ಗ್ರಾಮದ ಹೊರಗಿನ ಮುಸ್ಲಿಮರಿಗೆ ನಮಾಜ ಪಠಣ ಮಾಡುವುದಕ್ಕೆ ನಿರ್ಬಂಧ !

  • ಹೆಚ್ಚುತ್ತಿರುವ ಬಲಾತ್ಕಾರದ ಹಿನ್ನಲೆ; ಥಾಣೆ ಜಿಲ್ಲೆಯ ಕಲ್ಯಾಣದ ಖೋನಿ ಗ್ರಾಮಸ್ಥರ ದಿಟ್ಟ ನಿರ್ಧಾರ !

  • ಪ್ರತಿ ಶುಕ್ರವಾರ ಒಂದೂವರೆ ಸಾವಿರ ಮುಸ್ಲಿಮರು ನಮಾಜ ಮಾಡಲು ಬರುತ್ತಿದ್ದರು !

ಕಲ್ಯಾಣ – ಮಹಿಳೆಯರ ಮೇಲೆ ಹೆಚ್ಚುತ್ತಿರುವ ಬಲಾತ್ಕಾರ ಮತ್ತು ಅಪರಾಧಗಳನ್ನು ಗಮನಿಸಿ ಖೋಣಿ ಪ್ರದೇಶದ ಗ್ರಾಮಸ್ಥರು ಹೊರಗಿನಿಂದ ಬರುವ ಮುಸ್ಲಿಮರಿಗೆ ಅಲ್ಲಿನ ಮಸೀದಿಯಲ್ಲಿ ನಮಾಜ ಪಠಣ ಮಾಡುವುದನ್ನು ನಿಷೇಧಿಸಿದ್ದಾರೆ. ಶುಕ್ರವಾರ ಹೊರಗಿನ ಗ್ರಾಮಗಳಿಂದ ಮುಸ್ಲಿಮರು ಇಲ್ಲಿಗೆ ಬಂದಾಗ ಖೋಣಿ ಗ್ರಾಮಸ್ಥರು ಅವರನ್ನು ವಾಪಸ್ ಕಳುಹಿಸಿದರು. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಅಲ್ಲಿ ಸದ್ಯ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಈ ಕುರಿತು ಅಲ್ಲಿನ ಗ್ರಾಮದವರಾದ ಹನುಮಂತ ಠೊಂಬರೆ ಎಂಬವರು ಮಾತನಾಡಿ, ‘ನಮ್ಮ ಗ್ರಾಮಕ್ಕೆ ಪ್ರತಿ ಶುಕ್ರವಾರ ಒಂದೂವರೆ ಸಾವಿರ ಮುಸ್ಲಿಮರು ಪ್ರಾರ್ಥನೆಗೆ ಬರುತ್ತಾರೆ. ಸುತ್ತಮುತ್ತಲಿನ ನಗರಗಳಲ್ಲಿ ಹೆಚ್ಚುತ್ತಿರುವ ಅಪರಾಧಗಳು, ಲವ್ ಜಿಹಾದ್, ಅಪ್ರಾಪ್ತ ಬಾಲಕಿಯರ ಮೇಲಿನ ಬಲಾತ್ಕಾರ ಪ್ರಕರಣಗಳು ನಮ್ಮ ಹಳ್ಳಿಯಲ್ಲಿ ಭದ್ರತೆಯ ಸಮಸ್ಯೆಯನ್ನು ಸೃಷ್ಟಿಸಿವೆ. ನಮ್ಮ ಹಳ್ಳಿಯ ಸುರಕ್ಷತೆಯೇ ನಮ್ಮ ಸುರಕ್ಷತೆಯಾಗಿದೆ. ಸ್ಥಳೀಯರನ್ನು ನಾವು ವಿರೋಧಿಸುತ್ತಿಲ್ಲ. ಹೊರಗಿನವರಿಗೆ ಮಾತ್ರ ನಮ್ಮ ಗ್ರಾಮಕ್ಕೆ ಪ್ರವೇಶ ನಿಷೇಧಿಸಲಾಗಿದ್ದು, ಈ ನಿಷೇಧವು ಮುಂದುವರಿಯಲಿದೆ. ಪೊಲೀಸರಿಂದ ನಮಗೆ ಸಹಕಾರವಿದೆ, ಅವರು ಮತ್ತಷ್ಟು ಸಹಕರಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ ಎಂದರು.

ಸಂಪಾದಕೀಯ ನಿಲುವು

ಖೋಣಿ ಗ್ರಾಮದ ಗ್ರಾಮಸ್ಥರನ್ನು ಯಾರಾದರೂ ‘ಅಸಹಿಷ್ಣು’ ಎಂದು ಕರೆದರೆ ಆಶ್ಚರ್ಯ ಪಡಬೇಕಾಗಿಲ್ಲ. ಗ್ರಾಮಸ್ಥರಿಗೆ ಇಂತಹ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯತೆ ಏಕೆ ಬಂತು ಎಂಬುದನ್ನು ಪೊಲೀಸರು ಮತ್ತು ಅಲ್ಲಿನ ಸರಕಾರ ವಿಚಾರ ಮಾಡುವುದು ಆವಶ್ಯಕವಾಗಿದೆ !