ಪಾಕಿಸ್ತಾನದಿಂದ ಸ್ಥಳಾಂತರಗೊಂಡ ಹಿಂದೂಗಳು, ಸಿಖ್ಖರು ಮೊದಲಾದವರಿಗೆ ಲಸಿಕೆ ನೀಡದಿರುವ ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಉಚ್ಚ ನ್ಯಾಯಾಲಯ !

ಹಿಂದೂಗಳು, ಸಿಖ್ಖರು ಮೊದಲಾದವರ ಬದಲಿಗೆ ಮುಸಲ್ಮಾನರು ಇದ್ದಿದ್ದರೆ ಕಾಂಗ್ರೆಸ್ ಸರಕಾರ ಲಸಿಕೆ ನೀಡುವುದನ್ನು ತಪ್ಪಿಸುತ್ತಿತ್ತೇನು ?

ಇಂತಹ ಸರಕಾರವನ್ನು ನ್ಯಾಯಾಲಯವು ತರಾಟೆಗೆ ತೆಗೆದುಕೊಳ್ಳುವುದರ ಜೊತೆಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಜಯಪುರ (ರಾಜಸ್ಥಾನ) – ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಹಿಂದೂಗಳು ಮತ್ತು ಸಿಖ್ಖರಂತಹ ಅಲ್ಪಸಂಖ್ಯಾತರಿಗೆ ರಾಜಸ್ಥಾನ ಸರಕಾರವು ಲಸಿಕೆ ನೀಡದಿರುವುದು ಗಮನಕ್ಕೆ ಬಂದನಂತರ ರಾಜಸ್ಥಾನ ಉಚ್ಚ ನ್ಯಾಯಾಲಯದ ಜೋಧಪುರ ನ್ಯಾಯಪೀಠವು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಲಯವು ಮೇ ೨೮ ರಂದು ಲಸಿಕೆ ನೀಡುವಂತೆ ಆದೇಶವನ್ನು ನೀಡಿಯೂ ಸರಕಾರ ಏಕೆ ಪಾಲಿಸಲಿಲ್ಲ ? ಎಂದು ನ್ಯಾಯಾಲಯವು ಸರಕಾರಕ್ಕೆ ಉತ್ತರಿಸುವಂತೆ ಸೂಚಿಸಿದೆ.

ಯಾವುದೇ ಅಧಿಕೃತ ಗುರುತಿನ ಚೀಟಿ ಇಲ್ಲದ ಪಾಕಿಸ್ತಾನದಿಂದ ಬಂದ ಅಲ್ಪಸಂಖ್ಯಾತ ವಲಸಿಗರು ಸಹ ಲಸಿಕೆ ಹಾಕಿಸಿಕೊಳ್ಳಲು ಅರ್ಹರು ಎಂದು ಸರಕಾರವು ಏಕೆ ಪರಿಗಣಿಸುವುದಿಲ್ಲ ? ಗುರುತಿನ ಚೀಟಿ ಇಲ್ಲದಿದ್ದರೂ ಎಲ್ಲರಿಗೂ ಲಸಿಕೆ ಹಾಕಬಹುದು ಎಂದು ಕೇಂದ್ರ ಸರಕಾರವು ಆದೇಶ ನೀಡಿದರೂ ಸರಕಾರವು ಅದನ್ನು ಯಾಕೆ ಪಾಲಿಸುತ್ತಿಲ್ಲ ? ಈ ನಿಟ್ಟಿನಲ್ಲಿ ಸರಕಾರವು ಕೇಂದ್ರದಿಂದ ಹೆಚ್ಚಿನ ಮಾಹಿತಿ ಏಕೆ ಕೇಳುತ್ತಿದೆ ?, ಇಂತಹ ಶಬ್ದದಲ್ಲಿ ನ್ಯಾಯಾಲಯವು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಸ್ಥಳಾಂತರಿತ ಹಿಂದೂಗಳು ಅನರ್ಹರು; ಆದರೆ ಮುಸಲ್ಮಾನರಿಗಾಗಿ ವಿಶೇಷ ಲಸಿಕೀಕರಣ

ಒಂದೆಡೆ, ರಾಜಸ್ಥಾನದ ಕಾಂಗ್ರೆಸ್ ಸರಕಾರವು ಪಾಕಿಸ್ತಾನದಿಂದ ಬಂದಿರುವ ಹಿಂದೂಗಳು, ಸಿಖ್ಖರು ಮೊದಲಾದ ಅಲ್ಪಸಂಖ್ಯಾತರಿಗೆ ಕೊರೊನಾ ವಿರುದ್ಧ ಲಸಿಕೆ ನೀಡಲು ತಡೆಯುತ್ತಿದ್ದರೆ, ಮತ್ತೊಂದೆಡೆ ರಾಜ್ಯದ ಮುಸಲ್ಮಾನರಿಗೆ ಮಾತ್ರ ವಿಶೇಷ ಶಿಬಿರಗಳ ಮೂಲಕ ಲಸಿಕೆ ಹಾಕಲಾಗುತ್ತಿದೆ. ಲಸಿಕೆಗಳ ಬಗ್ಗೆ ಮುಸಲ್ಮಾನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಸರಕಾರವು ಲಸಿಕಾ ಶಿಬಿರಗಳನ್ನು ಆಯೋಜಿಸುತ್ತಿದೆ ಎಂದು ಹೇಳಲಾಗುತ್ತಿದೆ.