ದೇವಾಲಯಗಳ ಭೂಮಿ ಯಾವಾಗಲೂ ದೇವಾಲಯಗಳಿಗೆ ಸೇರಿರುತ್ತದೆ ! – ಮದ್ರಾಸ್ ಉಚ್ಚನ್ಯಾಯಾಲಯದ ಐತಿಹಾಸಿಕ ಆದೇಶ

ದೇವಾಲಯಗಳಿಗೆ ದಾನ ಮಾಡುವವರ ಇಚ್ಛೆಗೆ ವಿರುದ್ಧವಾಗಿ ಯಾರಿಗೂ ಭೂಮಿ ನೀಡಬಾರದು. ಭೂಮಿ ಯಾವಾಗಲೂ ದೇವಾಲಯಗಳಿಗೆ ಸೇರಿರುತ್ತದೆ. ಸಾಮಾನ್ಯವಾಗಿ ದೇವಾಲಯದ ಭೂಮಿಯ ಮೇಲೆ ಆಯಾ ಸಮುದಾಯದ ಜನರ ಹಿತಾಸಕ್ತಿಗಳು ಅವಲಂಬಿಸಿರುವ ಸಂದರ್ಭಗಳಲ್ಲಿ ಕಾನೂನು ಅನ್ವಯಿಸುವುದಿಲ್ಲ ಎಂಬ ಐತಿಹಾಸಿಕ ತೀರ್ಪನ್ನು ಮದ್ರಾಸ್ ಉಚ್ಚನ್ಯಾಯಾಲಯವು ನೀಡಿದೆ.

ತಮ್ಮ ಧರ್ಮದ ಪ್ರಚಾರ ಮಾಡುವಾಗ ಇತರ ಧರ್ಮಗಳನ್ನು ಅವಮಾನಿಸುವ ಅಧಿಕಾರ ಯಾವುದೇ ಧರ್ಮಕ್ಕೆ ಇಲ್ಲ ! – ಕರ್ನಾಟಕ ಉಚ್ಚನ್ಯಾಯಾಲಯ

ತಮ್ಮ ಧರ್ಮದ ಪ್ರಚಾರ ಮಾಡುವಾಗ ಇತರೆ ಧರ್ಮಗಳನ್ನು ಅವಮಾನಿಸುವ ಮೂಲಭೂತ ಅಧಿಕಾರವನ್ನು ಯಾವುದೇ ಧರ್ಮಕ್ಕೆ ನೀಡಲಾಗುವುದಿಲ್ಲ. ಯಾವುದೇ ಧರ್ಮಗುರುಗಳು ಅಥವಾ ಯಾವುದೇ ವ್ಯಕ್ತಿಯು ಸ್ವಂತ ಧರ್ಮದ ಪ್ರಚಾರ ಮಾಡುವಾಗ ಇತರ ಧರ್ಮದ ಅವಮಾನ ಆಗದಂತೆ ಎಚ್ಚರ ವಹಿಸಬೇಕು ಎಂದು ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಎಚ್.ಪಿ. ಸಂದೇಶ ಇವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದಿಂದ ಸ್ಥಳಾಂತರಗೊಂಡ ಹಿಂದೂಗಳು, ಸಿಖ್ಖರು ಮೊದಲಾದವರಿಗೆ ಲಸಿಕೆ ನೀಡದಿರುವ ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಉಚ್ಚ ನ್ಯಾಯಾಲಯ !

ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಹಿಂದೂಗಳು ಮತ್ತು ಸಿಖ್ಖರಂತಹ ಅಲ್ಪಸಂಖ್ಯಾತರಿಗೆ ರಾಜಸ್ಥಾನ ಸರಕಾರವು ಲಸಿಕೆ ನೀಡದಿರುವುದು ಗಮನಕ್ಕೆ ಬಂದನಂತರ ರಾಜಸ್ಥಾನ ಉಚ್ಚ ನ್ಯಾಯಾಲಯದ ಜೋಧಪುರ ನ್ಯಾಯಪೀಠವು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಮದರಸಾಗಳಲ್ಲಿನ ಶಿಕ್ಷಕರಿಗೆ ಪಿಂಚಣಿ ಏಕೆ ನೀಡಲಾಗುತ್ತಿದೆ? – ಕೇರಳ ಉಚ್ಚನ್ಯಾಯಾಲಯದಿಂದ ಪಿಣರಾಯಿ ವಿಜಯನ ಸರಕಾರಕ್ಕೆ ಪ್ರಶ್ನೆ

ಅನೇಕ ಮದರಸಾಗಳಿಂದ ಭಯೋತ್ಪಾದಕರು ತಯಾರಾಗುತ್ತಿರುವ ಹಾಗೂ ಅವರು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಬಹಿರಂಗವಾಗಿದ್ದರೂ, ಸರಕಾರವು ಅವುಗಳನ್ನು ನಿಷೇಧಿಸುವುದರ ಬಗ್ಗೆ ಚಕಾರ ಎತ್ತುತ್ತಿಲ್ಲ. ತದ್ವಿರುದ್ಧವಾಗಿ, ಅನೇಕ ರಾಜ್ಯ ಸರಕಾರಗಳು ಅವರಿಗೆ ಅನುದಾನ, ಅದೇರೀತಿ ಶಿಕ್ಷಕರಿಗೆ ಪಿಂಚಣಿಗಳನ್ನು ನೀಡುತ್ತವೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ವಿದ್ಯಾರ್ಥಿವೇತನದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಶೇ ೮೦ ರಷ್ಟು ಮತ್ತು ಕ್ರೈಸ್ತ ವಿದ್ಯಾರ್ಥಿಗಳಿಗೆ ಶೇ ೨೦ ರಷ್ಟು ಮೀಸಲಾತಿ ನೀಡುವ ಕೇರಳ ಸರಕಾರದ ಆದೇಶವನ್ನು ತಿರಸ್ಕರಿಸಿದ ಕೇರಳ ಉಚ್ಚ ನ್ಯಾಯಾಲಯ !

ಕಮ್ಯುನಿಸ್ಟರ ಕಮ್ಯುನಿಸಂ ಎಷ್ಟು ಕಪಟತನದ್ದು ಮತ್ತು ಮತಾಂಧವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಅಂತಹ ಕಮ್ಯುನಿಸ್ಟ್ ಜನರು ಹಿಂದೂಗಳಿಗೆ ಜಾತ್ಯತೀತತೆಯ ಜ್ಞಾನವನ್ನು ನೀಡುತ್ತಿರುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!

ಮುಸ್ಲಿಂ ಹುಡುಗಿಯು ಹಿಂದೂ ಯುವಕನನ್ನು ಮದುವೆಯಾದ ನಂತರ ಅವರಿಗೆ ಭದ್ರತೆ ಒದಗಿಸುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ಪೊಲೀಸರಿಗೆ ಆದೇಶ

ಹಿಂದೂ ಹುಡುಗಿಯರನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಮತಾಂತರ ಮಾಡುತ್ತಿರುವ ಮತಾಂಧರ ವಿರುದ್ಧ ಹಿಂದೂ ಸಂಘಟನೆಗಳು ಧ್ವನಿ ಎತ್ತಿದಾಗ ಜಾತ್ಯತೀತವಾದಿಗಳು ಇದನ್ನು ವಿರೋಧಿಸುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ವಿಕ್ರಮ ಭಾವೆಯವರಿಗೆ ಮುಂಬಯಿ ಉಚ್ಚ ನ್ಯಾಯಾಲಯದಿಂದ ದೊರಕಿದ ಜಾಮೀನು ಮತ್ತು ನ್ಯಾಯಾಂಗ ಹೋರಾಟದ ಪ್ರವಾಸ !

ದಾಭೋಲಕರ ಹತ್ಯೆಯ ಪ್ರಕರಣದಲ್ಲಿ ಪುಣೆ ಪೊಲೀಸರು ಮನೀಷ ನಾಗೋರಿ ಮತ್ತು ವಿಕಾಸ ಖಂಡೇಲವಾಲ ಇವರನ್ನು ಬಂಧಿಸಿತು. ಇವರಿಬ್ಬರು ಶಸ್ತ್ರಾಸ್ತ್ರಗಳನ್ನು (ಪಿಸ್ತೂಲು) ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದರು. ಯಾವ ಪಿಸ್ತೂಲಿನಿಂದ ಹತ್ಯೆ ಮಾಡಲಾಯಿತೋ, ಆ ಪಿಸ್ತೂಲನ್ನು ಇವರಿಬ್ಬರೂ ಮಾರಾಟ ಮಾಡಿದ್ದರು ಎಂದು ಅವರ ಮೇಲೆ ಆರೋಪವಿತ್ತು.

ಮದ್ರಾಸ್ ಉಚ್ಚನ್ಯಾಯಾಲಯ ಮತ್ತು ಚುನಾವಣಾ ಆಯೋಗದ ನಡುವಿನ ವಿವಾದದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪು

ದೇಶದಲ್ಲಿ ಇತ್ತೀಚೆಗೆ ನಡೆದ ಐದು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮದ್ರಾಸ್ ಉಚ್ಚನ್ಯಾಯಾಲಯವು ಚುನಾವಣಾ ಆಯೋಗವನ್ನು ಹೊಣೆಗಾರರನ್ನಾಗಿ ಮಾಡಿ, ‘ಕೊಲೆಯ ಅಪರಾಧವನ್ನು ನೋಂದಾಯಿಸಬೇಕು’, ಎಂಬ ಶಬ್ದಗಳಲ್ಲಿ ಹೇಳಿತ್ತು.

ಆಮ್ಲಜನಕದ ಬಗ್ಗೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಉಚ್ಚನ್ಯಾಯಾಲಯ !

ಈಗ ನೀರು ತಲೆಯ ಮೇಲಿಂದ ಹೋಗಿದೆ. ಈಗ ನಮಗೆ ಕಾರ್ಯಾಚರಣೆ ಬೇಕಾಗಿದೆ. ನೀವು ಈಗ ಎಲ್ಲ ವ್ಯವಸ್ಥೆಯನ್ನು ಮಾಡಲಿದ್ದೀರಿ. ಹೇಗಾದರೂ ಮಾಡಿ ದೆಹಲಿಗೆ ಇಂದು ೪೯೦ ಮೆಟ್ರಿಕ್ ಟನ್ ಆಮ್ಲಜನಕವನ್ನು ಒದಗಿಸುವಂತೆ ದೆಹಲಿ ಉಚ್ಚ ನ್ಯಾಯಾಲಯವು ಕೇಂದ್ರಕ್ಕೆ ಆದೇಶ ನೀಡುವ ಮೂಲಕ ತರಾಟೆಗೆ ತೆಗೆದುಕೊಂಡಿದೆ

ಕೊರೋನಾದ ಬಗ್ಗೆ ಗುಜರಾತ ಸರಕಾರಕ್ಕೆ ಛೀಮಾರಿ ಹಾಕಿದ ಗುಜರಾತ ಉಚ್ಚ ನ್ಯಾಯಾಲಯ!

ಕೊರೋನಾಗೆ ಸಂಬಂಧಿಸಿದಂತೆ ಸರಕಾರವು ಮಾಡಿದ ಪರಿಹಾರೋಪಾಯಗಳ ದಾವೆಗಳು ಮತ್ತು ವಾಸ್ತವ ಪರಿಸ್ಥಿತಿಯ ನಡುವೆ ದೊಡ್ಡ ವ್ಯತ್ಯಾಸವಿದೆ, ಎಂದು ಕಠೋರ ಮಾತುಗಳಲ್ಲಿ ಗುಜರಾತ ಉಚ್ಚ ನ್ಯಾಯಾಲಯವು ಕರೋನಾ ಪರಿಸ್ಥಿತಿಯ ಬಗ್ಗೆ ಗುಜರಾತ ಸರಕಾರಕ್ಕೆ ಛೀಮಾರಿ ಹಾಕಿದೆ.