ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೇಡಿಕೆ ಕಡಿಮೆಯಾಗಿರುವುದರಿಂದ ಭಾರತದಲ್ಲಿ ತೈಲ ಅಗ್ಗ !

ನವ ದೆಹಲಿ – ಅಂತಾರಾಷ್ಟ್ರೀಯ ಮಾರುಕಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆ ಕುಸಿತವಾಗಿರುವುದರ ಪರಿಣಾಮವಾಗಿ ದೇಶದಲ್ಲಿ ಖಾದ್ಯ ತೈಲದ ಬೆಲೆಯಲ್ಲಿ ಸ್ವಲ್ಪ ಇಳಿತವಾಗಿದೆ. ಸಾಸಿವೆ, ಸೊಯಾಬೀನ, ಎಳ್ಳು ಹಾಗೂ ಪಾಮ ಎಣ್ಣೆಯ ಬೆಲೆಯು ಅಗ್ಗವಾಗಿದೆ. ಭಾರತವು ಈ ಖಾದ್ಯ ತೈಲವನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡುವ ದೇಶವಾಗಿದೆ. ಕಳೆದ ವಾರ ಸಾಸಿವೆ ಎಣ್ಣೆಯ ಆಮದು ಕಡಿಮೆಯಾಗಿಯೂ ಬೇಡಿಕೆ ಕಡಿಮೆಯಾಗಿರುವುದರಿಂದ ಎಣ್ಣೆಯ ಬೆಲೆ ಅಗ್ಗವಾಗಿದೆ.

೧. ಪ್ರತೀವರ್ಷ ಭಾರತವು ಇಂಡೊನೇಶಿಯಾದಿಂದ ದೊಡ್ಡ ಪ್ರಮಾಣದಲ್ಲಿ ಪಾಮ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ; ಆದರೆ ಈಗ ಇಂಡೊನೆಶಿಯಾದಲ್ಲಿ ಹಣದುಬ್ಬರ ಹೆಚ್ಚಾಗಿರುವುದರಿಂದ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಎಣ್ಣೆಯ ಕೊರತೆಯಿದೆ. ಆದ್ದರಿಂದ ಇಂಡೊನೆಶೀಯಾವು ಪಾಮ ಎಣ್ಣೆ ರಫ್ತು ಮಾಡುವುದರ ಮೇಲೆ ನಿರ್ಬಂಧ ಹೇರಿದೆ. ಅದರ ಪೆಟ್ಟು ಭಾರತಕ್ಕೆ ಬಿದ್ದಿದೆ.

೨. ಸೂರ್ಯಕಾಂತಿ ಎಣ್ಣೆಗಾಗಿ ಭಾರತವು ಯುಕ್ರೇನನ ಮೇಲೆ ಅವಲಂಬಿಸಿದೆ. ಈಗ ರಷ್ಯಾ ಹಾಗೂ ಯುಕ್ರೇನ ನಡುವೆ ಯುದ್ಧ ನಡೆಯುತ್ತಿರುವುದರಿಂದ ಯುಕ್ರೇನನಿಂದ ಆಗುವ ಎಣ್ಣೆಯ ಆಮದು ನಿಂತು ಹೋಗಿದೆ. ಆದ್ದರಿಂದ ಈ ಎಣ್ಣೆಗೆ ಬೇರೆ ಪರ್ಯಾಯವನ್ನು ಹುಡುಕುವ ಸವಾಲು ಭಾರತದ ಮುಂದಿದೆ. ಅದು ನಮಗೆ ಹೇರಲು ಆಗದೆ ಹೋದರೆ ಭವಿಷ್ಯದಲ್ಲಿ ಎಣ್ಣೆಯ ಕೊರತೆ ಕಂಡು ಬರಬಹುದು.