ಆಮ್ಲಜನಕದ ಬಗ್ಗೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಉಚ್ಚನ್ಯಾಯಾಲಯ !

ಈಗ ನೀರು ತಲೆಯ ಮಟ್ಟಕ್ಕಿಂತ ಮೇಲೆ ಹೋಗಿದ್ದರಿಂದ, ಇಂದೇ ಇದೇ ಕ್ಷಣ ಆಮ್ಲಜನಕವನ್ನು ಸರಬರಾಜು ಮಾಡಿ !

ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಒಬ್ಬ ವೈದ್ಯರೂ ಸೇರಿದಂತೆ ೮ ರೋಗಿಗಳು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ !

ನವ ದೆಹಲಿ – ಈಗ ನೀರು ತಲೆಯ ಮಟ್ಟಕ್ಕಿಂತ ಮೇಲೆ ಹೋಗಿದೆ. ಈಗ ನಮಗೆ ಕಾರ್ಯಾಚರಣೆ ಬೇಕಾಗಿದೆ. ನೀವು ಈಗ ಎಲ್ಲ ವ್ಯವಸ್ಥೆಯನ್ನು ಮಾಡಲಿದ್ದೀರಿ. ಹೇಗಾದರೂ ಮಾಡಿ ದೆಹಲಿಗೆ ಇಂದು ೪೯೦ ಮೆಟ್ರಿಕ್ ಟನ್ ಆಮ್ಲಜನಕವನ್ನು ಒದಗಿಸುವಂತೆ ದೆಹಲಿ ಉಚ್ಚ ನ್ಯಾಯಾಲಯವು ಕೇಂದ್ರಕ್ಕೆ ಆದೇಶ ನೀಡುವ ಮೂಲಕ ತರಾಟೆಗೆ ತೆಗೆದುಕೊಂಡಿದೆ. ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆಯ ಕೊರತೆಯಿಂದ ಒಬ್ಬ ವೈದ್ಯರು ಸೇರಿದಂತೆ ಎಂಟು ರೋಗಿಗಳು ಸಾವನ್ನಪ್ಪಿದ್ದಾರೆ. ದೆಹಲಿಯ ಕೆಲವು ಆಸ್ಪತ್ರೆಗಳು ಆಮ್ಲಜನಕ ಪೂರೈಕೆ ಕೋರಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿವೆ. ಆಸ್ಪತ್ರೆಗಳಲ್ಲಿ ಆಮ್ಲಜನಕದ ಸಾಕಷ್ಟು ಪೂರೈಕೆಯಿಲ್ಲ ಎಂದು ಈ ರೋಗಿಗಳು ದೂರನ್ನು ನೀಡಿದ್ದಾರೆ. ಕೇಂದ್ರ ಸರಕಾರವು ಘೋಷಿಸಿದ ಸಂಗ್ರಹವನ್ನೂ ಸಹ ಸರಬರಾಜು ಮಾಡುತ್ತಿಲ್ಲ ಎಂದು ರಾಜ್ಯ ಸರಕಾರವು ಹೇಳಿದೆ. ಈ ವಿಷಯವನ್ನು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಪ್ರತಿದಿನ ವಿಚಾರಣೆ ನಡೆಯುತ್ತಿದೆ.

ನ್ಯಾಯಾಲಯವು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡು, ಹೇಗಾದರೂ ಮಾಡಿ ಇಂದು ದೆಹಲಿಗೆ ೪೯೦ ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸಬೇಕು ಎಂದು ನಾವು ಕೇಂದ್ರವನ್ನು ನಿರ್ದೇಶಿಸುತ್ತೇವೆ’ ಎಂದು ಹೇಳಿದೆ. ಈ ಉದ್ದೇಶಕ್ಕಾಗಿ ಟ್ಯಾಂಕರ್‍ಗಳನ್ನು ಒದಗಿಸುವ ಜವಾಬ್ದಾರಿಯೂ ಕೇಂದ್ರದ ಮೇಲಿದೆ. ಏಪ್ರಿಲ್ ೨೦ ರಂದು ಸರಕಾರವು ಆಮ್ಲಜನಕವನ್ನು ಪೂರೈಸಲು ನಿರ್ಧರಿಸಿತು; ಆದರೆ ಅಂದಿನಿಂದ ಇಂದಿನವರೆಗೂ ದೆಹಲಿಗೆ ಸಂಪೂರ್ಣ ಆಮ್ಲಜನಕ ಕೋಟಾ ಬಂದಿಲ್ಲ. ನಿಮಗೆ ಅಗತ್ಯಕ್ಕಿಂತ ಹೆಚ್ಚಿನ ಆಮ್ಲಜನಕವನ್ನು ಯಾರೂ ಕೇಳುವುದಿಲ್ಲ. ನಿಮಗೆ ಇಂದು ಸರಬರಾಜು ಮಾಡಲು ಸಾಧ್ಯವಾಗದಿದ್ದರೆ, ನಿಮ್ಮ ವಿಶ್ಲೇಷಣೆಯನ್ನು ಮೇ ೩ ರಂದು ನಾವು ಕೇಳುತ್ತೇವೆ ಎಂಬ ಶಬ್ದಗಳಲ್ಲಿ ನ್ಯಾಯಾಲಯ ಹೇಳಿದೆ.

ಸೈನ್ಯದ ಸಹಾಯ ತೆಗೆದುಕೊಳ್ಳಿ !

ನ್ಯಾಯಾಲಯವು, ನೀವು ಸೈನ್ಯದ ಸಹಾಯವನ್ನು ತೆಗೆದುಕೊಂಡರೆ, ಅವರು ತಮ್ಮ ಮಟ್ಟದಲ್ಲಿ ಕೆಲಸ ಮಾಡುತ್ತಾರೆ ಅವರು ತಮ್ಮದೇ ಆದ ವ್ಯವಸ್ಥೆಯನ್ನು ಹೊಂದಿದ್ದಾರೆ ಎಂದು ನ್ಯಾಯಾಲಯವು ಹೇಳಿದೆ.