ಭಾರತವು ಬ್ರಿಟನ್ ನೊಂದಿಗೆ ವ್ಯಾಪಾರ ವಿಷಯದಲ್ಲಿ ಚರ್ಚೆಯನ್ನು ಸ್ಥಗಿತಗೊಳಿಸಿರುವ ವಾರ್ತೆ ಸುಳ್ಳು – ಭಾರತದ ವಿದೇಶಾಂಗ ಸಚಿವಾಲಯದಿಂದ ಸ್ಪಷ್ಟೀಕರಣ

ಬ್ರಿಟನ್ ಪ್ರಧಾನಿ ರುಷಿ ಸುನಕ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ

ನವ ದೆಹಲಿ – ಭಾರತವು ಬ್ರಿಟನ್ ನೊಂದಿಗೆ ವ್ಯಾಪಾರ ವಿಷಯದ ಚರ್ಚೆಯನ್ನು ಸ್ಥಗಿತಗೊಳಿಸಿರುವ ಸುದ್ದಿಯನ್ನು ಭಾರತದ ವಿದೇಶಾಂಗ ಸಚಿವಾಲಯ ತಿರಸ್ಕರಿಸಿದೆ. `ಇಂತಹ ವಾರ್ತೆಗಳು ಸಂಪೂರ್ಣವಾಗಿ ನಿರಾಧಾರವಾಗಿದೆ’ ಎಂದು ಭಾರತ ತಿಳಿಸಿದೆ.

ಮಾರ್ಚನಲ್ಲಿ ಬ್ರಿಟನ್ ನಲ್ಲಿ ಖಲಿಸ್ತಾನಿಗಳು ಲಂಡನ್ ನ ಭಾರತೀಯ ಹೈ ಕಮೀಷನ್ ಕಚೇರಿಯ ಮೇಲೆ ದಾಳಿ ನಡೆಸಿದ್ದರು. ಆ ಸಮಯದಲ್ಲಿ ಬ್ರಿಟನ್ ಪೊಲೀಸರು ಹೈಕಮೀಷನ್ ಕಚೇರಿಗೆ ಭದ್ರತೆ ಒದಗಿಸುವಲ್ಲಿ ಮತ್ತು ಖಲಿಸ್ತಾನಿಗಳ ಮೇಲೆ ಕ್ರಮ ಕೈಕೊಳ್ಳುವಲ್ಲಿ ವಿಫಲರಾಗಿದ್ದರು. ಇದರಿಂದ ಭಾರತವು ಬ್ರಿಟನ್ ನೊಂದಿಗೆ ವ್ಯಾಪಾರ ವಹಿವಾಟಿನ ವಿಷಯದಲ್ಲಿ ಚರ್ಚೆ ಸ್ಥಗಿತಗೊಳಿಸಿರುವ ವಾರ್ತೆಯನ್ನು ಕೆಲವು ವಿದೇಶಿ ಮಾಧ್ಯಮಗಳು ಪ್ರಸಾರ ಮಾಡಿತ್ತು.