ಪಾಕಿಸ್ತಾನದಲ್ಲಿ ೧೨ ಜಿಹಾದಿ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ

ಅಮೇರಿಕಾದ ‘ಕಾಂಗ್ರೆಶನಲ ರಿಸರ್ಚ್ ಸರ್ವಿಸಸ (ಸೀ.ಆರ್.ಸೀ.) ಸಂಸ್ಥೆಯ ವರದಿಗೆ ಅನುಸಾರ ಜಗತ್ತಿನಾದ್ಯಂತ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳ ಪೈಕಿ ೧೨ ಸಂಘಟನೆಗಳು ಪಾಕಿಸ್ತಾನದಲ್ಲಿದೆ.

ಭಾರತ ಮತ್ತು ಅಪಘಾನಿಸ್ತಾನದ ನಡುವೆ ವಿಮಾನ ಸೇವೆ ಪುನಃ ಆರಂಭಿಸಬೇಕು ! ತಾಲಿಬಾನ್ ಸರಕಾರದಿಂದ ಭಾರತಕ್ಕೆ ಬೇಡಿಕೆ !

ಅಪಘಾನಿಸ್ತಾನದ ತಾಲಿಬಾನ ಸರಕಾರವು ಭಾರತದ ನಾಗರಿಕ ವಿಮಾನ ಯಾನ ನಿರ್ದೇಶಕರಿಗೆ ಪತ್ರ ಬರೆದು ಭಾರತ ಮತ್ತು ಅಪಘಾನಿಸ್ತಾನದ ನಡುವಿನ ವಿಮಾನ ಹಾರಾಟ ಸೇವೆ ಯನ್ನು ಪುನರಾರಂಭಿಸಬೇಕೆಂದು ಬೇಡಿಕೆಯನ್ನು ನೀಡಿದೆ.

ವಿವೇಕ ರಾಮ ಚೌಧರಿ ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಲಿದ್ದಾರೆ !

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ವಿವೇಕ ರಾಮ ಚೌಧರಿ ಇವರು ಆಯ್ಕೆಯಾಗಿದ್ದಾರೆ. ಪ್ರಸ್ತುತ ಮುಖ್ಯಸ್ಥ ಆರ್.ಕೆ.ಎಸ್. ಭದೌರಿಯಾ ಇವರು ಸೆಪ್ಟೆಂಬರ್ ೩೦ ರಂದು ನಿವೃತ್ತರಾಗಲಿದ್ದಾರೆ.

ಭಾರತದ ವಿರೋಧದ ಬಳಿಕ ‘ಕೊವಿಶಿಲ್ಡ ಲಸಿಕೆಯನ್ನು ಮಾನ್ಯ ಮಾಡಿದ ಬ್ರಿಟನ್

ಬ್ರಿಟನ ‘ಕೊವಿಶೀಲ್ಡನ ಎರಡು ಡೋಸ ಲಸಿಕೆ ಪಡೆದುಕೊಂಡಿದ್ದರೂ ‘ಅವರು ಲಸಿಕೆ ಪಡೆದುಕೊಂಡಿದ್ದಾರೆ, ಎಂದು ಒಪ್ಪಿಕೊಳ್ಳುವುದಿಲ್ಲವೆಂಬ ತೀರ್ಮಾನ ತೆಗೆದುಕೊಂಡಿತ್ತು. ಆ ತೀರ್ಮಾನವನ್ನು ಭಾರತವು ವಿರೋಧಿಸಿದ ಬಳಿಕ ಬ್ರಿಟನ ಅದನ್ನು ಹಿಂದೆಗೆದುಕೊಂಡಿದೆ.

ದೇಶ ಮತ್ತು ವಿದೇಶಗಳಲ್ಲಿ ಹಿಂಸೆ ಇದುವೇ ಪಾಕಿಸ್ತಾನದ ಸಂಸ್ಕೃತಿ ! – ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕಿವಿ ಹಿಂಡಿದ ಭಾರತ

ಪಾಕಿಸ್ತಾನವು ತನ್ನ ಮನೆಯಲ್ಲಿ ಮತ್ತು ವಿದೇಶಗಳಲ್ಲಿ ಹಿಂಸೆಯ ಸಂಸ್ಕೃತಿಯನ್ನು ಮುಂದುವರಿಸಿದೆ; ಏಕೆಂದರೆ ಅವರು ಭಾರತದ ವಿರುದ್ಧ ದ್ವೇಷದ ಭಾಷಣಗಳನ್ನು ಮಾಡಲು ವಿಶ್ವಸಂಸ್ಥೆಯ ವೇದಿಕೆಯನ್ನು ಬಳಸಿದ್ದಾರೆ. ನಾವು ಇಂತಹ ಎಲ್ಲ ಪ್ರಯತ್ನಗಳನ್ನು ನಿಷೇಧಿಸುತ್ತೇವೆ ಮತ್ತು ಅವುಗಳನ್ನು ಖಂಡಿಸುತ್ತೇವೆ, ಎಂಬ ಮಾತುಗಳಲ್ಲಿ ಭಾರತವು ಪಾಕಿಸ್ತಾನದ ಕಿವಿ ಹಿಂಡಿದೆ.

ಅಫ್ಘಾನಿಸ್ತಾನದಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ಹರಡುವ ಅಪಾಯ ! – ಭಾರತದಲ್ಲಿನ ರಷ್ಯಾದ ರಾಯಭಾರಿ

ಭಯೋತ್ಪಾದನಾ ವಿರೋಧಿ ಸಹಕಾರ ಇದು ವಿವಿಧ ಮಟ್ಟದ ಭಾರತ ಮತ್ತು ರಷ್ಯಾದ ನಡುವಿನ ಸಂವಾದದ ಒಂದು ಮಹತ್ವದ ಭಾಗವಾಗಿದೆ. ನಮಗೆ ಕಾಬೂಲಿನಲ್ಲಿ ಒಂದು ಸರ್ವಸಮಾವೇಶಕ ಸರಕಾರ ಬೇಕಾಗಿದೆ. ಅಫಘಾನಿಸ್ತಾನದಿಂದ ಉದ್ಭವಿಸುವಂತಹ ಭಯೋತ್ಪಾದನೆಯ ಅಪಾಯವನ್ನು ಎದುರಿಸಲು ರಷ್ಯಾವು ಭಾರತಕ್ಕೆ ಅತ್ಯಂತ ಸಮೀಪದಿಂದ ಸಹಕರಿಸುತ್ತಿದೆ.

ವಾಯುಮಾಲಿನ್ಯದಿಂದ ಭಾರತೀಯರ ಆಯುಷ್ಯ ಒಂಬತ್ತು ವರ್ಷ ಕಡಿಮೆಯಾಗುವ ಸಾಧ್ಯತೆ ! – ಶಿಕಾಗೋ ವಿದ್ಯಾಪೀಠದಲ್ಲಿ ಉರ್ಜಾ ಧೋರಣ ಸಂಸ್ಥೆಯ ವರದಿ

ಮುಂಬರುವ ಸಮಯದಲ್ಲಿ ವಾಯುಮಾಲಿನ್ಯದಿಂದ ಸುಮಾರು ಶೇ. ೪೦ ರಷ್ಟು ಭಾರತೀಯರ ಆಯುಷ್ಯವು ಒಂಬತ್ತು ವರ್ಷ ಕಡಿಮೆಯಾಗುವ ಸಾಧ್ಯತೆಯಿದೆ, ಎಂಬ ವರದಿಯನ್ನು ಶಿಕಾಗೋ ವಿದ್ಯಾಪೀಠದ ಊರ್ಜಾ ಧೋರಣ ಸಂಸ್ಥೆಯು (‘ಇ.ಪಿ.ಐ.ಸಿ.’ಯು) ಜಾರಿಮಾಡಿದೆ.

ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಇಸ್ಲಾಮಿಕ್ ಸ್ಟೆಟ್‌ಗೆ ಜವಾಬ್ದಾರಿ ವಹಿಸಿದ ತಾಲಿಬಾನ್ ಮತ್ತು ಐ.ಎಸ್.ಐ. ! – ಗುಪ್ತಚರ ಇಲಾಖೆ ಮಾಹಿತಿ

ಭಾರತದಲ್ಲಿ ಆತ್ಮಾಹುತಿ ದಾಳಿ ಮಾಡಲು ತಾಲಿಬಾನ್ ಮತ್ತು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐ.ಎಸ್.ಐ. ಇವು ಇಸ್ಲಾಮಿಕ್ ಸ್ಟೇಟ್’ ಎಂಬ ಉಗ್ರ(ಭಯೋತ್ಪಾದಕ) ಸಂಘಟನೆಗೆ ಜವಾಬ್ದಾರಿಯನ್ನು ನೀಡಿವೆ, ಎಂದು ಭಾರತೀಯ ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ.

ಕೆಲವು ದೇಶಗಳು ಭಯೋತ್ಪಾದನೆಗೆ ನೀರು-ಗೊಬ್ಬರ ಎರೆಯುತ್ತಿವೆ !

ಭಯೋತ್ಪಾದಕರ ಕಾರ್ಯಾಚರಣೆಗಳಿಂದ ಅಂತರಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಗೆ ಹಾನಿಯಾಗಲಿದೆ. ಕೆಲವು ದೇಶಗಳು ‘ನಾವು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತೇವೆ ಎಂಬ ಸಾಮೂಹಿಕ ಸಂಕಲ್ಪವನ್ನು ಮಾಡಿದ್ದವು, ಆದರೆ ಈಗ ಆ ಸಂಕಲ್ಪವು ದುರ್ಬಲವಾಗಿದೆ. ಈ ದೇಶಗಳು ಭಯೋತ್ಪಾದನೆಗೆ ನೀರು-ಗೊಬ್ಬರ ಎರೆಯುತ್ತಿವೆ.

‘ತಾಲಿಬಾನ್‌ನ ನೇತೃತ್ವದಲ್ಲಿ ಅಫಗಾನಿ ಜನರಿಗೆ ಅಮೇರಿಕಾದಿಂದ ಸ್ವಾತಂತ್ರ್ಯ ಬೇಕಿತ್ತು (ಅಂತೆ) ! – ಸಮಾಜವಾದಿ ಪಕ್ಷದ ಸಂಸದ ಶಫೀಕುರ್ರ‍ಹಮಾನ ಬರ್ಕ್

ಅಫಗಾನಿಸ್ತಾನದಲ್ಲಿ ಬೀಡುಬಿಡಲು ಬಂದ ಅಮೇರಿಕಾ ಹಾಗೂ ರಶಿಯಾವನ್ನು ತಾಲಿಬಾನ್ ವಿರೋಧಿಸಿತ್ತು. ತಾಲಿಬಾನ್‌ನ ನೇತೃತ್ವದಲ್ಲಿ ಅಫಗಾನಿ ಜನರಿಗೆ ಅಮೇರಿಕಾದಿಂದ ಸ್ವಾತಂತ್ರ್ಯ ಬೇಕಿತ್ತು. ಅಫಗಾನಿಸ್ತಾನದ ಸ್ವಾತಂತ್ರ್ಯ ಅಲ್ಲಿನ ಜನರ ಆಂತರಿಕ ವಿಷವಾಗಿದೆ