ಭಾರತದ ನೋಟಿಸ್ ನಂತರ, ಪಾಕಿಸ್ತಾನವು ಸಿಂಧೂ ಜಲ ಒಪ್ಪಂದದ ತಿದ್ದುಪಡೆಯ ಬಗ್ಗೆ ಚರ್ಚಿಸಲು ಸಿದ್ಧ !

ಇಸ್ಲಾಮಾಬಾದ್ (ಪಾಕಿಸ್ತಾನ) – ೧೯೬೦ ರ ಸಿಂಧೂ ಜಲ ಒಪ್ಪಂದದ ತಿದ್ದುಪಡಿಯ ಬೇಡಿಕೆಗೆ ಸಂಬಂಧಿಸಿದಂತೆ ಪಾಕಿಸ್ತಾನವು ನೋಟಿಸ್‌ಗೆ ಉತ್ತರವನ್ನು ಕಳುಹಿಸಿದೆ. ಹಾಲೆಂಡ್‌ನ ಹೇಗ್‌ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ಆಲಿಕೆಯ ಸಂದರ್ಭದಲ್ಲಿ ಭಾರತವು ಈ ವರ್ಷದ ಜನವರಿ ೨೮ ರಂದು ಪಾಕಿಸ್ತಾನಕ್ಕೆ ನೋಟಿಸ್ ಕಳುಹಿಸಿತ್ತು. ನೋಟಿಸ್‌ಗೆ ಉತ್ತರಿಸುತ್ತಾ ಪಾಕಿಸ್ತಾನವು, ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತದ ಅಭಿಪ್ರಾಯಗಳನ್ನು ಕೇಳಲು ಸಿದ್ಧರೆಂದು ಹೇಳಿದೆ.

೨೦೧೭ ರಿಂದ ೨೦೨೨ ರ ನಡುವೆ ಭಾರತವು ಒಪ್ಪಂದಕ್ಕೆ ಸಂಬಂಧಿಸಿದಂತೆ ೫ ಸಭೆಗಳನ್ನು ನಡೆಸಿತು. ಅದರಲ್ಲಿ ಭಾರತದ ಸೂತ್ರವನ್ನು ಪಾಕಿಸ್ತಾನ ಎಂದಿಗೂ ಒಪ್ಪಲಿಲ್ಲ. ಅದಕ್ಕಾಗಿಯೇ ಭಾರತವು ಪಾಕಿಸ್ತಾನಕ್ಕೆ ನೋಟಿಸ್ ಜಾರಿ ಮಾಡಿತ್ತು.

(ಸೌಜನ್ಯ : CNN News 18)