ಭಾರತದಲ್ಲಿ ಮುಸಲ್ಮಾನರ ಮೇಲೆ ಅತ್ಯಾಚಾರ ಆಗುತ್ತಿದ್ದರೆ, ಅವರ ಜನಸಂಖ್ಯೆ ಹೆಚ್ಚಳವಾಗುತ್ತಿತ್ತೇ ? – ಹಣಕಾಸು ಸಚಿವೆ ಸೀತಾರಾಮನ್

  • ಭಾರತದಲ್ಲಿ ಮುಸಲ್ಮಾನರ ವಿರುದ್ಧ ಹಿಂಸಾಚಾರ ನಡೆಯುತ್ತಿರುವ ಆರೋಪವನ್ನು ನಿರಾಕರಿಸಿದ ಹಣಕಾಸು ಸಚಿವೆ ಸೀತಾರಾಮನ್

  • ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಹತ್ಯೆ ನಡೆಯುತ್ತಿರುವುದರಿಂದ ಅವರ ಸಂಖ್ಯೆ ಕುಸಿಯುತ್ತಿರುವುದು ಸ್ಪಷ್ಟ ಪಡಿಸಿದರು !

ವಾಶಿಂಗ್ಟನ್ (ಅಮೇರಿಕಾ) – ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತವಾಗಿದ್ದಾರೆ, ಎನ್ನುವಂತಹ ಯಾವತ್ತೂ ಭಾರತಕ್ಕೆ ಬಾರದಿರುವಂತಹ ಜನರು ಚಿತ್ರಣವನ್ನು ಬಿಂಬಿಸುತ್ತಿದ್ದಾರೆ. ಭಾರತದಲ್ಲಿ ಮುಸಲ್ಮಾನರ ವಿರುದ್ಧ ಹಿಂಸಾಚಾರ ನಡೆಯುತ್ತಿದ್ದರೆ, ಅವರ ಜನಸಂಖ್ಯೆಯಲ್ಲಿ ಇಷ್ಟು ಹೆಚ್ಚಳವಾಗಲು ಸಾಧ್ಯವಿತ್ತೇ? ಜಗತ್ತಿನ ಎರಡನೇ ಕ್ರಮಾಂಕದ ಜನಸಂಖ್ಯೆ ಭಾರತದಲ್ಲಿದೆಯೆಂದು ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು `ಪೀಟರಸನ್ ಇನ್ಸಟಿಟ್ಯೂಟ ಫಾರ್ ಇಂಟರನ್ಯಾಶನಲ್ ಇಕಾನಾಮಿಕ್ಸ’ ನಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುವಾಗ ಹೇಳಿದರು.

1. `ಇನ್ಸಟಿಟ್ಯೂಟ ಫಾರ ಇಂಟರನ್ಯಾಶನಲ್ ಇಕಾನಾಮಿಕ್ಸ,’ನ ಅಧ್ಯಕ್ಷ ಆಡಮ್ ಪೊಸೆನ ಇವರು, ಭಾರತ ಕೆಲವು ಧೋರಣೆಗಳು ಬಂಡವಾಳ ಹೂಡಿಕೆಯ ಮೇಲೆ ಪರಿಣಾಮ ಬೀರುತ್ತಿದೆಯೇ ? ಎಂದು ಪ್ರಶ್ನಿಸಿದಾಗ, ಸೀತಾರಾಮನ್ ಇವರು, ನಿಮ್ಮ ಈ ಪ್ರಶ್ನೆಗೆ ಉತ್ತರ ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲು ಬಂದಿರುವವರು ಮತ್ತು ಬರುತ್ತಿರುವವರಿಂದ ಸಿಗಬಹುದು ಎಂದ ಹೇಳಿದರು. ಒಂದು ವೇಳೆ ಯಾರಿಗಾದರೂ ಬಂಡವಾಳ ಹೂಡಿಕೆ ಮಾಡುವುದಿದ್ದರೆ, ಅವರಿಗೆ ನಾನು ಹೇಳುವುದೇನೆಂದರೆ, ಭಾರತಕ್ಕೆ ಬಂದು ಅಲ್ಲಿ ಏನು ನಡೆಯುತ್ತಿದೆಯೆನ್ನುವುದನ್ನು ಕಣ್ಣಾರೆ ನೋಡಿರಿ. ಆದರೆ, ಯಾವತ್ತೂ ಭಾರತ ಭೂಮಿಗೆ ಕಾಲಿಡದೇ ಭಾರತದ ವಿಷಯದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಜನರ ಅಭಿಪ್ರಾಯಗಳನ್ನು ಎಂದಿಗೂ ಕೇಳಬೇಡಿರಿ ಎಂದರು.

(ಸೌಜನ್ಯ : NDTV)

2. ಹಣಕಾಸು ಸಚಿವೆ ಸೀತಾರಾಮನ್ ಇವರು ತಮ್ಮ ಮಾತನ್ನು ಮುಂದುವರಿಸುತ್ತಾ, ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರ ಪರಿಸ್ಥಿತಿ ದಿನದಿಂದ ದಿನಕ್ಕೆ ಅತ್ಯಂತ ಗಂಭೀರವಾಗುತ್ತಿದೆ. ಅವರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಅವರ ಮೇಲೆ ಸಣ್ಣಪುಟ್ಟ ಆರೋಪಗಳನ್ನು ಮಾಡಿ ಅವರನ್ನು ಗಲ್ಲಿಗೇರಿಸಲಾಗುತ್ತಿದೆ. ಹೆಚ್ಚಿನ ಘಟನೆಗಳಲ್ಲಿ ಧರ್ಮನಿಂದನೆಯ ಹೆಸರಿನಲ್ಲಿ ವೈಯಕ್ತಿಕ ಸೇಡನ್ನು ತೀರಿಸಿಕೊಳ್ಳಲಾಗುತ್ತಿದೆ. ಇಂತಹ ಪ್ರಕರಣದಲ್ಲಿ ಪೀಡಿತರನ್ನು ತಕ್ಷಣವೇ ದೋಷಿಯೆಂದು ನಿರ್ಧರಿಸಲಾಗುತ್ತದೆ. ಇಂತಹ ಘಟನೆಗಳ ಬಗ್ಗೆ ವ್ಯವಸ್ಥಿತ ರೀತಿಯಲ್ಲಿ ತನಿಖೆಯೂ ನಡೆಯುವುದಿಲ್ಲ ಅಥವಾ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನೂ ನಡೆಸುವುದಿಲ್ಲ’ ಎಂದು ಹೇಳಿದರು.

3. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತು ಮುಂದುವರಿಸಿ, ಯಾವಾಗ ಭಾರತ ವಿಭಜನೆ ಆಯಿತೋ, ಆಗಲೇ ಪಾಕಿಸ್ತಾನ ಉದಯಿಸಿತು. ಪಾಕಿಸ್ತಾನ ತನ್ನನ್ನು `ಮುಸ್ಲಿಂ ದೇಶ’ ಎಂದು ಘೋಷಿಸಿತು. ಆ ಸಮಯದಲ್ಲಿ `ಅಲ್ಪಸಂಖ್ಯಾತರಿಗೆ ಸಂರಕ್ಷಣೆ ನೀಡಲಾಗುವುದು’ ಎಂದೂ ಹೇಳಿದ್ದರು. ಇಂದು ಅಲ್ಲಿ ವಾಸಿಸುತ್ತಿರುವ ಎಲ್ಲ ಅಲ್ಪಸಂಖ್ಯಾತ ಸಮುದಾಯದವರ ಜನಸಂಖ್ಯೆ ಕುಸಿಯುತ್ತಿದೆ. ಅವರು ಹತ್ಯೆಗೊಳಗಾಗುತ್ತಿದ್ದಾರೆ, ಅಲ್ಲಿರುವ ಕೆಲವು ಮುಸಲ್ಮಾನ ವರ್ಗದವರನ್ನೂ ಹತ್ಯೆ ಮಾಡಲಾಗುತ್ತಿದೆ. ಮುಹಾಜಿರ, ಶಿಯಾ ಮತ್ತು ಮುಖ್ಯ ವಾಹಿನಿಯಲ್ಲಿ ಸೇರ್ಪಡೆಗೊಳ್ಳದಿರುವ ಪ್ರತಿಯೊಂದು ವರ್ಗದವರ ವಿರುದ್ಧ ಹಿಂಸಾಚಾರ ನಡೆಯುತ್ತಿದೆ. ಇನ್ನೊಂದೆಡೆ ನಿಮಗೆ ಭಾರತದಲ್ಲಿ ಮುಸಲ್ಮಾನರು ತಮ್ಮ ವ್ಯವಹಾರಗಳನ್ನು ಮಾಡುತ್ತಿರುವುದು, ಅವರ ಮಕ್ಕಳು ಶಿಕ್ಷಣವನ್ನು ಪಡೆಯುತ್ತಿರುವುದು, ಸರಕಾರ ಅವರಿಗೆ ಶಿಷ್ಯವೇತನವನ್ನು ನೀಡುತ್ತಿರುವುದು ಕಂಡು ಬರುವುದು. ಒಂದು ವೇಳೆ ಸಂಪೂರ್ಣ ಭಾರತಾದ್ಯಂತ ಮುಸಲ್ಮಾನರ ವಿರುದ್ಧ ಹಿಂಸಾಚಾರ ನಡೆದಿದ್ದರೆ, ಅವರಿಗೆ ಅದರಿಂದ ದೊಡ್ಡ ಪೆಟ್ಟು ಆಗುತ್ತಿತ್ತು. ಆದುದರಿಂದ ಇಂತಹ ಹೇಳಿಕೆಗಳು ತಪ್ಪಾಗಿವೆಯೆನ್ನುವುದು ಸ್ಪಷ್ಟವಾಗುತ್ತದೆ. ಭಾರತದಲ್ಲಿ ಮುಸಲ್ಮಾನರ ಜನಸಂಖ್ಯೆ ಕಡಿಮೆಯಾಗಿದೆಯೇ ? ಅಥವಾ ಯಾವುದೇ ಒಂದು ಸಮುದಾಯದ ಜನರ ಮರಣದ ದರ ಹೆಚ್ಚಳವಾಗಿದೆಯೇ ? ಇಂತಹ ವರದಿಯನ್ನು ಯಾರು ಪ್ರಕಟಿಸುತ್ತಾರೆಯೋ, ಅವರನ್ನು ನಾನು ಭಾರತಕ್ಕೆ ಬಂದು ತಮ್ಮ ಹೇಳಿಕೆಯನ್ನು ಸಾಬೀತುಪಡಿಸಬೇಕೆಂದು ಕರೆ ನೀಡುತ್ತೇನೆ’ ಎಂದು ಹೇಳಿದರು.