ಪಾಕಿಸ್ತಾನದ ಮದರಸಾಗಳು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿವೆ ! – ಅಮೆರಿಕಾದ ಸಂಸ್ಥೆಯೊಂದರ ವರದಿ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಸಧ್ಯ ೪೦೦೦೦ ಮದರಸಾಗಳಿಂದ ಭಯೋತ್ಪಾದಕರು ಹೊರಹೊಮ್ಮುತ್ತಿದ್ದಾರೆ. ಈ ಭಯೋತ್ಪಾದಕರು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತರೆ. ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದ ನೀತಿಯು ಪಾಕಿಸ್ತಾನದ ಸೇನೆಯ ನಿಯಂತ್ರಣಕ್ಕೆ ಬಂದಿತು. ಅದಕ್ಕಾಗಿಯೆ ಪಾಕಿಸ್ತಾನದ ಯಾವುದೇ ತಜ್ಞರು ಭಯೋತ್ಪಾದನೆಯನ್ನು ಕೊನೆಗೊಳಿಸುವ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅಮೇರಿಕಾದ ‘ಬಾಲ್ಟಿಮೊರ ಪೋಸ್ಟ ಎಕ್ಸಾಮಿನರ’ ವರದಿ ತಿಳಿಸಿದೆ.

ಈ ವರದಿಯಲ್ಲಿ…

೧. ಹೊಸದಾಗಿ ನೇಮಿಸಲ್ಪಟ್ಟ ಪಾಕ್ ಪ್ರಧಾನಿ ಶಹಬಾಜ ಷರೀಫ ಅವರು ಪಾಕಿಸ್ತಾನದ ಮಿಲಿಟರಿಯನ್ನು ಸಮಾಧಾನಪಡಿಸಲು “ನಾವು ಕೂಡಾ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ; ಆದರೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸದೆ ಅದು ಸಾಧ್ಯವಿಲ್ಲ” ಎಂದರು.

೨. ಪಾಕಿಸ್ತಾನ ಕೃಷಿ ಪ್ರಧಾನ ದೇಶ. ಕೃಷಿಗೆ ಅಗತ್ಯವಿರುವ ಮೂರನೇ ಎರಡರಷ್ಟು ನೀರು ಕಾಶ್ಮೀರದ ನದಿಗಳಿಂದ ಬರುತ್ತದೆ. ಆದರೆ ಉಭಯ ದೇಶಗಳ ನಡುವಿನ ಒಪ್ಪಂದಕ್ಕೆ ಬದ್ಧರಾಗುವ ಬದಲು ಪಾಕಿಸ್ತಾನ ಕಾಶ್ಮೀರದ ಮೇಲೆ ಹಿಡಿತ ಸಾಧಿಸುವ ನೀತಿ ಅನುಸರಿಸಿದೆ.

೩. ಸಂಯುಕ್ತ ರಾಷ್ಟ್ರದ ಸುರಕ್ಷಾ ಪರಿಷತದಲ್ಲಿ ಪಾಕಿಸ್ತಾನಕ್ಕೆ ಗಿಲಗಿಟ ಮತ್ತು ಅನ್ಯ ಭಾಗಗಳಿಂದ ಹಿಂದೆ ಸರಿಯಲು ಹೇಳಲಾಗಿತ್ತು; ಆದರೆ ಪಾಕಿಸ್ತಾನ ಅದನ್ನು ಕೇಳಲಿಲ್ಲ.

೪. ೧೯೫೬ರ ನಂತರ ಪಾಕಿಸ್ತಾನವು ಪಾಕ ಆಕ್ರಮಿತ ಕಾಶ್ಮೀರದಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಸಮತೋಲನವನ್ನು ಹಾಳುಮಾಡಲು ಪ್ರಯತ್ನಿಸಿತು.

೫. ಪಾಕಿಸ್ತಾನದ ಏಕೈಕ ಸಹಕಾರಿ ಅಂದರೆ ಚೀನಾ. ಭಾರತವು ಕಾಶ್ಮೀರ ಸಮಸ್ಯೆಯಲ್ಲಿಯೇ ಸಿಕ್ಕಿಕೊಳ್ಳಬೇಕು ಮತ್ತು ಟಿಬೆಟ ಮತ್ತು ಶಿನಜಿಯಾಂಗನಲ್ಲಿನ ಸ್ನದ ಚಟುವಟಿಕೆಗಳ ಬಗ್ಗೆ ದುರ್ಲಕ್ಷ್ಯವಹಿಸಬೇಕು ಎಂದು ಚೀನಾ ಭಾವಿಸುತ್ತದೆ.

ಸಂಪಾದಕೀಯ ನಿಲುವು

ಅಮೆರಿಕಾ ಕೇವಲ ವರದಿಯನ್ನು ಪ್ರಕಟಿಸದೆ ಪಾಕಿಸ್ತಾನದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು!

ಭಾರತದ ಒಂದು ಸಂಸ್ಥೆಯು ಇಂತಹ ವರದಿಯನ್ನು ಏಕೆ ಮಾಡಬಾರದು? ಅವರು ಅಂತಹ ಅಧ್ಯಯನವನ್ನು ಏಕೆ ಮಾದುತ್ತಿಲ್ಲ? ಭಾರತ ಸರಕಾರವೂ ಅಂತಹ ಮಾಹಿತಿಯನ್ನು ಶೇಖರಿಸಿ ಜಾಗತಿಕವಾಗಿ ಪ್ರಸಾರ ಮಾಡಬೆಕು!