‘ಮಾಯ್ ಮ್ಯೂಸ’ ಸಂಸ್ಥೆಯ ಪ್ರಮುಖರಿಂದ ಭಾರತೀಯ ಸಂಸ್ಕೃತಿಯ ವಿರುದ್ಧ ಹೇಳಿಕೆ
ನಮ್ಮ ಸಂಸ್ಥೆಯು ಲೈಂಗಿಕ ಸ್ವಾತಂತ್ರ‍್ಯವನ್ನು ಪ್ರೋತ್ಸಾಹಿಸುತ್ತದೆ !
ಮುಂಬಯಿ – ಭಾರತೀಯ ಸಮಾಜದಿಂದ ಲೈಂಗಿಕ ಸಂಬಂಧದ ಸಂದರ್ಭದಲ್ಲಿನ ‘ಅನೈತಿಕತೆ, ಲಜ್ಜೆ, ಅಪರಾಧಿ ಭಾವನೆ ಮತ್ತು ಭಯ’ವನ್ನು ದೂರಗೊಳಿಸುವ ಆವಶ್ಯಕತೆಯಿದೆ. ಭಾರತೀಯ ಭೂಮಿಯು ‘ಕಾಮಸೂತ್ರ’ದೊಂದಿಗೆ ಸಂಬಂಧಿಸಿದ್ದರೂ ಲೈಂಗಿಕತೆಯ ಬಗ್ಗೆ ಸಾಮಾಜಿಕ ಚರ್ಚೆಯನ್ನು ಅಶ್ಲೀಲವೆಂದು ತಿಳಿಯಲಾಗುತ್ತದೆ, ಇದು ಅಯೋಗ್ಯವಾಗಿದೆ ಎಂಬ ಅಭಿಪ್ರಾಯವನ್ನು ಅನುಷ್ಕಾ ಮತ್ತು ಸಾಹಿಲ ಗುಪ್ತಾ ಎಂಬ ದಂಪತಿಗಳು ವ್ಯಕ್ತಪಡಿಸಿದ್ದಾರೆ. ಈ ದಂಪತಿಗಳು ‘ಮಾಯ ಮ್ಯೂಸ’ ಎಂಬ ಸಂಸ್ಥೆಯನ್ನು ಆರಂಭಿಸಿದ್ದು ಈ ಮಾಧ್ಯಮದಿಂದ ತಯಾರಿಸಲಾಗುವ ಲೈಂಗಿಕತೆಗೆ ಸಂಬಂಧಿಸಿದ ಉತ್ಪಾದನೆಗಳನ್ನು ಖರೀದಿಸುವವರಿಗೆ ಅಪಮಾನವೆನಿಸುವುದಿಲ್ಲ ಹಾಗೂ ಈ ಉತ್ಪಾದನೆಗಳನ್ನು ಮೊಟ್ಟ ಮೊದಲ ಬಾರಿಗೆ ಖರೀದಿಸುವವರಿಗೂ ಪ್ರೋತ್ಸಾಹ ದೊರೆಯುವುದು, ಎಂದು ಅವರು ಹೇಳಿದ್ದಾರೆ.
ಅವರು ಮಾತನಾಡುತ್ತ, ಮಾಯ ಮ್ಯೂಸ ಸಂಸ್ಥೆಯು ಸಮಾಜದಲ್ಲಿ ಲೈಂಗಿಕ ಸ್ವಾತಂತ್ರ‍್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದು ಇದರ ಲಾಭವು ನಗರಗಳಲ್ಲಿರುವ ಯುವಪೀಳಿಗೆಗೆ ದೊರೆಯುತ್ತಿದೆ. ಕೊರೋನಾ ಸಮಯದಲ್ಲಿ ಆರಂಭವಾದ ಈ ಸಂಸ್ಥೆಯು ಈಗ ದೇಶದಲ್ಲಿನ ೨೦೦ ನಗರಗಳಲ್ಲಿ ಲೈಂಗಿಕತೆಗೆ ಸಂಬಂಧಿಸಿದ ಉತ್ಪಾದನೆಗಳನ್ನು ಮಾರುತ್ತಿದೆ. ಲೈಂಗಿಕತೆಯನ್ನು ಪ್ರೋತ್ಸಾಹಿಸುವ ಅನೇಕ ಸಂಸ್ಥೆಗಳು ಇಂದು ಉದಯಿಸುತ್ತಿವೆ. ಲೈಂಗಿಕ ಸಂಬಂಧಕ್ಕೆ ಸಂಬಂಧಿತ ಉದ್ಯೋಗವು ಭಾರತದಲ್ಲಿ ವೇಗವಾಗಿ ವೃದ್ಧಿಯಾಗುತ್ತಿದೆ, ಎಂದು ಹೇಳಿದರು.
ವಾತ್ಸ್ಯಾಯನ ಮುನಿಗಳು ‘ಕಾಮಸೂತ್ರ’ ಎಂಬ ಹೆಸರಿನ ಜಗತ್ಪ್ರಸಿದ್ಧ ಸಂಸ್ಕೃತ ಗ್ರಂಥವನ್ನು ಬರೆದಿದ್ದಾರೆ. ಹಿಂದೂ ಧರ್ಮವು ಹೇಳಿರುವ ನಾಲ್ಕು ಪುರುಷಾರ್ಥಗಳಲ್ಲಿ ‘ಕಾಮ’ವೂ ಒಂದು ಪುರುಷಾರ್ಥವಾಗಿದೆ; ಆದರೆ ಹಿಂದೂ ಧರ್ಮವು ಕಾಮದಂತಹ ಭೌತಿಕ ಸುಖದಲ್ಲಿ ಸಿಲುಕುವುದಕ್ಕಿಂತಲೂ ಚಿರಂತನ ಆನಂದವನ್ನು ನೀಡುವ ಮೋಕ್ಷಪ್ರಾಪ್ತಿಗಾಗಿ ಮಾನವನು ಸವೆಯಬೇಕು, ಎಂದು ಹೇಳುತ್ತದೆ ! ಇಂದಿನ ಸ್ವೇಚ್ಚಾಚಾರದ ಮತ್ತು ಪಾಶ್ಚಿಮಾತ್ಯರ ಪ್ರಭಾವವಿರುವವರಿಗೆ ಮಾತ್ರ ಸ್ವೇಚ್ಚಾಚಾರವೇ ಸಮೀಪದ್ದು ಎಂದು ಅನಿಸಿದರೆ ಅದರಲ್ಲಿ ಆಶ್ಚರ್ಯವೇನಿದೆ ? ಇಂದಿಗೂ ಹೆಚ್ಚಿನ ಹಿಂದೂ ಸಮಾಜವು ಧರ್ಮಾಚರಣೆಯನ್ನು ಮಾಡುತ್ತದೆ. ಹೀಗಿರುವಾಗ ಪಾಶ್ಚಾತ್ಯ ವಿಚಾರಸರಣಿಯನ್ನು ಹರಡಲು ಪ್ರಯತ್ನಿಸುವ ಪ್ರವೃತ್ತಿಗಳಿಗೆ ಸಮಯಕ್ಕೆ ಸರಿಯಾಗಿ ಪಾಠ ಕಲಿಸಲು ಸರಕಾರವು ಅವರ ವಿರುದ್ಧ ಕಾರ್ಯಾಚರಣೆಯನ್ನು ಮಾಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ ! |