ಸಂವಿಧಾನದಿಂದ ‘ಜಾತ್ಯತೀತ’, ‘ಸಮಾಜವಾದ’ ಶಬ್ದ ತೆಗೆಯಲಾಗಿದೆ ! – ಕಾಂಗ್ರೆಸ್ ಆರೋಪ
ನೂತನ ಸಂಸತ್ತಿನ ಎರಡನೇ ದಿನದಂದು ಲೋಕಸಭೆಯ ಕಲಾಪ ಪ್ರಾರಂಭವಾದ ನಂತರ ಸದಸ್ಯರಿಗೆ ಸಂವಿಧಾನದ ಪ್ರತಿಗಳನ್ನು ಕೊಡಲಾಯಿತು ಈ ಪ್ರತಿಯಲ್ಲಿ “ಸಮಾಜವಾದ” ಮತ್ತು ‘ಜಾತ್ಯಾತೀತ’ ಶಬ್ದಗಳು ಇಲ್ಲವೆಂದು ಲೋಕಸಭೆಯ ಕಾಂಗ್ರೆಸ್ ನ ಸಂಸದ ಮತ್ತು ವಿರೋಧ ಪಕ್ಷದ ನಾಯಕ ಅಧೀರ ರಂಜನ ಚೌಧರಿಯವರು ಆರೋಪ ಮಾಡಿದ್ದಾರೆ.