ಕಂಪಾಲಾ (ಉಗಾಂಡಾ) – ಯಾವ ಶಕ್ತಿಗಳು ದಶಕಗಳಿಂದ ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದವು, ಅವರಿಗೆ ಈಗಿನ ಭಾರತವು ವಿಭಿನ್ನವಾಗಿದೆ, ಅದು ಪ್ರತ್ಯುತ್ತರ ನೀಡುತ್ತದೆ ಎಂಬುದು ಅರಿವಾಗಿದೆ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಅಲ್ಲಿ ಭಾರತೀಯ ಮೂಲದ ನಾಗರಿಕರಿಗಾಗಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು. ಈ ಸಮಯದಲ್ಲಿ ಅವರು ಪಾಕಿಸ್ತಾನದ ವಿರುದ್ಧದಲ್ಲಿ ಮಾಡಲಾದ ಸರ್ಜಿಕಲ್ ಮತ್ತು ಏರ್ ಸ್ಟ್ರೈಕ್ ಬಗ್ಗೆಯೂ ಉಲ್ಲೇಖಿಸಿದರು. ಡಾ. ಜೈಶಂಕರ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ಇಂದು ಭಾರತದ ನೀತಿಗಳು ಭಾರತದ ಹೊರಗಿನ ಜನರ ಒತ್ತಡಕ್ಕೆ ಒಳಗಾಗುವುದಿಲ್ಲ ಇದು ಸ್ವತಂತ್ರ ಭಾರತವಾಗಿದೆ. ಭಾರತ ಈಗ ‘ನೀವು ಯಾರಿಂದ ತೈಲ ಖರೀದಿಸಬೇಕು ? ಮತ್ತು ಯಾರಿಂದ ತೆಗೆದುಕೊಳ್ಳಬಾರದು ?’ ಎಂದು ಹೇಳುತ್ತಿರುವ ದೇಶಗಳ ಒತ್ತಡಕ್ಕೆ ಒಳಗಾಗುವುದಿಲ್ಲ. ಭಾರತದ ನಾಗರಿಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ತೈಲ ವಿಷಯದಲ್ಲಿ ಭಾರತವು ಅಮೇರಿಕಾ ಮತ್ತು ರಷ್ಯಾದೊಂದಿಗೆ ಸಮತೋಲಿತ ರೀತಿಯಲ್ಲಿ ವ್ಯವಹರಿಸುತ್ತಿದೆ. ಎರಡೂ ದೇಶಗಳಿಂದ ಭಾರತಕ್ಕೆ ಲಾಭವಾಗುತ್ತಿದೆ ಎಂದು ಹೇಳಿದರು.
A very productive Uganda visit. Here’s a visual of the podcast you heard. https://t.co/R1VsKvIDh5 pic.twitter.com/qhz306qDDd
— Dr. S. Jaishankar (@DrSJaishankar) April 14, 2023