ಪಾಕಿಸ್ತಾನವು ಅಫಗಾನಿಸ್ತಾನದ ಮೇಲೆ ನಡೆಸಿದ ವಾಯುದಾಳಿಯಲ್ಲಿ ೩೦ ಜನರ ಸಾವು

ಪಾಕಿಸ್ತಾನದ ಸೈನ್ಯದ ಮೇಲೆ ಭಯೋತ್ಪಾದಕರ ದಾಳಿಗೆ ಪಾಕಿಸ್ತಾನದ ಪ್ರತ್ಯುತ್ತರ

ಪಾಕಿಸ್ತಾನವು ತನ್ನ ಸೈನ್ಯದ ಮೇಲೆ ದಾಳಿ ನಡೆಸುವ ಭಯೋತ್ಪಾದಕರ ಮೇಲೆ ಕಾರ್ಯಾಚರಣೆ ಮಾಡಬಹುದಾದರೆ ಪಾಕಿಸ್ತಾನದ ಭಯೋತ್ಪಾದಕರು ಭಾರತದ ಮೇಲೆ ಕಾರ್ಯಾಚರಣೆ ನಡೆಸಿದಾಗ ಭಾರತವು ಪಾಕಿಸ್ತಾನಕ್ಕೆ ಹೋಗಿ ಸತತವಾಗಿ ಈ ರೀತಿಯ ಕಾರ್ಯಾಚರಣೆ ಏಕೆ ಮಾಡಬಾರದು ?

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ವಾಯುದಳವು ಅಫಗಾನಿಸ್ತಾನದ ಖೊಸ್ತ ಪ್ರಾಂತ್ಯದಲ್ಲಿನ ಸಪುರಾ ಜಿಲ್ಲೆ ಹಾಗೂ ಕುನಾರ ಪ್ರಾಂತ್ಯದಲ್ಲಿ ನಡೆಸಿದ ದಾಳಿಯಲ್ಲಿ ೩೦ ಜನರು ಮೃತಪಟ್ಟಿದ್ದಾರೆ. ಅವರ ಪೈಕಿ ಮಹಿಳೆಯರು ಹಾಗೂ ಮಕ್ಕಳ ಸಮಾವೇಶವಿತ್ತು. ಉಗ್ರಗಾಮಿಗಳನ್ನು ನಾಶ ಮಾಡಲು ಈ ಕಾರ್ಯಾಚರಣೆ ನಡೆಸಿರುವುದಾಗಿ ಪಾಕಿಸ್ತಾನವು ಹೇಳಿಕೊಂಡಿದೆ. ಪಾಕಿಸ್ತಾನದ ವಾಯುದಳದ ೨೬ ವಿಮಾನಗಳು ಈ ದಾಳಿ ನಡೆಸಿದವು.

ಕೆಲವು ದಿನಗಳ ಹಿಂದೆ ಭಯೋತ್ಪಾದಕರು ಪಾಕಿಸ್ತಾನದ ಖೈಬರ ಪಖ್ತುನಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನದ ಸೈನ್ಯದ ಮೇಲೆ ನಡೆಸಿದ ದಾಳಿಯಲ್ಲಿ ೭ ಸೈನಿಕರು ಮೃತಪಟ್ಟಿದ್ದರು. ಮತ್ತೊಂದು ದಾಳಿಯಲ್ಲಿ ಓರ್ವ ಸೈನಿಕನು ಸಾವಿಗೀಡಾದನು. ಆದ್ದರಿಂದ ಪಾಕಿಸ್ತಾನವು ಈ ಕಾರ್ಯಾಚರಣೆ ನಡೆಸಿತು.