ಜಗತ್ತು ಭಾರತದ ವಿಚಾರ ಪ್ರಕ್ರಿಯೆ ತಿಳಿದುಕೊಳ್ಳುವುದಕ್ಕಾಗಿ ಮಹಾಭಾರತದ ಅಧ್ಯಯನ ಮಾಡಬೇಕು ! – ಡಾ. ಎಸ್. ಜಯಶಂಕರ್, ವಿದೇಶಾಂಗ ಸಚಿವರು

ನವ ದೆಹಲಿ – ಭಾರತಕ್ಕೆ ಅದರದೇ ಆದ ರಣನೀತಿ ಏನು ಇರಬೇಕು ಮತ್ತು ತನಗೆ ಯಾವ ಧ್ಯೇಯ ಇರಬೇಕು, ಇದನ್ನು ತಿಳಿದುಕೊಳ್ಳುವುದಕ್ಕಾಗಿ, ಹಾಗೂ ಜಗತ್ತು ಭಾರತದ ವಿಚಾರ ಪ್ರಕ್ರಿಯೆ ತಿಳಿದುಕೊಳ್ಳುವುದಕ್ಕಾಗಿ ಮಹಾಭಾರತದ ಅಧ್ಯಯನ ಮಾಡುವುದು ಆವಶ್ಯಕವಾಗಿದೆ, ಎಂದು ಕೇಂದ್ರದ ವಿದೇಶಾಂಗ ಸಚಿವರಾದ ಡಾ. ಎಸ್. ಜೈಶಂಕರ್ ಇವರು ಪ್ರತಿಪಾದಿಸಿದರು. ಯಾವ ರಾಷ್ಟ್ರಗಳು ತಮ್ಮ ಭೂತಕಾಲವನ್ನು ಗೌರವಿಸುವುದಿಲ್ಲ ಅವರಿಗೆ ಭವಿಷ್ಯ ಇರುವುದಿಲ್ಲ, ಹೀಗೆ ಅವರು ಈ ಗ್ರಂಥದ ಒಂದು ಅಧ್ಯಾಯದ ಸಂದರ್ಭ ನೀಡಿದರು. ಜಾಗತಿಕ ಸಮುದಾಯಕ್ಕೆ ಸಂತೋಷಪಡಿಸುವ ಬದಲು ಸ್ವಂತ ಅಸ್ಮಿತೆಯ ಮೇಲೆ ವಿಶ್ವಾಸವಿರಿಸಿ ಜಗತ್ತಿನ ಜೊತೆಗೆ ಚರ್ಚಿಸಬೇಕು, ಎಂದು ನಮಗೆ ಅನಿಸುತ್ತದೆ. ರಶಿಯಾ ಯುಕ್ರೇನ್ ಮೇಲಿನ ಆಕ್ರಮಣ ವಿರೋಧಿಸುವುದಕ್ಕೆ ಪಾಶ್ಚಿಮಾತ್ಯ ದೇಶಗಳಿಂದ ಭಾರತದ ಮೇಲೆ ಒತ್ತಡ ಹೆಚ್ಚುತ್ತಿರುವ ಸಂದರ್ಭದಲ್ಲಿ ವಿದೇಶಾಂಗ ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತದ ವಿದೇಶಾಂಗ ಧೋರಣೆಯ ಸಮರ್ಥನೆ ಮಾಡುತ್ತಾ ಡಾ. ಜೈಶಂಕರ ಇವರು ರಾಯಸಿನ ಚರ್ಚೆಯಲ್ಲಿ ಮೇಲಿನ ಅಭಿಪ್ರಾಯ ಸ್ಪಷ್ಟವಾಗಿ ಮಂಡಿಸಿದರು.

೧. ಅವರು ಮಾತು ಮುಂದುವರೆಸುತ್ತಾ, ಭಾರತಕ್ಕೆ ಯಾವುದಾದರೊಂದು ಸೂತ್ರದ ಪ್ರಕಾರ ಕೃತಿ ಮಾಡುವಾಗ ಬೇರೆ ದೇಶಗಳ ಸಮ್ಮತಿಯ ಆವಶ್ಯಕತೆ ಇದೆ ಎಂಬ ಕಲ್ಪನೆಯನ್ನು ಬಿಟ್ಟುಬಿಡುವುದು ಆವಶ್ಯಕವಾಗಿದೆ.

೨. ನಾವು ಯಾರು? ಇದರ ಕಲ್ಪನೆ ನಮಗೆ ಇರಬೇಕು. ಪ್ರಪಂಚ ಹೇಗಿದೆ ಹಾಗೆ ಅದನ್ನು ಖುಷಿಪಡಿಸುವ ಬದಲು ನಾವು ಯಾರು? ಇದರ ಆಧಾರವಿಟ್ಟುಕೊಂಡು ಪ್ರಪಂಚದ ಜೊತೆ ಸಂವಾದ ನಡೆಸುವ ಆವಶ್ಯಕತೆ ಇದೆ.

೩. ಭಾರತದ ಸ್ವಾತಂತ್ರ್ಯದ ನಂತರ ದೇಶದ ೭೫ ವರ್ಷದ ಪ್ರವಾಸ ಮತ್ತು ಮುಂದಿನ ಹೆಜ್ಜೆ ಈ ವಿಷಯವಾಗಿ ಮಾತನಾಡುತ್ತಾ ಡಾ. ಜೈಶಂಕರ್ ಹೇಳಿದರು, ನಮಗೆ ಜಗತ್ತಿನಲ್ಲಿ ನಮ್ಮ ಸ್ಥಾನ ನಿರ್ಮಿಸುವ ಆವಶ್ಯಕತೆಯಿದೆ.

೪. ಭಾರತದ ವಿಕಾಸದಿಂದ ಪ್ರಪಂಚಕ್ಕೆ ಲಾಭ ಆಗಲಿದೆ ಎಂಬುವುದನ್ನು ನಾವು ಅವರಿಗೆ ತೋರಿಸಬೇಕು ಎಂದು ಕೂಡ ಹೇಳಿದರು.