ಸಂಭಲ್ (ಉತ್ತರ ಪ್ರದೇಶ) ಪತ್ತೆಯಾದ ಪುರಾತನ ಬಾವಿಗಳ ಉತ್ಖನನವನ್ನು ವಿರೋಧಿಸಿದ್ದಕ್ಕಾಗಿ ಮಸೀದಿ ಮುಖ್ಯಸ್ಥನ ಬಂಧನ

ಸಂಭಲ್ (ಉತ್ತರ ಪ್ರದೇಶ) – ಸಂಭಲ್ ಜಿಲ್ಲೆಯಲ್ಲಿ ಅತಿಕ್ರಮಣದ ವಿರುದ್ಧ ಮತ್ತು ಪ್ರಾಚೀನ ವಾಸ್ತುಗಳ ಉತ್ಕನನದ ಕಾರ್ಯದಲ್ಲಿ ಅಡ್ಡಿ ಪಡಿಸಲು ಪ್ರಯತ್ನಿಸಿದ ಮಸೀದಿಯ ಓರ್ವ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಬಂಧಿಸಿದ ನಂತರ ಮತ್ತೆ ಕೊಳವೆ ಉತ್ಕನನದ ಕಾರ್ಯ ಆರಂಭಿಸಲಾಯಿತು.

ಅಮೀರ್ ಎಂಬ ಹೆಸರಿನ ಮಸೀದಿ ವ್ಯವಸ್ಥಾಪಕನು ಈ ಪ್ರದೇಶದಲ್ಲಿ ಪತ್ತೆಯಾದ ಪ್ರಾಚೀನ ಕೊಳಗಳ ಉತ್ಖನನವನ್ನು ವಿರೋಧಿಸಿದ್ದನು. ಅಮೀರ್ ಅನ್ನು ಅಲ್ಲಿನ ಸ್ಥಳೀಯ ಹಿಂದೂಗಳು ವಿರೋಧಿಸಿದ್ದರು. ಈ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಿದ ನಂತರ ಆತನನ್ನು ಬಂಧಿಸಲಾಗಿದೆ. ನಗರದ ಕೊತ್ವಾಲಿ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ.

ಸಂಪಾದಕೀಯ ನಿಲುವು

ಇಂತಹವರಿಗೆ ಕಠಿಣ ಶಿಕ್ಷೆ ನೀಡಲು ಯತ್ನಿಸಿದರೆ ಮಾತ್ರ ಇತರರಿಗೆ ಪಾಠವಾಗುತ್ತದೆ.