವಿಲಿಯಮ ಬರ್ನ್ಸ ಈ ಸಾಧ್ಯತೆಯನ್ನು ಹೇಳಿದ್ದಾರೆ. ಅವರು, ರಷ್ಯಾದ ಸೇನೆಗೆ ಅನೇಕ ಸ್ಥಳಗಳಲ್ಲಿ ಬಲವಾದ ಪ್ರತ್ಯುತ್ತರ ಸಿಗುತ್ತಿದೆ. ಇದರಿಂದ ರಷ್ಯಾದ ಅಧ್ಯಕ್ಷ ವ್ಲಾದಿಮಿರ ಪುತಿನ ಇವರು ಹತಾಶರಾಗಿದ್ದಾರೆ. ಆದ್ದರಿಂದ ರಷ್ಯಾ ಕಡೆಯಿಂದ ಪರಮಾಣು ಬಾಂಬನ್ನು ಬಳಸಬಹುದು ಎಂದು ಹೇಳಿದ್ದಾರೆ.