ಕೆಲವು ದೇಶಗಳು ಭಯೋತ್ಪಾದನೆಗೆ ನೀರು-ಗೊಬ್ಬರ ಎರೆಯುತ್ತಿವೆ !

ಭಯೋತ್ಪಾದಕರ ಕಾರ್ಯಾಚರಣೆಗಳಿಂದ ಅಂತರಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಗೆ ಹಾನಿಯಾಗಲಿದೆ. ಕೆಲವು ದೇಶಗಳು ‘ನಾವು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತೇವೆ ಎಂಬ ಸಾಮೂಹಿಕ ಸಂಕಲ್ಪವನ್ನು ಮಾಡಿದ್ದವು, ಆದರೆ ಈಗ ಆ ಸಂಕಲ್ಪವು ದುರ್ಬಲವಾಗಿದೆ. ಈ ದೇಶಗಳು ಭಯೋತ್ಪಾದನೆಗೆ ನೀರು-ಗೊಬ್ಬರ ಎರೆಯುತ್ತಿವೆ.

‘ತಾಲಿಬಾನ್‌ನ ನೇತೃತ್ವದಲ್ಲಿ ಅಫಗಾನಿ ಜನರಿಗೆ ಅಮೇರಿಕಾದಿಂದ ಸ್ವಾತಂತ್ರ್ಯ ಬೇಕಿತ್ತು (ಅಂತೆ) ! – ಸಮಾಜವಾದಿ ಪಕ್ಷದ ಸಂಸದ ಶಫೀಕುರ್ರ‍ಹಮಾನ ಬರ್ಕ್

ಅಫಗಾನಿಸ್ತಾನದಲ್ಲಿ ಬೀಡುಬಿಡಲು ಬಂದ ಅಮೇರಿಕಾ ಹಾಗೂ ರಶಿಯಾವನ್ನು ತಾಲಿಬಾನ್ ವಿರೋಧಿಸಿತ್ತು. ತಾಲಿಬಾನ್‌ನ ನೇತೃತ್ವದಲ್ಲಿ ಅಫಗಾನಿ ಜನರಿಗೆ ಅಮೇರಿಕಾದಿಂದ ಸ್ವಾತಂತ್ರ್ಯ ಬೇಕಿತ್ತು. ಅಫಗಾನಿಸ್ತಾನದ ಸ್ವಾತಂತ್ರ್ಯ ಅಲ್ಲಿನ ಜನರ ಆಂತರಿಕ ವಿಷವಾಗಿದೆ

೨೧೦೦ ರ ವೇಳೆಗೆ, ಮುಂಬಯಿ ಸೇರಿದಂತೆ ಭಾರತದ ಕರಾವಳಿಯ ೧೨ ನಗರಗಳು ನೀರಿನಲ್ಲಿ ಮುಳುಗಲಿವೆ !

ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದ ವರದಿಯ ಪ್ರಕಾರ, ಹವಾಮಾನದ ಬದಲಾವಣೆಯಿಂದಾಗುವ ವಿಪತ್ತಿನಿಂದಾಗಿ ಮುಂದಿನ ೮೦ ವರ್ಷಗಳಲ್ಲಿ ಅಂದರೆ ೨೧೦೦ರಲ್ಲಿ ಭಾರತದ ಕರಾವಳಿಯಲ್ಲಿ ಮುಂಬಯಿ ಸೇರಿದಂತೆ ೧೨ ನಗರಗಳು ೩ ಅಡಿಗಳಷ್ಟು ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ

ಹಿಂದೂ ಮಹಾಸಾಗರದಲ್ಲಿ ಉಷ್ಣತೆಯ ಹೆಚ್ಚಳದಿಂದ ಭಾರತದಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಬಹುದು ! – ವಿಶ್ವಸಂಸ್ಥೆಯ ವರದಿ

ವಿಶ್ವಸಂಸ್ಥೆಯ ‘ಇಂಟರಗವರ್ನಮೇಂಟಲ ಪನೇಲ ಆನ ಕ್ಲೈಮೇಟ ಚೇಂಜ’ನ (‘ಐ.ಪಿ.ಸಿ.ಸಿ.’ಯ) ೬ ನೇ ವರದಿ ‘ಕ್ಲೈಮೆಟ್ ಚೆಂಜ್ ೨೦೨೧ – ದಿ ಫಿಜಿಕಲ್ ಸೈನ್ಸ್ ಬೇಸಿಸ್’ ಪ್ರಕಟಿಸಲಾದಗಿದೆ. ಹಿಂದೂ ಮಹಾಸಾಗರದ ಉಷ್ಣತೆಯು ಹೆಚ್ಚಾಗುವುದರಿಂದ ಸಮುದ್ರದ ಮಟ್ಟ ಹೆಚ್ಚಾಗುತ್ತದೆ ಮತ್ತು ಕರಾವಳಿ ಪ್ರದೇಶಗಳಲ್ಲಿ ಆಗಾಗ ಪ್ರವಾಹ ಉಂಟಾಗುತ್ತದೆ ಎಂದು ಹೇಳಲಾಗಿದೆ.

ಕೊಡಗಿನಲ್ಲಿರುವ ‘ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ’ಕ್ಕೆ ‘ಫೀಲ್ಡ್ ಮಾರ್ಷಲ್ ಕಾರಿಯಪ್ಪ’ ಹೆಸರಿಡುವಂತೆ ಬೇಡಿಕೆ

ಸ್ಥಳಿಯರು ಕರ್ನಾಟಕದ ಮುಖ್ಯಮಂತ್ರಿ ಮತ್ತು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆಯುವ ಮೂಲಕ ‘ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ’ದ ಹೆಸರು ಬದಲಾಯಿಸಿ ‘ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಾಷ್ಟ್ರೀಯ ಉದ್ಯಾನವನ’ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ.

ತಾಲಿಬಾನವು ಗುರುದ್ವಾರದಲ್ಲಿನ ತೆಗೆದು ಹಾಕಿದ್ದ ಧ್ವಜವನ್ನು ಮತ್ತೆ ಹಾಕಿದರು !

ಅಫ್ಘನಿಸ್ತಾನದ ಪಕತಿಯಾ ಪ್ರದೇಶದ ಥಾಲ್ ಸಾಹಿಬ್ ಗುರುದ್ವಾರದಲ್ಲಿ ಹಾಕಲಾಗಿದ್ದ ಪವಿತ್ರ ಧ್ವಜವನ್ನು ತಾಲಿಬಾನಿಗಳು ತೆಗೆದಿದ್ದರು; ಆದರೆ ಅಂತರರಾಷ್ಟ್ರೀಯ ಒತ್ತಡದಿಂದಾಗಿ ತಾಲಿಬಾನವು ಅದನ್ನು ಮತ್ತೆ ಹಾಕಿದೆ. ಭಾರತವೂ ಕೂಡಾ ಧ್ವಜವನ್ನು ತೆಗೆದಿರುವ ಬಗ್ಗೆ ತೀರ್ವವಾಗಿ ಖಂಡಿಸಿತ್ತು.

ಭಾರತದ ೧೪ ಅಮೂಲ್ಯ ಮತ್ತು ಪ್ರಾಚೀನ ಕಲಾಕೃತಿಗಳನ್ನು ಹಿಂದಿರುಗಿಸಲಿರುವ ಆಸ್ಟ್ರೇಲಿಯಾ !

ಆಸ್ಟ್ರೇಲಿಯಾ ತನ್ನ ರಾಷ್ಟ್ರೀಯ ಕಲಾಕೃತಿ ಸಂಗ್ರಹಾಲಯದಲ್ಲಿರುವ ಭಾರತದ ೧೪ ಅತ್ಯಮೂಲ್ಯ ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಲಿದೆ. ಇದರಲ್ಲಿ ವಿಗ್ರಹಗಳು, ಚಿತ್ರಗಳು, ಛಾಯಾಚಿತ್ರಗಳು ಇತ್ಯಾದಿ ಒಳಗೊಂಡಿವೆ. ಇವುಗಳಲ್ಲಿ ಹಲವು ಕಲಾಕೃತಿಗಳು ೧೨ ನೇ ಶತಮಾನದಷ್ಟು ಹಳೆಯದಾಗಿವೆ.