ಎರಡು ವ್ಯಕ್ತಿಗಳ ನಡುವಿನ ಸಂಬಂಧಕ್ಕಿಂತಲೂ ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧವು ಉತ್ತಮ ! – ಅಮೇರಿಕಾ

ಯಾವುದೇ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಸಾಧ್ಯವಿಲ್ಲ ಅಷ್ಟು ಉತ್ತಮ ಸಂಬಂಧವು ಭಾರತ ಮತ್ತು ಅಮೇರಿಕಾ ನಡುವೆ ಇದೆ, ಎಂದು ‘ಯು.ಎಸ್. ನ್ಯಾಶನಲ್ ಸೆಕ್ಯುರಿಟಿ ಕೌಂನ್ಸಿಲ್’ನ ‘ಇಂಡೋ-ಪೆಸಿಫಿಕ್ ಕೊರ್ಡಿನೇಟರ್’ ಆಗಿರುವ ಕರ್ಟ್ ಕ್ಯಾಂಪ್ಬೆಲ್ ಇವರು ಹೇಳಿದರು.

ಪಾಕಿಸ್ತಾನಿ ಡ್ರೋನ್ ಮೂಲಕ ಕಳುಹಿಸಿದ್ದ ೨೧ ಕೋಟಿ ರೂಪಾಯಿಗಳ ಹೆರಾಯಿನ್ ವಶ

ಕಳ್ಳಸಾಗಣೆದಾರರು ಪಾಕಿಸ್ತಾನದಿಂದ ಬಚ್ಚಿವಿಂಡ್ ಗ್ರಾಮಕ್ಕೆ ಡ್ರೋನ್ ಕಳಿಸಿದ್ದನ್ನು ಭಾರತೀಯ ಸೈನಿಕರು ಗುಂಡು ಹಾರಿಸಿ ಓಡಿಸಿದರು. ಬಳಿಕ ಶೋಧ ಕಾರ್ಯಾಚರಣೆ ನಡೆಸಿದನಂತರ ೨೧ ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡರು.

ಇಂದಿನ ಭಾರತ ಪ್ರತ್ಯುತ್ತರ ನೀಡುವ ದೇಶ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ಯಾವ ಶಕ್ತಿಗಳು ದಶಕಗಳಿಂದ ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದವು, ಅವರಿಗೆ ಈಗಿನ ಭಾರತವು ವಿಭಿನ್ನವಾಗಿದೆ, ಅದು ಪ್ರತ್ಯುತ್ತರ ನೀಡುತ್ತದೆ ಎಂಬುದು ಅರಿವಾಗಿದೆ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಅಲ್ಲಿ ಭಾರತೀಯ ಮೂಲದ ನಾಗರಿಕರಿಗಾಗಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

ಭಾರತದ ಐತಿಹಾಸಿಕ ತೈಲಸಮೃದ್ಧಿ ಮತ್ತು ಆಕ್ರಮಣಕಾರಿ ಮುತ್ಸದ್ದಿತನ !

ಯುರೋಪ್ ದೇಶಗಳು ಮತ್ತು ಅಮೇರಿಕಾ ರಷ್ಯಾದ ಮೇಲೆ ನಿರ್ಬಂಧ ಹೇರಿದ ನಂತರ ಈ ದೇಶಗಳು ಭಾರತ ರಷ್ಯಾದಿಂದ ಆಮದು ಮಾಡುವ ತೈಲವನ್ನು ನಿಲ್ಲಿಸಬೇಕೆಂದು ಒತ್ತಡ ಹೇರುತ್ತಿವೆ. ಹೀಗಿದ್ದರೂ ಭಾರತ ರಷ್ಯಾದಿಂದ ತೈಲ ಆಮದು ಮಾಡುತ್ತಿದೆ.

ಭಾರತ ನಿಜವಾಗಿಯೂ ಜಗತ್ತಿನ ವಿಶ್ವಗುರು ! – ಉಕ್ರೇನ್ ನ ಉಪ ವಿದೇಶಾಂಗ ಸಚಿವ ಎಮೀನ್ ಝಾಪರೋವಾ

ಅಂತರಾಷ್ಟ್ರೀಯ ಸಮಸ್ಯೆಯ ಬಗ್ಗೆ ಭಾರತ ತೆಗೆದುಕೊಂಡಿರುವ ನಿಲುವು ನೋಡುತ್ತಿದ್ದರೆ ಭಾರತ ನಿಜವಾಗಿಯೂ ಜಗತ್ತಿನ ವಿಶ್ವಗುರು ಆಗಿದೆ. ಮೌಲ್ಯ ಮತ್ತು ನ್ಯಾಯಕ್ಕಾಗಿ ಹೋರಾಡುವ ಉಕ್ರೇನಿನಲ್ಲಿ ನಮಗೆ ಇದೆ ಅರಿವಿಗೆ ಬಂದಿದೆ, ಎಂದು ಉಕ್ರೇನ್ ನ ಉಪ ವಿದೇಶಾಂಗ ಸಚಿವ ಎಮೀನ ಝಾಪರೋವಾ ಇವರು ಹೇಳಿಕೆ ನೀಡಿದರು.

ಗಡಿಯಾಚೆಯಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಕಳುಹಿಸುವ ದೇಶವನ್ನು ಹೊಣೆಗಾರರನ್ನಾಗಿ ಮಾಡಬೇಕು !

ಕೆಲವು ದೇಶಗಳು ಭಯೋತ್ಪಾದಕರೊಂದಿಗೆ ಕೈಜೋಡಿಸುತ್ತಿದೆ. ಅವರು ಡ್ರೋನ ಮೂಲಕ ಅಕ್ರಮವಾಗಿ ಗಡಿಯಾಚೆಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿದ್ದಾರೆ. ಇದು ಅತ್ಯಂತ ಗಂಭೀರವಾದ ಸವಾಲು ಎದುರಾಗಿದೆ. ಇಂತಹ ದೇಶವು ಮಾಡಿರುವ ಈ ಕೃತ್ಯಕ್ಕೆ ಅವರನ್ನು ಹೊಣೆಗಾರರನ್ನಾಗಿ ಮಾಡುವ ಅವಶ್ಯಕತೆಯಿದೆಯೆಂದು ಭಾರತ ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ಪಾಕಿಸ್ತಾನದ ಹೆಸರನ್ನು ಹೇಳದೇ ಆರೋಪಿಸಿದೆ.

ಭಾರತದಲ್ಲಿ ಮುಸಲ್ಮಾನರ ಮೇಲೆ ಅತ್ಯಾಚಾರ ಆಗುತ್ತಿದ್ದರೆ, ಅವರ ಜನಸಂಖ್ಯೆ ಹೆಚ್ಚಳವಾಗುತ್ತಿತ್ತೇ ? – ಹಣಕಾಸು ಸಚಿವೆ ಸೀತಾರಾಮನ್

ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತವಾಗಿದ್ದಾರೆ, ಎನ್ನುವಂತಹ ಯಾವತ್ತೂ ಭಾರತಕ್ಕೆ ಬಾರದಿರುವಂತಹ ಜನರು ಚಿತ್ರಣವನ್ನು ಬಿಂಬಿಸುತ್ತಿದ್ದಾರೆ. ಭಾರತದಲ್ಲಿ ಮುಸಲ್ಮಾನರ ವಿರುದ್ಧ ಹಿಂಸಾಚಾರ ನಡೆಯುತ್ತಿದ್ದರೆ, ಅವರ ಜನಸಂಖ್ಯೆಯಲ್ಲಿ ಇಷ್ಟು ಹೆಚ್ಚಳವಾಗಲು ಸಾಧ್ಯವಿತ್ತೇ?

ಭಾರತವು ಬ್ರಿಟನ್ ನೊಂದಿಗೆ ವ್ಯಾಪಾರ ವಿಷಯದಲ್ಲಿ ಚರ್ಚೆಯನ್ನು ಸ್ಥಗಿತಗೊಳಿಸಿರುವ ವಾರ್ತೆ ಸುಳ್ಳು – ಭಾರತದ ವಿದೇಶಾಂಗ ಸಚಿವಾಲಯದಿಂದ ಸ್ಪಷ್ಟೀಕರಣ

ಭಾರತವು ಬ್ರಿಟನ್ ನೊಂದಿಗೆ ವ್ಯಾಪಾರ ವಿಷಯದ ಚರ್ಚೆಯನ್ನು ಸ್ಥಗಿತಗೊಳಿಸಿರುವ ಸುದ್ದಿಯನ್ನು ಭಾರತದ ವಿದೇಶಾಂಗ ಸಚಿವಾಲಯ ತಿರಸ್ಕರಿಸಿದೆ. `ಇಂತಹ ವಾರ್ತೆಗಳು ಸಂಪೂರ್ಣವಾಗಿ ನಿರಾಧಾರವಾಗಿದೆ’ ಎಂದು ಭಾರತ ತಿಳಿಸಿದೆ.

ಸಿಂಗಾಪುರದಲ್ಲಿ ಭಾರತೀಯ ಮೂಲದ ಯುವಕನೊಬ್ಬನನ್ನು ತಳ್ಳಿದರಿಂದ ಮೆಟ್ಟಿಲಿನಿಂದ ಬಿದ್ದು ಸಾವು !

ಮೃತ ಯುವಕನ ಹೆಸರು ತೇವೇಂದ್ರನ್ ಷಣ್ಮುಗಂ (೩೪ ವರ್ಷ) ಎಂದು ಗುರುತಿಸಲಾಗಿದೆ.

ಭಾರತದ ನೋಟಿಸ್ ನಂತರ, ಪಾಕಿಸ್ತಾನವು ಸಿಂಧೂ ಜಲ ಒಪ್ಪಂದದ ತಿದ್ದುಪಡೆಯ ಬಗ್ಗೆ ಚರ್ಚಿಸಲು ಸಿದ್ಧ !

೧೯೬೦ ರ ಸಿಂಧೂ ಜಲ ಒಪ್ಪಂದದ ತಿದ್ದುಪಡಿಯ ಬೇಡಿಕೆಗೆ ಸಂಬಂಧಿಸಿದಂತೆ ಪಾಕಿಸ್ತಾನವು ನೋಟಿಸ್‌ಗೆ ಉತ್ತರವನ್ನು ಕಳುಹಿಸಿದೆ. ಹಾಲೆಂಡ್‌ನ ಹೇಗ್‌ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ಆಲಿಕೆಯ ಸಂದರ್ಭದಲ್ಲಿ ಭಾರತವು ಈ ವರ್ಷದ ಜನವರಿ ೨೮ ರಂದು ಪಾಕಿಸ್ತಾನಕ್ಕೆ ನೋಟಿಸ್ ಕಳುಹಿಸಿತ್ತು.