Sambhal Mrutyu Koop : ಸಂಭಲ್ (ಉತ್ತರ ಪ್ರದೇಶ) ಜಾಮಾ ಮಸೀದಿಯಿಂದ ಕೇವಲ 150 ಮೀಟರ್ ಅಂತರದಲ್ಲಿ ಪುರಾತನ ‘ಮೃತ್ಯು ಕೂಪ’ ಪತ್ತೆ

ಸಂಭಲ್ (ಉತ್ತರ ಪ್ರದೇಶ) – ಸದ್ಯ ನಡೆಯುತ್ತಿರುವ ಉತ್ಕನನದಲ್ಲಿ ಪುರಾತತ್ವ ಇಲಾಖೆಗೆ ಪುರಾತನ ಬಾವಿಯೊಂದು ಪತ್ತೆಯಾಗಿದೆ. ಈ ಬಾವಿಯನ್ನು ‘ಮೃತ್ಯುಕೂಪ’ ಎಂದು ಕರೆಯಲಾಗುತ್ತಿತ್ತು. ಈ ಬಾವಿಯನ್ನು ಮುಚ್ಚಲಾಗಿತ್ತು. ಪುರಾತತ್ವ ವಿಭಾಗವು ಈಗ ಈ ಪ್ರದೇಶದಲ್ಲಿ ಉತ್ಖನನ ಆರಂಭಿಸಿದೆ. ಈ ಬಾವಿ ಸಂಭಲ್ ನ ಸಾರ್ಥಲ ಚೌಕಿ ಹತ್ತಿರವಿದ್ದು ಈ ಬಾವಿಯಲ್ಲಿ ಸ್ನಾನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಜನರ ನಂಬಿಕೆಯಾಗಿತ್ತು. ಶಾಹಿ ಜಾಮಾ ಮಸೀದಿಯಿಂದ ಕೇವಲ 150 ಮೀಟರ್ ಅಂತರದಲ್ಲಿ ಈ ಬಾವಿ ಇದೆ. ಸಂಭಲ್ ನಲ್ಲಿ 24 ಕೋಸಿ ತಿರುವು ಮಾರ್ಗದಲ್ಲಿ ಬರುವ 68 ದೇಗುಲಗಳು ಮತ್ತು 19 ಬಾವಿಗಳನ್ನು ಪುರಾತತ್ವ ಇಲಾಖೆ ಹುಡುಕುತ್ತಿದೆ. ಇಲ್ಲಿಯವರೆಗೆ 22 ಬಾವಿಗಳು ಪತ್ತೆಯಾಗಿವೆ. ಪತ್ತೆಯಾದ ವಾಸ್ತುಗಳನ್ನು ಪುನರುಜ್ಜೀವನಗೊಳಿಸಲಾಗುವುದು.

1985ರಲ್ಲಿ ಬರೆಯಲಾದ ಪುಸ್ತಕದಲ್ಲಿಯೂ ಕೂಡ ಈ ಬಾವಿಯ ಉಲ್ಲೇಖವಿದೆ. ಸಂಭಲ್ ತಿರುವು ಮತ್ತು ಅದರ ತೀರ್ಥಕ್ಷೇತ್ರಗಳ ಬಗ್ಗೆ ಈ ಪುಸ್ತಕದಲ್ಲಿ ಬರೆಯಲಾಗಿದೆ. ಈ ಪುಸ್ತಕದಲ್ಲಿ ‘ವಿಮಲ್ ಕೂಪ’ (ವಿಮಲ್ ಕೊಳ) ಮತ್ತು ಬಲಿ ಕೂಪ (ಬಲಿ ಕೊಳ) ಇತ್ಯಾದಿಗಳನ್ನು ಉಲ್ಲೇಖಿಸಲಾಗಿದೆ. ಈ ಬಾವಿಯನ್ನು ಒತ್ತುವರಿ ಮಾಡಲಾಗಿದೆ ಎಂದು ಸ್ಥಳೀಯ ಹಿಂದೂಗಳು ಆರೋಪಿಸಿದ್ದಾರೆ. ಆದರೆ ಮುಸ್ಲಿಮರು ಈ ಭೂಮಿಯ ಮೇಲೆ ಹಕ್ಕು ಸಾಧಿಸುತ್ತಿದ್ದಾರೆ. ಸಂಭಲ್ ನ ಕೆಲವು ಸ್ಥಳಗಳನ್ನು ಪುರಾತತ್ವ ಇಲಾಖೆಯು ಈಗಾಗಲೇ ಪರಿಶೀಲಿಸಿದೆ.