ಗಡಿಯಾಚೆಯಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಕಳುಹಿಸುವ ದೇಶವನ್ನು ಹೊಣೆಗಾರರನ್ನಾಗಿ ಮಾಡಬೇಕು !

ವಿಶ್ವಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ಪಾಕಿಸ್ತಾನದ ಹೆಸರನ್ನು ಹೇಳದೇ ಆಗ್ರಹ ಪಡಿಸಿದ ಭಾರತ !

ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಂಬೋಜ್

ವಾಶಿಂಗ್ಟನ್ (ಅಮೇರಿಕಾ) – ಕೆಲವು ದೇಶಗಳು ಭಯೋತ್ಪಾದಕರೊಂದಿಗೆ ಕೈಜೋಡಿಸುತ್ತಿದೆ. ಅವರು ಡ್ರೋನ ಮೂಲಕ ಅಕ್ರಮವಾಗಿ ಗಡಿಯಾಚೆಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿದ್ದಾರೆ. ಇದು ಅತ್ಯಂತ ಗಂಭೀರವಾದ ಸವಾಲು ಎದುರಾಗಿದೆ. ಇಂತಹ ದೇಶವು ಮಾಡಿರುವ ಈ ಕೃತ್ಯಕ್ಕೆ ಅವರನ್ನು ಹೊಣೆಗಾರರನ್ನಾಗಿ ಮಾಡುವ ಅವಶ್ಯಕತೆಯಿದೆಯೆಂದು ಭಾರತ ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ಪಾಕಿಸ್ತಾನದ ಹೆಸರನ್ನು ಹೇಳದೇ ಆರೋಪಿಸಿದೆ. ವಿಶ್ವ ಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿರುವ ರಚಿರಾ ಕಂಬೋಜ ಇವರು ರಷ್ಯಾದ ಅಧ್ಯಕ್ಷತೆಯಲ್ಲಿ ನಡೆದ ಈ ಪರಿಷತ್ತಿನಲ್ಲಿ `ಅಂತರರಾಷ್ಟ್ರೀಯ ಶಾಂತತೆ ಮತ್ತು ಭದ್ರತೆಯ ಎದುರಿಗೆ ಇರುವ ಅಪಾಯಗಳು’ ಈ ವಿಷಯದ ಕುರಿತು ನಡೆದ ಚರ್ಚೆಯಲ್ಲಿ ಮೇಲಿನಂತೆ ವಿಷಯವನ್ನು ಮಂಡಿಸಿದರು. ಅಂತರರಾಷ್ಟ್ರೀಯ ಕಾನೂನು ಉಲ್ಲಂಘಿಸಿ ಶಸ್ತ್ರಾಸ್ತ್ರಗಳನ್ನು ಕಳುಹಿಸಿ ಭೂಮಿ ಮತ್ತು ರಾಜಕೀಯ ಒತ್ತಡವನ್ನು ಹೆಚ್ಚಿಸುವುದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದೂ ಅವರು ಹೇಳಿದರು.

ಸಂಪಾದಕರ ನಿಲುವು

ಭಾರತವು ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನದ ಹೆಸರನ್ನು ಹೇಳದೇ ಈ ರೀತಿ ಆಗ್ರಹಿಸುವುದು ಸೂಕ್ತವಲ್ಲ. ನೇರವಾಗಿ ಪಾಕಿಸ್ತಾನದ ಮೇಲೆ ಕ್ರಮ ಕೈಕೊಂಡು ಪಾಕಿಸ್ತಾನದ ಉಪಟಳವನ್ನು ತಡೆಯುವುದು ಆವಶ್ಯಕವಾಗಿದೆ ! ಇತರೆ ದೇಶಗಳು ವಿಶ್ವ ಸಂಸ್ಥೆಯಲ್ಲಿ ತಮ್ಮ ಗೋಳನ್ನು ಹೇಳಿಕೊಳ್ಳದೇ ಸ್ವತಃ ನೇರವಾಗಿ ಕ್ರಮವನ್ನು ಕೈಕೊಳ್ಳುತ್ತವೆ !