ಕಾಶಿ ತಲುಪಿದ ನಂತರ ನನಗೆ ಅತ್ಯಂತ ಶಾಂತಿಯ ಅನುಭವ ಬಂತು ! – ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ ಡ್ವಾಇಟ ಹಾವಾರ್ಡ್

ಆಧ್ಯಾತ್ಮಿಕ ಪ್ರವಾಸ ಕೈಗೊಳ್ಳಲು ಹಾವರ್ಡ್ ಇವರು ಭಾರತಕ್ಕೆ ಆಗಮಿಸಿದ್ದಾರೆ

ವಾರಾಣಸಿ – ಅಮೇರಿಕಾದ ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ ಡ್ವಾಇಟ ಹಾವರ್ಡ್ ಶಾಂತಿಯ ಹುಡುಕಾಟದಲ್ಲಿ ಭಾರತದ ಕಾಶಿ ಯಾತ್ರೆ ಕೈಗೊಂಡಿದ್ದಾರೆ. ಕಾಶಿಗೆ ಬಂದನಂತರ ವಿಲಕ್ಷಣ ಶಾಂತಿಯ ಅನುಭೂವ ಬಂದಿದೆ ಎಂದು ಹಾವರ್ಡ ಹೇಳಿದರು. ಕಾಶಿಯಲ್ಲಿ ಅವರ ಜೀವನದಾಯಿನಿ ಗಂಗಾಮಾತೆಯ ದಡದಲ್ಲಿ ಜಗತ್ತಿನಾದ್ಯಂತ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು. ಇಲ್ಲಿ ಬಂದ ನಂತರ ಅವರಿಗೆ ಗಂಗಾತೀರದಲ್ಲಿ ಇರುವ ಶ್ರೀ ಬಾಬಾ ವಿಶ್ವನಾಥನ ಕಾಶಿಗೆ ಮೋಕ್ಷ ನಗರಿ ಏಕೆ ಅನ್ನುತ್ತಾರೆ ? ಇದು ಅರ್ಥವಾಯಿತು, ಅದರ ಜೊತೆಗೆ ಅವರು ಕಾಶಿಯಲ್ಲಿ ಅಂತ್ಯಸಂಸ್ಕಾರ ಏಕೆ ಮಾಡಲಾಗುತ್ತದೆ? ಕಾಶಿಗೆ ಅನಾದಿಕಾಲದಿಂದ ಅವಿನಾಶಿ ಏಕೆ ಎನ್ನುತ್ತಾರೆ? ಇದು ಕೂಡ ತಿಳಿಯಿತು.
ಡ್ವಾಇಟ ಹಾವರ್ಡ ಇವರ ಇಲ್ಲಿಯ ಜೀವನ ಮತ್ತು ಆಧ್ಯಾತ್ಮ ಇದರ ತತ್ವಜ್ಞಾನ ತಿಳಿದುಕೊಂಡ ನಂತರ ಅವರು ಭಾವಪರವಶರಾದರು. ಅವರು ದಶಾಶ್ವಮೇಧ ಘಾಟಿನಲ್ಲಿ ನಡೆಯುವ ಜಗತ್ಪ್ರಸಿದ್ಧ ಗಂಗಾ ಆರತಿ ಗೆ ಉಪಸ್ಥಿತರಿದ್ದರು. ಈ ಪ್ರಸಿದ್ಧ ಆಟಗಾರ ಕಾಶಿಯ ಅದ್ಭುತ ಪರಿವರ್ತನೆ ಮಾಡಿರುವ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಕಾಶಿ ಇದು ಮೋದಿಯವರ ಸ್ವಕ್ಷೇತ್ರವಾಗಿದೆ. ಇದು ಒಂದು ಆಧ್ಯಾತ್ಮಿಕ ಪ್ರವಾಸ. ಅದು ನಿಮ್ಮ ಆತ್ಮವನ್ನು ಸ್ಪರ್ಶಿಸುತ್ತದೆ ಎಂಬ ಹೇಳಿಕೆ ಹಾವರ್ಡ ಇವರು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದರು.