ಕೊರೋನಾದ ಬಗ್ಗೆ ಗುಜರಾತ ಸರಕಾರಕ್ಕೆ ಛೀಮಾರಿ ಹಾಕಿದ ಗುಜರಾತ ಉಚ್ಚ ನ್ಯಾಯಾಲಯ!

ಈಗ ನಮಗೆಲ್ಲ ‘ದೇವರೇ ಗತಿ’ ಆಗಿದೆ !

ಕರ್ಣಾವತಿ (ಗುಜರಾತ) – ಗುಜರಾತ ರಾಜ್ಯದಲ್ಲಿ ಕೊರೋನಾ ಪೀಡಿತ ರೋಗಿಗಳಿಗೆ ಹಾಸಿಗೆಗಳು ಲಭ್ಯವಿಲ್ಲ. ಅವರಿಗೆ ಔಷಧಿ ಸಿಗುತ್ತಿಲ್ಲ. ಈಗ ಜನರಿಗೆಲ್ಲ ‘ನಮಗೆ ದೇವರೇ ಗತಿ’ ಎಂದು ಅನಿಸುತ್ತಿದೆ. ಕೊರೋನಾಗೆ ಸಂಬಂಧಿಸಿದಂತೆ ಸರಕಾರವು ಮಾಡಿದ ಪರಿಹಾರೋಪಾಯಗಳ ದಾವೆಗಳು ಮತ್ತು ವಾಸ್ತವ ಪರಿಸ್ಥಿತಿಯ ನಡುವೆ ದೊಡ್ಡ ವ್ಯತ್ಯಾಸವಿದೆ, ಎಂದು ಕಠೋರ ಮಾತುಗಳಲ್ಲಿ ಗುಜರಾತ ಉಚ್ಚ ನ್ಯಾಯಾಲಯವು ಕರೋನಾ ಪರಿಸ್ಥಿತಿಯ ಬಗ್ಗೆ ಗುಜರಾತ ಸರಕಾರಕ್ಕೆ ಛೀಮಾರಿ ಹಾಕಿದೆ. ಅಡ್ವೊಕೇಟ್ ಜನರಲ ಕಮಲ ತ್ರಿವೇದಿ ಇವರು ಸರಕಾರದ ಪರವಾಗಿ ಮಂಡಿಸುತ್ತಾ ಗುಜರಾತ ಸರಕಾರವು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದರು. ಆಸ್ಪತ್ರೆಯಲ್ಲಿನ ಹಾಸಿಗೆಗಳು ಮತ್ತು ಔಷಧಿಗಳ ಕೊರತೆಯ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಗುಜರಾತ ಸರಕಾರಕ್ಕೆ ಆದೇಶ ನೀಡಿದೆ.

೧. ಉಚ್ಚ ನ್ಯಾಯಾಲಯವು, ನಿಜವಾದ ಪರಿಸ್ಥಿತಿಯು ನೀವು ಹೇಳಿಕೊಳ್ಳುವುದಕ್ಕಿಂತ ಭಿನ್ನವಾಗಿದೆ ಎಂದು ಹೇಳಿದೆ. ಈ ಸಮಯದಲ್ಲಿ ಸರಕಾರದ ಬಗ್ಗೆ ಜನರ ನಂಬಿಕೆ ಕ್ಷೀಣಿಸಿದೆ. ಸರಕಾರದಿಂದ ಏನೂ ಆಗುವುದಿಲ್ಲ ಎಂದು ಜನರು ಸರಕಾರವನ್ನು ಟೀಕಿಸುತ್ತಿದ್ದಾರೆ. ಈ ಸೋಂಕಿನ ಸರಪಳಿಯನ್ನು ಮುರಿಯುವುದು ಅಗತ್ಯವಿದೆ ಎಂದು ಹೇಳಿದೆ.

೨. ನ್ಯಾಯಾಲಯವು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ನ್ಯಾಯಾಲಯವು ರೆಮಡೆಸಿವೀರ ಚುಚ್ಚುಮದ್ದಿನ ಕೊರತೆಯ ವಿಷಯವನ್ನು ಎತ್ತಿತು. ನ್ಯಾಯಾಲಯವು, ಜನರಿಗೆ ಇದು ಅಗತ್ಯವಿದ್ದರೂ, ಇಲ್ಲಿಯವರೆಗೆ ಯಾವ ಚಿಕಿತ್ಸಾಲಯದಲ್ಲಿ ಚುಚ್ಚುಮದ್ದು ಸಿಗುತ್ತಿತ್ತೋ ಆ ಆಸ್ಪತ್ರೆಗಳಲ್ಲಿ ಸಹ ಇದು ಲಭ್ಯವಿಲ್ಲ ಎಂದು ಹೇಳಿದೆ. ಹಾಗಾದರೆ ಸರಕಾರ ತನ್ನ ಸರಬರಾಜನ್ನು ಏಕೆ ಸೀಮಿತಗೊಳಿಸಿತು ? ಔಷಧಿಗಳು ಲಭ್ಯವಿದ್ದರೂ, ಸರಕಾರವು ಅವುಗಳ ಪೂರೈಕೆಯನ್ನು ನಿಯಂತ್ರಿಸುತ್ತಿದೆ. ಜನರು ಅದನ್ನು ಏಕೆ ಖರೀದಿಸಲು ಸಾಧ್ಯವಿಲ್ಲ ? ಎಲ್ಲಾಕಡೆಗಳಲ್ಲಿ ಔಷಧಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಿ. ನಮಗೆ ಕಾರಣಗಳು ಬೇಡ ಪರಿಹಾರವನ್ನು ತಿಳಿಸಿ, ಅಂತಹ ಮಾತುಗಳನ್ನು ನ್ಯಾಯಾಲಯವು ಛೀಮಾರಿ ಹಾಕಿತು.