ಗುಜರಾತ ನರಮೇಧದಲ್ಲಿ ಮೃತಪಟ್ಟವರ ವಂಶಸ್ಥರಿಂದ ಬೇಡಿಕೆ
ನವ ದೆಹಲಿ – ಬ್ರಿಟನ್ನಿನ ಪ್ರಧಾನಿ ಬೋರಿಸ ಜಾನ್ಸನ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಗುಜರಾತಿನ ಸಾಬರಮತಿ ಆಶ್ರಮಕ್ಕೆ ಅವರು ಭೇಟಿ ನೀಡಿದರು. ಬಳಿಕ ದೆಹಲಿಗೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಗುಜರಾತಿನ ಪಾಲ-ದಾಢವಾವನಲ್ಲಿ ನಡೆದ ಸರಕಾರದ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ೧೨೦೦ ಭಾರತೀಯ ಪ್ರಜೆಗಳನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆ ನಡೆದು ೧೦೦ ವರ್ಷಗಳು ಕಳೆದಿವೆ. ಈ ನರಮೇಧಕ್ಕಾಗಿ ಪ್ರಧಾನಿ ಜಾನ್ಸನ ಭಾರತದ ಕ್ಷಮೆಯಾಚಿಸಬೇಕು ಎಂದು ಬೇಡಿಕೆ ಇಡಲಾಯಿತು.
೧. ಸಮಾಜ ಸುಧಾರಕ ಮೋತಿಲಾಲ ತೇಜಾವತ ನೇತೃತ್ವದಲ್ಲಿ ೨೦೦೦ ಆದಿವಾಸಿಗಳು ಬ್ರಿಟಿಷರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಅಂದು ಅವರ ಮೇಲೆ ಗುಂಡು ಹಾರಿಸಲು ಮೆಜರ ಎಚ ಟಿ ಸಟನ ಬ್ರಿಟಿಷ ಸೈನಿಕರಿಗೆ ಆದೇಶ ನೀಡಿದ್ದರು. ಈ ವರ್ಷ ಗಣರಾಜ್ಯೋತ್ಸವ ದಿನದಂದು ದೆಹಲಿಯ ರಾಜಪಥದ ಮೇಲಿನ ಕಾರ್ಯಕ್ರಮದಲ್ಲಿ ಗುಜರಾತಿನಿಂದ ಈ ನರಮೇಧದ ಬಗ್ಗೆ ಚಿತ್ರರಥ ಮಾಡಲಾಗಿತ್ತು.
೨. ಮೋತಿಲಾಲ ತೇಜಾವತ ಅವರ ಮೊಮ್ಮಗ ಮಹೇಂದ್ರ ಇವರು ‘ಹತ್ಯಾಕಾಂಡದ ಸಮಯದಲ್ಲಿ ಬ್ರಟಿಷ ಸರಕಾರ ಅಧಿಕಾರದಲ್ಲಿತ್ತೆಂದು’ ಹೇಳಿದರು. ಆದ್ದರಿಂದ ಬ್ರಿಟನ್ನಿನ ಪ್ರಧಾನ ಮಂತ್ರಿ ಜಾನ್ಸನ ಅವರಿಗೆ ನಿರಾಯುಧ ಆದಿವಾಸಿಗಳಿಗೆ ಸಂಬಂಧಿಸಿದಂತೆ ಏನಾದರೂ ತಪ್ಪಾಗಿದೆ ಎಂದು ಅನಿಸಿದರೆ ಅವರು ಕ್ಷಮೆಯಾಚಿಸಬೇಕು.
ಸಂಪಾದಕೀಯ ನಿಲುವುಕೇವಲ ಇದಷ್ಟೇ ಅಲ್ಲ ಬ್ರಿಟಿಷರು ಭಾರತೀಯರ ಮೇಲೆ ನಡೆಸಿದ ಅಪರಿಮಿತ ದೌರ್ಜನ್ಯ, ಕ್ರಾಂತಿಕಾರಿಗಳ ಅಮಾನುಷ ಹತ್ಯೆ ಹಾಗೂ ತಮ್ಮ ಅಧಿಕಾರಾವಧಿಯಲ್ಲಿ ಹಿಂದೂ ಸಂಸ್ಕೃತಿಯನ್ನು ನಾಶ ಮಾಡಲು ನಡೆಸಿದ ಪ್ರಯತ್ನಗಳಿಗಾಗಿ ಬ್ರಿಟಿಷರು ಭಾರತೀಯರಲ್ಲಿ ಕ್ಷಮೆ ಯಾಚಿಸಬೇಕು. ಅದಕ್ಕಾಗಿ ಭಾರತ ಸರಕಾರ ಬ್ರಿಟನ ಮೇಲೆ ಒತ್ತಡ ತರುವುದು ಆವಶ್ಯಕವಾಗಿದೆ ! |