ಭಾರತ ನಿಜವಾಗಿಯೂ ಜಗತ್ತಿನ ವಿಶ್ವಗುರು ! – ಉಕ್ರೇನ್ ನ ಉಪ ವಿದೇಶಾಂಗ ಸಚಿವ ಎಮೀನ್ ಝಾಪರೋವಾ

ಎಮಿನೆ ಝಾಪರೋವಾ ಉಕ್ರೇನ್ ನ ಮೊದಲ ಉಪ ವಿದೇಶಾಂಗ ಸಚಿವ

ನವ ದೆಹಲಿ – ಅಂತರಾಷ್ಟ್ರೀಯ ಸಮಸ್ಯೆಯ ಬಗ್ಗೆ ಭಾರತ ತೆಗೆದುಕೊಂಡಿರುವ ನಿಲುವು ನೋಡುತ್ತಿದ್ದರೆ ಭಾರತ ನಿಜವಾಗಿಯೂ ಜಗತ್ತಿನ ವಿಶ್ವಗುರು ಆಗಿದೆ. ಮೌಲ್ಯ ಮತ್ತು ನ್ಯಾಯಕ್ಕಾಗಿ ಹೋರಾಡುವ ಉಕ್ರೇನಿನಲ್ಲಿ ನಮಗೆ ಇದೆ ಅರಿವಿಗೆ ಬಂದಿದೆ, ಎಂದು ಉಕ್ರೇನ್ ನ ಉಪ ವಿದೇಶಾಂಗ ಸಚಿವ ಎಮೀನ ಝಾಪರೋವಾ ಇವರು ಹೇಳಿಕೆ ನೀಡಿದರು. ಅವರು ನಾಲ್ಕು ದಿನದ ಭಾರತ ಪ್ರವಾಸದಲ್ಲಿ ಇದ್ದರೆ. ‘ಯಾವ ಭೂಮಿ ಅನೇಕ ಋಷಿಗಳು, ಸಂತರು ಮತ್ತು ಗುರುಗಳಿಗೆ ಜನ್ಮ ನೀಡಿದೆ, ಆ ಭಾರತ ಭೂಮಿಗೆ ಭೇಟಿ ನೀಡಿದ ಆನಂದ ನನಗೆ ಸಿಕ್ಕಿದೆ. ಇಂದು ಭಾರತಕ್ಕೆ ವಿಶ್ವಗುರು, ವೈಶೀಕ ಶಿಕ್ಷಕ ಮತ್ತು ಮಧ್ಯಸ್ಥಿಕೆ ವಹಿಸುವ ಅವಶ್ಯಕತೆ ಇದೆ. ಉಕ್ರೇನಿಗೆ ಬೆಂಬಲ ನೀಡುವುದು, ಇದು ನಿಜವಾದ ‘ವಿಶ್ವಗುರು’ಗಾಗಿ ಯೋಗ್ಯ ಪರ್ಯಾಯವಾಗಿದೆ, ಎಂದು ಕೂಡ ಝಾಪರೋವಾ ಇವರು ಹೇಳಿದರು.

ಝಾಪರೋವಾ ಇವರು ವಿದೇಶಾಂಗ ಸಚಿವಾಲಯದ ಸಚಿವ ಸಂಜಯ್ ವರ್ಮಾ ಇವರನ್ನು ಭೇಟಿ ಮಾಡಿದರು. ಉಕ್ರೇನ್ ನ ರಾಷ್ಟ್ರಾಧ್ಯಕ್ಷ ಝೇಲೆಂಕ್ಸಿ ಇವರ ಶಾಂತಿ ಸೂತ್ರ ಮತ್ತು ಧಾನ್ಯ ಉಪಕ್ರಮಗಳಲ್ಲಿ ಸಹಭಾಗಿ ಆಗುವದಕ್ಕೆ ಅವರು ಭಾರತಕ್ಕೆ ಆಮಂತ್ರಿಸಿದರು. ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ನಂತರ ಪೂರ್ವ ಯುರೋಪಿಯನ್ ದೇಶದ ಮೊದಲ ಪ್ರತಿನಿಧಿಗಳ ಭಾರತಕ್ಕೆ ನೀಡಿರುವ ಮೊದಲ ಅಧಿಕೃತ ಭೇಟಿ ಇದಾಗಿದೆ. ಝಾಪರೋವಾ ಭಾರತದ ವಿದೇಶಾಂಗ ವ್ಯವಹಾರ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಮತ್ತು ಉಪರಾಷ್ಟ್ರೀಯ ಭದ್ರತಾ ಸಲಹೆಗಾರ ವಿಕ್ರಮ ಮಿಸ್ತ್ರಿ ಇವರನ್ನು ಭೇಟಿ ಮಾಡಿ ಅವರೊಂದಿಗೆ ಮಹತ್ವಪೂರ್ಣ ವಿಷಯಗಳ ಮೇಲೆ ಚರ್ಚೆ ನಡೆಸಿದರು.

(ಸೌಜನ್ಯ : ದಿ ಎಕನಾಮಿಕ್ ಟೈಮ್ಸ್)