ವಿಕ್ರಮ ಭಾವೆಯವರನ್ನು ಡಾ. ದಾಭೋಲಕರ ಹತ್ಯೆಯ ಪ್ರಕರಣದಲ್ಲಿ ಪುರಾವೆಗಳಿಲ್ಲದೇ ಬಂಧಿಸಲಾಗಿತ್ತು ಮತ್ತು ತದನಂತರ ೨ ವರ್ಷಗಳ ವರೆಗೆ ಅವರಿಗೆ ಆಗಿರುವ ತೊಂದರೆ, ಇದು ಯಾವುದರ ಸೇಡು ?
೧. ಹತ್ಯೆಗಳ ಬಗ್ಗೆ ಪೊಲೀಸರ ಮೇಲೆ ತನಿಖೆಯ ಒತ್ತಡ ಬರುವುದು
೨೦ ಆಗಸ್ಟ್ ೨೦೧೩ ರಂದು ಪುಣೆಯ ಓಂಕಾರೇಶ್ವರ ಸೇತುವೆಯ ಮೇಲೆ ಇಬ್ಬರು ವ್ಯಕ್ತಿಗಳು ಡಾ. ನರೇಂದ್ರ ದಾಭೋಲಕರ ಇವರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದರು ಮತ್ತು ಇದು ಮಹಾರಾಷ್ಟ್ರದಲ್ಲಿ ಒಂದು ಹೊಸ ವಿವಾದವುಂಟು ಮಾಡಿತ್ತು. ಮೊದಲು ಈ ಪ್ರಕರಣವು ಪುಣೆ ಪೊಲೀಸರ ಬಳಿಯಿತ್ತು. ಸಹಾಯಕ ಪೊಲೀಸ ಆಯುಕ್ತರಾದ ರಾಜೇಂದ್ರ ಭಾಮರೆಯವರು ತನಿಖೆಯನ್ನು ನಡೆಸುತ್ತಿದ್ದರು. ಆ ಸಮಯದಲ್ಲಿ ಗುಲಾಬರಾವ್ ಪೋಳ ಇವರು ಪುಣೆ ನಗರ ಪೊಲೀಸ ಆಯುಕ್ತರಾಗಿದ್ದರು. ಹತ್ಯೆಯ ಬಳಿಕ ಕೆಲವೇ ದಿನಗಳಲ್ಲಿ ಮಹಾರಾಷ್ಟ್ರ ಸರಕಾರವು ಸುಗ್ರೀವಾಜ್ಞೆ ಹೊರಡಿಸಿ ಮೌಢ್ಯ ನಿರ್ಮೂಲನಾ ಕಾಯಿದೆಯನ್ನು ಜಾರಿಗೊಳಿಸಿತು. ದೇಶಕ್ಕೆ ಸಾಮ್ಯವಾದಿಗಳು ಮಾಡಿರುವ ಹತ್ಯೆಗಳ ರೂಢಿಯಿತ್ತು, ಭಯೋತ್ಪಾದಕರು ಮಾಡಿರುವ ಸ್ಫೋಟಗಳ ರೂಢಿಯಿತ್ತು, ಕಾಶ್ಮೀರದಲ್ಲಿ ಮತಾಂಧ ಪ್ರತ್ಯೇಕತಾವಾದಿಗಳು ಹಿಂದೂಗಳನ್ನು ಅವರು ವಾಸಿಸುತ್ತಿದ್ದ ಮನೆಯಿಂದ ಹೊರದಬ್ಬಿರುವ ಮತ್ತು ಅವರ ಹತ್ಯೆ ಮಾಡುವ ರೂಢಿಯಿತ್ತು. ಈ ಹತ್ಯೆಗಳ ತನಿಖೆಯನ್ನು ತ್ವರಿತವಾಗಿ ಕೈಕೊಳ್ಳುವಂತೆ ಪುಣೆ ಪೊಲೀಸರ ಮೇಲೆ ತೀವ್ರ ಒತ್ತಡವಿತ್ತು.
೨. ಪುಣೆ ಪೊಲೀಸರು ಪ್ಲಾಂಚೆಟ್ ಮೂಲಕ ದಾಭೋಲಕರ ಹತ್ಯೆ ಪ್ರಕರಣದ ನಿಗೂಢತೆ ಪತ್ತೆ ಹಚ್ಚಲು ಪ್ರಯತ್ನಿಸುವುದು
ತದನಂತರ ಆಪ್ ಪಕ್ಷದ ಮತ್ತು ಸ್ಟಿಂಗ್ ಆಪರೇಶನ್‌ಗಾಗಿ ಹೆಸರುವಾಸಿಯಾಗಿರುವ ಆಶಿಷ್ ಖೇತಾನ ಇವರು ಪುಣೆಯ ಅಂದಿನ ಪೊಲೀಸ ಆಯುಕ್ತರಾದ ಗುಲಾಬರಾವ್ ಪೋಳ ಇವರ ಸ್ಟಿಂಗ್ ಆಪರೇಶನ್ ಮಾಡಿದರು. ಅದರಲ್ಲಿ ಒಬ್ಬ ಠಾಕುರ ಹೆಸರಿನ ವ್ಯಕ್ತಿ ಪ್ಲಾಂಚೆಟ್ ಮಾಧ್ಯಮದಿಂದ ದಾಭೋಲಕರರ ಆತ್ಮವನ್ನು ತನ್ನಲ್ಲಿ ತರಿಸಿ ಮತ್ತು ಅವರ ಹತ್ಯೆ ಹೇಗಾಯಿತು ಎಂದು ಹೇಳುತ್ತದೆ. ಅದರಂತೆ ಪೊಳ ಇವರು ತನಿಖೆ ನಡೆಸಿದ್ದರು. ಅದರಲ್ಲಿಯೂ ಸನಾತನದ ಹೆಸರನ್ನು ತೆಗೆದುಕೊಳ್ಳಲಾಗಿತ್ತು. ಈ ಪ್ಲಾಂಚೆಟ್‌ನ ವಿಡಿಯೋದಲ್ಲಿ ಮನೀಷ ಠಾಕುರ (ಅವರ ಶರೀರದಲ್ಲಿ ದಾಭೋಲಕರ ಆತ್ಮ ಬರುತ್ತಿದೆಯೆಂದು ಹೇಳುತ್ತಿದ್ದ ವ್ಯಕ್ತಿ) ಅವರ ಮನೆ ಕಾಣಿಸುತ್ತದೆ ಮತ್ತು ಅವರ ಮನೆಯ ಗೋಡೆಯ ಮೇಲೆ ತೂಗು ಹಾಕಿರುವ ಯೇಸು ಕ್ರಿಸ್ತನ ಛಾಯಾಚಿತ್ರವೂ ಸ್ಪಷ್ಟವಾಗಿ ಕಾಣಿಸುತ್ತದೆ. ತದನಂತರ ಗುಲಾಬರಾವ ಪೋಳ ಇವರು ತಮ್ಮ ನ್ಯಾಯವಾದಿ ಹರ್ಷದ ನಿಂಬಾಳಕರ ಇವರ ಮುಖಾಂತರ ಆಶಿಷ್ ಖೇತಾನ ಇವರ ಮೇಲೆ ಮಾನಹಾನಿಯ ದೂರು ದಾಖಲಿಸುವುದಾಗಿ ಘೋಷಿಸಿದರು. ಮುಂದೇನಾಯಿತು ಎಂದು ತಿಳಿಯಲಿಲ್ಲ. (ಹರ್ಷದ ನಿಂಬಾಳಕರ ಇವರು ಕಾ. ಪಾನಸರೆ ಹತ್ಯೆ ಪ್ರಕರಣದ ಸರಕಾರಿ ನ್ಯಾಯವಾದಿಗಳಾಗಿದ್ದಾರೆ. ಅವರಿಗೆ ಪ್ರತಿ ಆಲಿಕೆಗೆ ೭೫ ಸಾವಿರ ರೂಪಾಯಿಗಳ ಗೌರವಧನ ಸಿಗುತ್ತದೆ. ಆದರೆ ಖ್ಯಾತ ಸರಕಾರಿ ನ್ಯಾಯವಾದಿ ಉಜ್ವಲ ನಿಕಮ್ ಇವರಿಗೆ ಸರಕಾರ ಪ್ರತಿ ಆಲಿಕೆಗೆ ಸಾಧಾರಣವಾಗಿ ೩೦ ರಿಂದ ೩೫ ಸಾವಿರ ರೂಪಾಯಿಗಳನ್ನು ಕೊಡುತ್ತದೆ.)
೩. ಪೊಲೀಸರು ತಮಗೆ ಬೇಕಾದ ವ್ಯಕ್ತಿಯ ಹೆಸರನ್ನು ಹೇಳಿಸಿಕೊಳ್ಳಲು ದಾಭೋಲಕರ ಹತ್ಯೆಯ ಆರೋಪಿಗಳಿಗೆ ೨೫ ಲಕ್ಷ ರೂಪಾಯಿಗಳ ಆಮಿಷವನ್ನು ಒಡ್ಡುವುದು.
ದಾಭೋಲಕರ ಹತ್ಯೆಯ ಪ್ರಕರಣದಲ್ಲಿ ಪುಣೆ ಪೊಲೀಸರು ಮನೀಷ ನಾಗೋರಿ ಮತ್ತು ವಿಕಾಸ ಖಂಡೇಲವಾಲ ಇವರನ್ನು ಬಂಧಿಸಿತು. ಇವರಿಬ್ಬರು ಶಸ್ತ್ರಾಸ್ತ್ರಗಳನ್ನು (ಪಿಸ್ತೂಲು) ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದರು. ಯಾವ ಪಿಸ್ತೂಲಿನಿಂದ ಹತ್ಯೆ ಮಾಡಲಾಯಿತೋ, ಆ ಪಿಸ್ತೂಲನ್ನು ಇವರಿಬ್ಬರೂ ಮಾರಾಟ ಮಾಡಿದ್ದರು ಎಂದು ಅವರ ಮೇಲೆ ಆರೋಪವಿತ್ತು. ಇವರಿಬ್ಬರೂ ನ್ಯಾಯಾಲಯದಲ್ಲಿ ಕಳವಳಕಾರಿಯಾದ ಮಾಹಿತಿಯನ್ನು ನೀಡಿದರು. ಈ ಮಾಹಿತಿಯಲ್ಲಿ, ಪೊಲೀಸರು ಅವರಿಗೆ, ನಿಮಗೆ ಪ್ರತಿಯೊಬ್ಬರಿಗೆ ೨೫ ಲಕ್ಷ ರೂಪಾಯಿಗಳನ್ನು ನೀಡುತ್ತೇವೆ ಮತ್ತು ನಿಮ್ಮ ಮೇಲೆ ದಾಖಲಾಗಿರುವ ದೂರನ್ನು ಸೌಮ್ಯಗೊಳಿಸುತ್ತೇವೆ: ಆದರೆ ನಾವು ಹೇಳಿರುವ ವ್ಯಕ್ತಿಗೆ ನೀವು ಹತ್ಯೆಯ ಪಿಸ್ತೂಲು ಮಾರಾಟ ಮಾಡಿದ್ದೇವೆಂದು ಹೇಳಬೇಕು ಎಂದು ಹೇಳಿದ್ದರು. ನ್ಯಾಯಾಲಯದಲ್ಲಿ ಈ ಗೌಪ್ಯಸ್ಫೋಟ ಮಾಡಿದ್ದರಿಂದ ಪೊಲೀಸರಿಗೆ ಬಹಳ ದೊಡ್ಡ ಅಡಚಣೆಯಾಯಿತು. ಅವರಿಬ್ಬರೂ ಪೊಲೀಸ ಅಧಿಕಾರಿ ರಾಕೇಶ ಮಾರಿಯಾ ಮೇಲೆ ಆ ಆರೋಪವನ್ನು ಹಾಕಿದೆ. ಇದು ಜನವರಿ ೨೦೧೪ ರ ಕಾಲಾವಧಿಯಲ್ಲಿ ಆಗಿತ್ತು.
೪. ಪೊಲೀಸರಿಗೆ ಕಾನೂನುಬಾಹಿರವಾಗಿ ಸನಾತನದ ಆಶ್ರಮದಲ್ಲಿ ನುಗ್ಗಲು ಸಾಧ್ಯವಾಗದ ಕಾರಣ ಅವರು ಕೋಪೋದ್ರಿಕ್ತರಾಗಿ ಅಲ್ಲಿಂದ ಹಿಂದಿರುಗುವುದು
ಈ ಪ್ರಕರಣದ ಕೆಲವು ತಿಂಗಳುಗಳ ಮೊದಲು ಪನವೇಲನಲ್ಲಿ ವಾಸಿಸುತ್ತಿದ್ದ ಶ್ರೀ. ವಿಕ್ರಮ ಭಾವೆಯವರ ಮನೆಯ ಹತ್ತಿರವಿರುವ ಸನಾತನದ ಆಶ್ರಮಕ್ಕೆ ಪೊಲೀಸರು ಬಂದಿದ್ದರು ಮತ್ತು ಅವರು ವಿಕ್ರಮ ಭಾವೆಯವರ ವಿಚಾರಣೆಯನ್ನು ಪ್ರಾರಂಭಿಸಿದರು. ಪೋಲಿಸರು ತಮ್ಮ ಹೆಸರು ಹೇಳಲು ಮತ್ತು ಗುರುತಿನಚೀಟಿಯನ್ನು ತೋರಿಸಲು ಹಿಂಜರಿಯುತ್ತಿದ್ದರು. ಗುರುತಿನಚೀಟಿ ತೋರಿಸುವಂತೆ ಹೇಳಿದಾಗ ಅವರು ಪಿಸ್ತೂಲು ತೆಗೆದು ತೋರಿಸಿದರು. ಸಾಧಕರು ಈ ಪದ್ಧತಿಯಿಂದ ಆಶ್ರಮದಲ್ಲಿ ನುಗ್ಗಲು ಪ್ರಯತ್ನಿಸಿದ ಪೊಲೀಸರನ್ನು ತಡೆದರು. ಇದರಿಂದ ಅವರು ಕೋಪದಿಂದ ಹೊರಟು ಹೋದರು. ಅವರ ವಾಹನದ ಸಂಖ್ಯೆಯಿಂದ ಅದು ಭಯೋತ್ಪಾದನಾ ನಿಗ್ರಹ ದಳದ ಅಂದಿನ ಅಧಿಕಾರಿ ರಾಜನ ಧುಳೆಯವರ ವಾಹನವೆಂದು ತಿಳಿಯಿತು. ಮಾಲೆಗಾಂವ ಸ್ಫೋಟದ ತನಿಖೆಯಲ್ಲಿ ಧುಳೆಯವರ ಕೈವಾಡವಿತ್ತು. ವಿಕ್ರಮ ಭಾವೆಯವರು ‘ಮಾಲೆಗಾಂವ ಬಾಂಬ್ ಸ್ಫೋಟದ ಹಿಂದಿನ ಅದೃಶ್ಯ ಕೈ ಎಂಬ ಬೇರೆಯೇ ಮಾಹಿತಿ ತಿಳಿಸುವ ಪುಸ್ತಕ ಬರೆದಿದ್ದರು ಮತ್ತು ಅದರಲ್ಲಿ ಈ ಧುಳೆಯವರ ಉಲ್ಲೇಖವು ಮುಂಚೂಣಿಯಲ್ಲಿತ್ತು. ನವಾಕಾಳ ದಿನಪತ್ರಿಕೆಯು ಈ ಪುಸ್ತಕದ ಸಮೀಕ್ಷೆ ಮುದ್ರಿಸುವಾಗ ಪುಸ್ತಕದ ಕೆಲವು ವಿಷಯವನ್ನು ಪ್ರಕಟಿಸಿತ್ತು.
೫. ಸಿ.ಬಿ.ಐ.ಯು ಡಾ. ವೀರೇಂದ್ರ ತಾವಡೆಯವರನ್ನು ವಿನಾಕಾರಣ ಕಾರಾಗೃಹದಲ್ಲಿ ಬಂಧನದಲ್ಲಿಡುವುದು
ಅ. ಮೇ ೨೦೧೪ ರಲ್ಲಿ ದಾಭೋಲಕರ ಹತ್ಯೆಯ ತನಿಖೆಯನ್ನು ಸಿ.ಬಿ.ಐ.ಗೆ (ಕೇಂದ್ರೀಯ ತನಿಖಾ ದಳ) ಒಪ್ಪಿಸಲಾಯಿತು. ತದನಂತರ ೨ ವರ್ಷಗಳವರೆಗೆ ತನಿಖೆಯು ಶಾಂತವಾಗಿತ್ತು. ಬಳಿಕ ಅಕಸ್ಮಾತ್ತಾಗಿ ೧ ಜೂನ್ ೨೦೧೬ ರಲ್ಲಿ ಪನವೇಲ ಇಲ್ಲಿನ ಸನಾತನ ಆಶ್ರಮಕ್ಕೆ ಸಿ.ಬಿ.ಐ.ಯು ದಾಳಿ ನಡೆಸಿತು. ಆಕ್ಷೇಪಾರ್ಹವಾಗಿರುವಂತಹದ್ದೇನೂ ಅವರಲ್ಲಿ ಸಿಗಲಿಲ್ಲ. ೧ ರಿಂದ ೧೦ ಜೂನ್ ರಂದು ಡಾ. ವೀರೇಂದ್ರ ತಾವಡೆಯವರನ್ನು ಸಿ.ಬಿ.ಐ.ಯು ನವಿ ಮುಂಬಯಿ ಕಚೇರಿಯ ವಿಚಾರಣೆಗೆ ಕರೆಸಿ ಜೂನ್ ೧೦ ರಂದು ಬಂಧಿಸಿತು. ಇಂದಿನ ತನಕ ಅವರು ಸೆರೆಮನೆಯಲ್ಲಿದ್ದಾರೆ.
ಆ. ಡಾ. ತಾವಡೆಯವರ ವಿರುದ್ಧ ದೋಷಾರೋಪಪತ್ರವನ್ನು ದಾಖಲಿಸಲಾಯಿತು. ಅದರಲ್ಲಿ ಡಾ. ತಾವಡೆಯವರು ಸೂತ್ರಧಾರರಾಗಿದ್ದು, ಸಾರಂಗ ಅಕೋಲಕರ ಮತ್ತು ವಿನಯ ಪವಾರ ಇವರನ್ನು ಪ್ರತ್ಯಕ್ಷ ಗುಂಡು ಹಾರಿಸಿದವರು ಎಂದು ತೋರಿಸಲಾಯಿತು. ಹತ್ಯೆಯ ಘಟನೆಯನ್ನು ನೋಡುವ ಇಬ್ಬರು ಪ್ರತ್ಯಕ್ಷದರ್ಶಿ ಸಾಕ್ಷಿದಾರರು ಇವರಿಬ್ಬರ ಛಾಯಾಚಿತ್ರಗಳನ್ನು ಗುರುತಿಸಿರುವ ಪುರಾವೆಯಿತ್ತು.
ಇ. ಆರೋಪಪತ್ರ ದಾಖಲಿಸಿದ ಬಳಿಕ ಪ್ರಕರಣವನ್ನು ನಡೆಸುವುದು, ಸಾಕ್ಷಿದಾರರ ತಪಾಸಣೆ ನಡೆಸುವುದು, ಮರುತಪಾಸಣೆಯಾಗುವುದು ಇದು ಮುಂದಿನ ಹಂತವಾಗಿತ್ತು. ಆರೋಪಿಪರ ನ್ಯಾಯವಾದಿಗಳು ಈ ಪ್ರಕರಣವನ್ನು ಶೀಘ್ರದಲ್ಲಿ ಪ್ರಾರಂಭಿಸುವಂತೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದರು. ಆದರೆ ಅದಕ್ಕೆ ಸಿ.ಬಿ.ಐ.ಯು ನಿರಾಕರಿಸುತ್ತಿತ್ತು. ನಿರ್ವಾಹವಿಲ್ಲದೇ ನವೆಂಬರ ೨೦೧೬ ರಲ್ಲಿ ನ್ಯಾಯಾಲಯವು ಸಿ.ಬಿ.ಐ.ಗೆ ಒಂದು ಅಂತಿಮ ಗಡುವನ್ನು ನೀಡಿ ಮುಂದಿನ ದಿನಾಂಕಕ್ಕೆ ವಿಚಾರಣೆ ಪ್ರಾರಂಭಿಸುವಂತೆ ಆದೇಶಿಸಿತು.
ಈ. ಈ ಆದೇಶದ ವಿರುದ್ಧ ಸಿ.ಬಿ.ಐ. ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತು. ಅವರ ಅಭಿಪ್ರಾಯದಂತೆ ಈ ಪ್ರಕರಣವನ್ನು ಇಷ್ಟು ಬೇಗನೆ ನಡೆಸುವ ಗಡಿಬಿಡಿ ಮಾಡಬಾರದು. ಅವರಿಗೆ ಪಿಸ್ತೂಲಿನ ಬಗ್ಗೆ ಆಗಿರುವ ಗೊಂದಲದ ತನಿಖೆ ನಡೆಸಲು ಕೆಲವು ವಿಷಯಗಳನ್ನು ಸ್ಕಾಟಲ್ಯಾಂಡ್ ಯಾರ್ಡ್, ಲಂಡನ್‌ಗೆ ಕಳುಹಿಸಬೇಕಾಗಿದೆಯೆಂದು ತಿಳಿಸಿದರು. ಪ್ರತ್ಯಕ್ಷದಲ್ಲಿ ಅದು ಅಸಾಧ್ಯವಾಗಿತ್ತು ಮತ್ತು ಹಾಗೆ ಆಗಲೂ ಇಲ್ಲ. ಇದೊಂದು ಪ್ರತ್ಯೇಕ ಮತ್ತು ಸ್ವತಂತ್ರ ವಿಷಯವಾಗಿದೆ; ಆದರೆ ಗಮನಿಸುವ ವಿಷಯವೆಂದರೆ ಸಿ.ಬಿ.ಐ.ಯು ಪ್ರಕರಣದ ವಿಚಾರಣೆ ನಡೆಸಲು ಬಿಡಲಿಲ್ಲ.
೬. ಸಿ.ಬಿ.ಐ. ಶರದ ಕಳಸ್ಕರ ಮತ್ತು ಸಚಿನ ಅಂದುರೆ ಈ ಇಬ್ಬರು ಯುವಕರನ್ನು ಬಂಧಿಸಿ ಅವರ ಮೇಲೆಯೂ ದಾಭೋಲಕರರ ಹತ್ಯೆಯ ಆರೋಪವನ್ನು ಹೊರಿಸಿದರು
ಅ. ಈ ಹಿನ್ನೆಲೆಯಲ್ಲಿ ಸಿ.ಬಿ.ಐ. ಶರದ ಕಳಸ್ಕರ ಮತ್ತು ಸಚಿನ ಅಂದುರೆ ಈ ಇಬ್ಬರು ಮರಾಠವಾಡಾದ ಯುವಕರನ್ನು ಬಂಧಿಸಿದರು. ಈಗ ‘ಈ ಇಬ್ಬರು ಯುವಕರು ಡಾ. ದಾಭೋಲಕರ ಇವರನ್ನು ಗುಂಡು ಹಾರಿಸಿ ಹತ್ಯೆ ಮಾಡಿದರು ? ಎಂದು ಸಿ.ಬಿ.ಐ.ಯ ಹೇಳಿಕೆಯಾಗಿತ್ತು. ಹತ್ಯೆ ಮಾಡಿದವರ ಛಾಯಾಚಿತ್ರವನ್ನು ಹತ್ಯೆಯ ಘಟನೆಯನ್ನು ಕಣ್ಣಾರೆ ಕಂಡಿರುವ ಮೂರನೇ ಸಾಕ್ಷಿದಾರನು ಗುರುತಿಸಿದ್ದರು. ಹತ್ಯೆ ಮಾಡಿದವರು ಇಬ್ಬರೇ ಆಗಿದ್ದರು, ಹೀಗಿರುವಾಗ ವರ್ಷ ೨೦೧೬ ರಲ್ಲಿ ಬೇರೆ ಮತ್ತು ೨೦೧೮ ರಲ್ಲಿ ಬೇರೆ ಇದು ಹೇಗೆ ? ಈ ಪ್ರಶ್ನೆಯಿದೆ. ಇದರ ಉತ್ತರವನ್ನು ಸಿ.ಬಿ.ಐ. ಕೊಡುತ್ತಿಲ್ಲ. ವಿಶೇಷವೆಂದರೆ ಎದ್ದರೆ ಬಿದ್ದರೆ ಸನಾತನದ ಹೆಸರು ಹೇಳುವ ದಾಭೋಲಕರ ಕುಟುಂಬವೂ ಈ ಪ್ರಶ್ನೆಯನ್ನು ಕೇಳುತ್ತಿಲ್ಲ. (ಎಲ್ಲಿಯವರೆಗೆ ಬಂಧಿತನು ಸನಾತನದೊಂದಿಗೆ ಸಂಬಂಧಿದ್ದಾನೆಯೋ, ಅಲ್ಲಿಯವರೆಗೆ ತನಿಖೆ ಸರಿಯಾದ ಮಾರ್ಗದಲ್ಲಿದೆ ಎಂದು ಅವರ ಅನಿಸಿಕೆಯಿರಬಹುದೇ ?)
ಆ. ಶರದ ಕಳಸ್ಕರ ಇವರನ್ನು ಬೇರೆ ಪ್ರಕರಣಗಳಲ್ಲಿಯೂ ಬಂಧಿಸಲಾಯಿತು. ಕರ್ನಾಟಕ ಪೊಲೀಸರು ಬೆಂಗಳೂರಿನ ಗೌರಿ ಲಂಕೇಶ ಹತ್ಯೆಯ ಪ್ರಕರಣದಲ್ಲಿ ಶರದ ಕಳಸ್ಕರ ಇವರು ಅಪರಾಧ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆಂದು ತಿಳಿಸಿದರು. ಈ ಕನ್ಫೆಷನ್‌ನಲ್ಲಿ (ತಪ್ಪೊಪ್ಪಿಗೆ ಯಲ್ಲಿ) ಕಳಸ್ಕರ ಇವರು ದಾಭೋಲ್ಕರ ಇವರ ಹತ್ಯೆಯ ಪ್ರಕರಣವನ್ನು ಉಲ್ಲೇಖಿಸಿ ಆ ಹತ್ಯೆಯಲ್ಲಿಯೂ ತಾವೇ ಭಾಗಿಯಾಗಿ ರುವುದಾಗಿ ಒಪ್ಪಿಕೊಂಡರು.
ಇ. ಕನ್ಫೆಷನ್‌ಗನುಸಾರ ದಾಭೋಲಕರ ಹತ್ಯೆಯ ೧೫ ದಿನಗಳ ಮೊದಲು ಶರದ ಕಳಸ್ಕರ ಮತ್ತು ಸಚಿನ ಅಂದುರೆ ಇವರಿಬ್ಬರೂ ಪುಣೆಗೆ ಬಂದಿದ್ದರು. ಆಗ ವಿಕ್ರಮ ಭಾವೆಯವರು ಇವರಿಬ್ಬರಿಗೆ ಎಲ್ಲಿ ಇಳಿಯುವುದು, ಎಲ್ಲಿ ನಿಲ್ಲುವುದು ಮತ್ತು ಹೇಗೆ ಓಡಿ ಹೋಗುವುದು, ಈ ಸಂದರ್ಭದಲ್ಲಿ ರಸ್ತೆ, ಪರಿಸರ ಇತ್ಯಾದಿ ತೋರಿಸಿದ್ದರು. ಹಾಗೆಯೇ ಜುಲೈ ೨೦೧೮ ರಲ್ಲಿ ನ್ಯಾಯವಾದಿ ಸಂಜೀವ ಪುನಾಳೆಕರ ಇವರು ಪಿಸ್ತೂಲನ್ನು ನಾಶಗೊಳಿಸುವ ಸಲಹೆ ನೀಡಿದರು ಎನ್ನಲಾಗಿದೆ. ಈ ಕನ್ಫೆಷನ್ ಇದೆಯೋ ಇಲ್ಲವೋ, ಎನ್ನುವುದನ್ನು ಕರ್ನಾಟಕದ ಸಂಬಂಧಪಟ್ಟ ನ್ಯಾಯಾಲಯದಲ್ಲಿ ನಿರ್ಧರಿಸಬೇಕಾಗುತ್ತದೆ; ಏಕೆಂದರೆ ಅದು ಆ ಪ್ರಕರಣಕ್ಕೆ ಸಂಬಂಧಿಸಿದೆ.
ಈ. ತಥಾಕಥಿತ ಕನ್ಫೆಷನ್ ಕಾರಣದಿಂದ ಮೊದಲು ಪುನಾಳೆಕರ ಮತ್ತು ಬಳಿಕ ವಿಕ್ರಮ ಭಾವೆಯವರನ್ನು ೨೫ ಮೇ ೨೦೧೯ ರಂದು ಸಿ.ಬಿ.ಐ. ಬಂಧಿಸಿತು. ಸಿ.ಬಿ.ಐ.ಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಂತಹ ದೊಡ್ಡ ಪ್ರಕರಣದಲ್ಲಿ ಅವರಿಂದ ಬಂಧಿಸಲ್ಪಟ್ಟ ವ್ಯಕ್ತಿ (ನ್ಯಾಯವಾದಿ ಪುನಾಳೆಕರ) ಸತ್ರ ನ್ಯಾಯಾಲಯದ ಜಾಮೀನಿನ ಮೇಲೆ ೪೨ ದಿನಗಳಲ್ಲಿಯೇ ಹೊರಗೆ ಬಂದಿರಬೇಕು. ದೊಡ್ಡ ಸಂಖ್ಯೆಯಲ್ಲಿ ನ್ಯಾಯವಾದಿಗಳು ಮತ್ತು ಕಾರ್ಯಕರ್ತರು ಈ ಹೋರಾಟದಲ್ಲಿ ಭಾಗವಹಿಸಿದ್ದರು.
೭. ಭಾವೆಯವರು ಜಾಮೀನಿನ ಮೇಲೆ ಬಿಡುಗಡೆ ಆಗಿರುವುದರಿಂದ ಹಿಂದುತ್ವನಿಷ್ಠರು ಆನಂದಿತರಾಗಿ ಸ್ವಯಂಸ್ಫೂರ್ತಿಯಿಂದ ಅವರನ್ನು ಅಭಿನಂದಿಸುವುದು
ಸಾಧಾರಣವಾಗಿ ೨ ವರ್ಷಗಳ ಬಳಿಕ ವಿಕ್ರಮ ಭಾವೆಯವರಿಗೆ ಜಾಮೀನು ಸಿಕ್ಕಿತು. ವರ್ಷ ೨೦೧೬ ರಿಂದ ಸಿ.ಬಿ.ಐ.ಗೆ ಪ್ರಕರಣವನ್ನು ನಡೆಸಲು ಬಹಳ ಉತ್ಸಾಹವಿರಲಿಲ್ಲ. ಮುಂದೆ ಏನಾಗುವುದೋ ಗೊತ್ತಿಲ್ಲ; ಆದರೆ ಈ ೨ ವರ್ಷಗಳಲ್ಲಿ ಭಾವೆಯವರು ವಿನಾಕಾರಣ ತೊಂದರೆಯನ್ನು ಅನುಭವಿಸಿದರು. ಅವರಿಗೆ ಮಧುಮೇಹ ಇರುವುದರ ಬಗ್ಗೆಯೂ ನಿರ್ಲಕ್ಷಿಸಲಾಯಿತು. ಅವರ ಮನೆಯವರೂ ತೊಂದರೆಯನ್ನು ಅನುಭವಿಸಬೇಕಾಯಿತು. ಭಾವೆಯವರ ಬಂಧನವು ರಾಜ್ಯದ ಎಲ್ಲ ಹಿಂದುತ್ವನಿಷ್ಠರಿಗೆ ನೋವಿನ ವಿಷಯವಾಗಿತ್ತು. ಹೀಗೆ ನ್ಯಾಯಾಲಯದಲ್ಲಿ ಹೋರಾಡುವಾಗ ದೊರೆತ ಪ್ರತಿಕ್ರಿಯೆಯಿಂದ ಮತ್ತು ಅವರಿಗೆ ಜಾಮೀನು ದೊರೆತ ಬಳಿಕ ಆಗಿರುವ ಮತ್ತು ಈಗಲೂ ಆಗುತ್ತಿರುವ ಅಭಿನಂದನೆಯ ಸುರಿಮಳೆಯನ್ನು ನೋಡಿದಾಗ ಅದು ಸ್ಪಷ್ಟವಾಗಿ ಕಂಡುಬರುತ್ತದೆ.
೮. ವಿಕ್ರಮ ಭಾವೆಯವರನ್ನು ಬಂಧಿಸಿರುವುದರ ಹಿಂದೆ ಇರುವ ಅದೃಶ್ಯ ಕೈವಾಡ ಕಾಲಕ್ರಮೇಣ ಸ್ಪಷ್ಟವಾಗುವುದು
ವಿಕ್ರಮ ಭಾವೆಯವರು ೨೦೦೮ ರ ಮಾಲೇಗಾಂವ ಸ್ಫೋಟ ಪ್ರಕರಣದ ಪುಸ್ತಕವನ್ನು ಬರೆದು ಆ ಪ್ರಕರಣದಲ್ಲಿ ಅದೃಶ್ಯ ಕೈ ಇರುವುದನ್ನು ಬಹಿರಂಗಪಡಿಸಿದ್ದರು. ಸಾರ್ವಜನಿಕವಾಗಿಯೂ ಅದರ ವಾಚನವಾಗಿತ್ತು. ಭಾವೆಯವರನ್ನು ದಾಭೋಲಕರ ಪ್ರಕರಣದಲ್ಲಿ ಪುರಾವೆಗಳಿಲ್ಲದೇ ಬಂಧಿಸಿರುವುದು ಅದರದ್ದೇ ಸೇಡಾಗಿರಬಹುದೇ ? ಭಾವೆಯವರು ರಾಯಗಡ ಜಿಲ್ಲೆಯ ಸ್ಥಳೀಯ ರೊಂದಿಗೆ ಪ್ರತಿಭಟನೆ ನಡೆಸಿ ಬಾಳಗಂಗಾ ಆಣೆಕಟ್ಟೆ ಯೋಜನೆಯ ಭ್ರಷ್ಟಾಚಾರದ ಪ್ರಕರಣವನ್ನು ಬಹಿರಂಗ ಪಡಿಸಿದ್ದರು. ಈ ಪ್ರಕರಣ ದಲ್ಲಿಯೂ ದೂರು ದಾಖಲಾಗಿದ್ದು, ಇಂದಿಗೂ ವಿಚಾರಣೆಯ ಆಲಿಕೆಯು ಬಹಳಷ್ಟು ಬಾಕಿಯಿದೆ. ಇದು ಅದರದ್ದೇ ಸೇಡಾಗಿತ್ತೇ ? ಅಥವಾ ಸಿ.ಬಿ.ಐ.ಗೆ ಸನಾತನಕ್ಕೆ ಮತ್ತು ಹಿಂದುತ್ವನಿಷ್ಠರಿಗೆ ಸಹಾಯ ಮಾಡುವ ನ್ಯಾಯವಾದಿ ಪುನಾಳೆಕರ ಮತ್ತು ಅವರ ಸಹಾಯಕ ಭಾವೆಯವನ್ನು ಬಂಧಿಸಿದರೆ ಸನಾತನ ಮತ್ತು ಹಿಂದುತ್ವನಿಷ್ಠರಿಗೆ ಬಹಳ ತೊಂದರೆಯಾಗಬಹುದು. ಇದರಿಂದ ಹಿಂದುತ್ವದ ಬಹಳಷ್ಟು ಹೋರಾಟಗಳು ತನ್ನಿಂತಾನೇ ತಣ್ಣಗಾಗುವುದು ಎನ್ನುವ ವಿಚಾರವಿತ್ತೇ ? ಇದರಲ್ಲಿ ಯಾವುದಾದರೂ ಅದೃಶ್ಯ ಕೈ ಹಸ್ತಕ್ಷೇಪ ಮಾಡುತ್ತಿತ್ತೇ ? ಎಂದು ಅನೇಕ ಪ್ರಶ್ನೆಗಳು ಇಂದು ಎಷ್ಟೋ ಜನರಿಗೆ ಉಂಟಾಗಿವೆ. ಕಾಲ ಮುಂದಕ್ಕೆ ಸರಿದಂತೆ ಅದರ ಉತ್ತರಗಳು ಸಿಕ್ಕೇ ಸಿಗುತ್ತದೆ. ಅಲ್ಲಿಯವರೆಗೆ ನಾವು ನ್ಯಾಯಾಲಯದ ಆದೇಶವನ್ನು ಪಾಲಿಸೋಣ ಮತ್ತು ನಮ್ಮ ಹೋರಾಟವನ್ನು ಮುಂದುವರಿಸೋಣ. ಮುಂಬರುವ ಇತಿಹಾಸವು ಇದರಿಂದಲೇ ಬರೆಯಲ್ಪಡಬಹುದು. – ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ, ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷದ್ (೧೦.೫.೨೦೨೧)
ವಿಕ್ರಮ ಭಾವೆಯವರ ಜಾಮೀನಿಗಾಗಿ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಹೋರಾಡಿದ ಧರ್ಮಾಭಿಮಾನಿ ನ್ಯಾಯವಾದಿ ಝಾ ಮತ್ತು ಉಪಾಧ್ಯಾಯ
ಸತ್ರ ನ್ಯಾಯಲಯವು ವಿಕ್ರಮ ಭಾವೆಯವರ ಜಾಮೀನು ಅರ್ಜಿಯನ್ನು ೩ ಸಲ ನಿರಾಕರಿಸಿತು. ಅದರಲ್ಲಿ ಕೊನೆಯ ೨ ಜಾಮೀನು ತಿರಸ್ಕರಿಸುವ ಆದೇಶದ ವಿರುದ್ಧ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು. ಈ ಎರಡೂ ದೂರಿನ ವಿಚಾರಣೆಯನ್ನು ಒಂದೇ ಬಾರಿಗೆ ತೆಗೆದುಕೊಳ್ಳಲಾಯಿತು. ಮುಂಬಯಿ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲಿವೃತ್ತಿಯನ್ನು ಮಾಡುವ ನ್ಯಾಯವಾದಿ ಸುಭಾಷ ಝಾ ಮತ್ತು ನ್ಯಾಯವಾದಿ ಘನಶ್ಯಾಮ ಉಪಾಧ್ಯಾಯ ಇವರಿಬ್ಬರೂ ವಿಕ್ರಮ ಭಾವೆಯವರ ಪರವಾಗಿ ಪ್ರತಿವಾದ ಮಾಡಿದರು. ಅವರಿಬ್ಬರ ಸಂಪೂರ್ಣ ಕಚೇರಿಯೇ ಈ ವಿಚಾರಣೆಯಲ್ಲಿ ಭಾಗವಹಿಸಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಈ ಪ್ರಕರಣದಲ್ಲಿ ನ್ಯಾಯವಾದಿ ಝಾರ ಸಹೋದ್ಯೋಗಿ ನ್ಯಾಯವಾದಿ ಹರೇಕೃಷ್ಣ ಮಿಶ್ರಾ ಇವರೂ ಅತ್ಯಂತ ಮನಃಪೂರ್ವಕವಾಗಿ ಸಹಭಾಗಿಗಳಾಗಿದ್ದರು. ಮೊದಲ ಆಲಿಕೆ ಆದ ಬಳಿಕ ನ್ಯಾಯವಾದಿ ಝಾ ಮತ್ತು ನ್ಯಾಯವಾದಿ ಉಪಾಧ್ಯಾಯ ಇವರಿಬ್ಬರಿಗೂ ಕೊರೊನಾ ಸೋಂಕು ತಗುಲಿತು. ಒಂದು ಆಲಿಕೆಗೆ ಇವರಿಬ್ಬರ ಉಪಸ್ಥಿತಿಯಿರಲಿಲ್ಲ. ಕೊರೊನಾದಿಂದ ಇತ್ತೀಚೆಗಷ್ಟೇ ಗುಣಮುಖರಾದ ಬಳಿಕ ಹಾಗೆಯೇ ಆಯಾಸ ಇರುವಾಗಲೂ ಕೊನೆಯ ಆದರೆ ಮಹತ್ವದ ಆಲಿಕೆಗೆ ಇವರಿಬ್ಬರೂ ಹಾಜರಿದ್ದರು ಮತ್ತು ಮನಸ್ಸಿನಿಂದ ಪ್ರತಿವಾದ ಮಾಡಿದರು. ಈ ಪ್ರಕರಣ ೬ ಮೇ ೨೦೨೧ ರಂದು ಮುಂಬಯಿ ಉಚ್ಚ ನ್ಯಾಯಾಲಯವು ತೀರ್ಪು ಘೋಷಿಸುವಾಗ ಸತ್ರ ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡ ಅಂಶಗಳು ಅಯೋಗ್ಯವಾಗಿದೆಯೆಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಶ್ರೀ. ವಿಕ್ರಮ ಭಾವೆಯವರಿಗೆ ಜಾಮೀನು ಮಂಜೂರು ಮಾಡಿತು.
ಮುಂಬಯಿ ಉಚ್ಚ ನ್ಯಾಯಾಲಯವು ಗಮನಿಸಿದ ವಿಷಯಗಳು
೧. ವಿಕ್ರಮಭಾವೆಯವರ ವಿರುದ್ಧ ಒಂದೇ ಒಂದು ಪುರಾವೆಯಿತ್ತು ಮತ್ತು ಅದೆಂದರೆ ಶರದ ಕಳಸ್ಕರ ಇವರು ನೀಡಿದ ತಥಾಕಥಿತ ಕನ್ಫೆಷನ್. ಈ ಕನ್ಷೇಷನ್‌ಅನ್ನು ೧೨ ಅಕ್ಟೋಬರ ೨೦೧೮ ರಲ್ಲಿ ನೀಡಲಾಗಿತ್ತು ಮತ್ತು ೨೫ ಮೇ ೨೦೧೯ ರಂದು ಅಂದರೆ ಸುಮಾರು ಏಳೂವರೆ ತಿಂಗಳುಗಳ ಬಳಿಕ ಭಾವೆಯವರನ್ನು ಬಂಧಿಸಲಾಗಿತ್ತು.
೨. ಈ ಕಾಲಾವಧಿಯಲ್ಲಿ ಭಾವೆಯವರು ನಮ್ಮೊಂದಿಗೆ ಇದ್ದಿದ್ದರಿಂದ ಹಾಗೆಯೇ ನಾನು ಅಥವಾ ನ್ಯಾಯವಾದಿ ಪುನಾಳೆಕರ ಇವರು ದಾಭೋಲಕರ ಹತ್ಯೆ ಆರೋಪಿಗಳ ವಕೀಲರಾಗಿರುವುದರಿಂದ ನಮಗೆ ಪರ್ಯಾಯವಾಗಿ ಭಾವೆಯವರಿಗೂ ಇಂತಹ ಯಾವುದಾದರೂ ಕಾಗದಪತ್ರಗಳು ಅವರ ವಿರುದ್ಧ ಇದೆಯೆಂದು ತಿಳಿದಿತ್ತು. ಹೀಗಿರುವಾಗಲೂ ಭಾವೆಯವರು ಓಡಿ ಹೋಗಲಿಲ್ಲ. ಸಿ.ಬಿ.ಐ.ಯು ವಿಚಾರಣೆಗೆ ಅವರನ್ನು ಕರೆಯಿಸಿದಾಗಲೆಲ್ಲ, ಅವರು ತಾವಾಗಿಯೇ ಅವರ ಕಾರ್ಯಾಲಯಕ್ಕೆ ಹಾಜರಾಗಿದ್ದಾರೆ. ಈ ವಿಷಯದ ಮೇಲೆ ಚರ್ಚೆಗಳಾಗಿವೆ. ಆಗ ಭಾವೆಯವರು ನಾನು ನಿರ್ದೋಷಿಯಾಗಿರುವುದರಿಂದ ನಾನೇಕೆ ನ್ಯಾಯಾಲಯಕ್ಕೆ ಹೋಗಲಿ ? ನಾನು ಏನೂ ಮಾಡು ವುದಿಲ್ಲ. ಸಿ.ಬಿ.ಐ.ಗೆ ಏನು ಮಾಡುವುದಿದೆಯೋ, ಅದನ್ನು ಮಾಡಲಿ. ನಾನು ಅವರಿಗೆ ಸಹಕರಿಸುತ್ತೇನೆ. ಸತ್ಯಕ್ಕೆ ಜಯ ಸಿಗುವುದು ಎಂದು ಹೇಳುತ್ತಿದ್ದರು.
೩. ಭಾವೆಯವರ ವಿರುದ್ಧದ ಕಾಗದಪತ್ರಗಳಲ್ಲಿರುವ ಒಂದು ಪುರಾವೆಯಲ್ಲಿ ೧೨.೯.೨೦೧೮ ರಂದು ಸಿ.ಬಿ.ಐ.ಯು ಭಾವೆಯವರ ಛಾಯಾಚಿತ್ರವನ್ನು ತೆಗೆದುಕೊಂಡು ಅವರನ್ನು ಕರೆಸಿದ್ದರು. ಅದರಂತೆ ಭಾವೆಯವರು ಅಲ್ಲಿಗೆ ಹೋದರು. ತದನಂತರ ಸಿ.ಬಿ.ಐ. ತನಿಖಾಧಿಕಾರಿ ಸಿಂಹ ಇವರು ಭಾವೆಯವರ ಛಾಯಾಚಿತ್ರವನ್ನು ತಮ್ಮ ವಶಕ್ಕೆ ಪಡೆದುಕೊಂಡರು ಮತ್ತು ಇಬ್ಬರು ಪಂಚರ ಎದುರಿಗೆ ಈ ಪ್ರಕ್ರಿಯೆಯ ಪಂಚನಾಮೆ ಮಾಡಿದರು. ಸಿ.ಬಿ.ಐ.ಯ ಹೇಳಿಕೆಯಂತೆ ಈ ಛಾಯಾಚಿತ್ರ ವಶಕ್ಕೆ ಪಡೆದ ತಕ್ಷಣವೇ ಅವರು ಅದೇ ಇಬ್ಬರು ಪಂಚರ ಎದುರಿಗೆ ಆ ಛಾಯಾಚಿತ್ರವನ್ನು ಶರದ ಕಳಸ್ಕರ ಇವರಿಗೆ ತೋರಿಸಿದರು. (ಕಳಸ್ಕರ ಆಗ ಸಿ.ಬಿ.ಐ. ಕಸ್ಟಡಿಯಲ್ಲಿದ್ದರು) ಆ ಚಿತ್ರವನ್ನು ಶರದ ಕಳಸ್ಕರ ಇವರು ಗುರುತಿಸಿ ಇವರು ವಿಕ್ರಮ ಭಾವೆ. ಅವರು ದಾಭೋಲ್ಕರ ಇವರ ಹತ್ಯೆಯ ಮೊದಲು ನಾನು (ಕಳಸ್ಕರ) ಮತ್ತು ಸಚಿನ ಅಂದುರೆ ಇಬ್ಬರೂ ಪುಣೆಗೆ ಹೋದಾಗ ಇದೇ ಭಾವೆಯವರು ನಮಗೆ ರಸ್ತೆ, ವಾಹನವನ್ನು ಎಲ್ಲಿಂದ ತೆಗೆದುಕೊಳ್ಳುವುದು ಮತ್ತು ಎಲ್ಲಿ ಬಿಡುವುದು ಇವೆಲ್ಲವನ್ನೂ ಹೇಳಿದ್ದರು ಎಂದು ಹೇಳಿದರು.
೪. ಇದು ಸಿ.ಬಿ.ಐ.ಗೆ ಮಹತ್ವದ ಪುರಾವೆಯಾಗಿತ್ತು; ಆದರೆ ಸುಳ್ಳಿನ ಸುಳ್ಳುತನ ಎಲ್ಲಿಯಾದರೂ ಇದ್ದೇ ಇರುತ್ತದೆ. ಇದು ನಮ್ಮ ಪ್ರತಿವಾದವಾಗಿತ್ತು. ಸಿ.ಬಿ.ಐ.ನ ಹೇಳಿಕೆಯಂತೆ ಅವರು ಮಧ್ಯಾಹ್ನ ಎರಡೂವರೆ ಗಂಟೆಗೆ ಛಾಯಾಚಿತ್ರವನ್ನು ವಶಕ್ಕೆ ಪಡೆದರು. ಘಟನಾವಳಿಗಳನ್ನು ಗಮನಿಸಿದಾಗ ಶ್ರೀ ಕಳಸ್ಕರ ಇವರಿಗೆ ಆ ಛಾಯಾಚಿತ್ರವನ್ನು ಸುಮಾರು ಮಧ್ಯಾಹ್ನ ೩ ಗಂಟೆಗೆ ಅಥವಾ ೩.೧೫ ಗಂಟೆಗೆ ತೋರಿಸುವುದು ಅಪೇಕ್ಷಿತವಾಗಿತ್ತು; ಆದರೆ ಹಾಗೆ ಆಗಲಿಲ್ಲ. ಸಿ.ಬಿ.ಐ.ನ ಹೇಳಿಕೆಯಂತೆ ಅವರು ಮಧ್ಯಾಹ್ನ ಎರಡೂವರೆ ಗಂಟೆಗೆ ಛಾಯಾಚಿತ್ರವನ್ನು ವಶಕ್ಕೆ ಪಡೆದರು ಮತ್ತು ಮಧ್ಯಾಹ್ನ ೨ ಗಂಟೆಗೆ ಅವರು ಶರದ ಕಳಸ್ಕರ ಇವರಿಗೆ ತೋರಿಸಿದರು. ಇದು ಹೇಗೆ ಸಾಧ್ಯ ?
೫. ಸಿಬಿಐಯ ಹೇಳಿಕೆಯಂತೆ ಶರದ ಕಳಸ್ಕರ ಇವರು ಪುಣೆ ನಗರದಲ್ಲಿ ಅವರು ಎಲ್ಲಿ ಇಳಿದರು, ವಾಹನವನ್ನು ಎಲ್ಲಿಂದ ತೆಗೆದುಕೊಂಡರು ಮತ್ತು ಪ್ರವಾಸ ಹೇಗೆ ಮಾಡಿದರು ಇವೆಲ್ಲವನ್ನು ತೋರಿಸಿದರು. ಇವೆಲ್ಲವನ್ನು ಹೇಳುವಾಗ ಅವರು ಮತ್ತೊಮ್ಮೆ ವಿಕ್ರಮ ಭಾವೆಯವರು ಮಾಡಿದ ಸಹಾಯವನ್ನು ಉಲ್ಲೇಖಿಸಿದರು. ನಿಜ ಹೇಳಬೇಕೆಂದರೆ ಇವುಗಳನ್ನು ಪುರಾವೆಯೆಂದು ಹೇಳಲು ಸಾಧ್ಯವಿಲ್ಲ. ಒಂದೊಮ್ಮೆ ತಿಳಿದುಕೊಂಡರೂ, ಕಳಸ್ಕರ ಇವರು ಪಂಚರ ಎದುರಿಗೆ ಆ ರೀತಿ ಹೇಳಿದ್ದರೂ ಅದನ್ನು ಪುರಾವೆಯೆಂದು ಒಪ್ಪಿಕೊಂಡರೂ, ಅದೇ ಪಂಚರು ನೀಡಿರುವ ಮನವಿಯಲ್ಲಿ ವಿಕ್ರಮ ಭಾವೆಯವರ ಹೆಸರೇ ಬರುವುದಿಲ್ಲ. ಬೇರೆಯವರ ಹೆಸರೇ ಬರುತ್ತದೆ. ಅದೂ ಇಂತಹ ದೊಡ್ಡ, ಸಂವೇದನಾಶೀಲ ಮತ್ತು ‘ಕಾನೂನುಬಾಹಿರ ಚಟುವಟಿಕೆ ಪ್ರತಿಬಂಧಕ ಕಾನೂನನ್ನು ಜಾರಿಗೊಳಿಸಿದ ಪ್ರಕರಣದಲ್ಲಿ ?
೬. ಸತ್ರ ನ್ಯಾಯಾಲಯವು ಈ ಮೊದಲು ಭಾವೆಯವರಿಗೆ ಭಯೋತ್ಪಾದಕ ಕೃತ್ಯ ಕ್ಕಾಗಿ ಶಿಕ್ಷೆಯಾಗಿತ್ತು ಎಂದು ಗ್ರಹಿಸಿತ್ತು. ಆ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯದ ಅಪೀಲು ಇನ್ನು ವಿಚಾರಣೆಯಲ್ಲಿರುವಾಗ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಹೊರಗೆ ಬಂದ ಬಳಿಕ ಅವರು ದಾಭೋಲಕರ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ತಪ್ಪಾಗಿ ಗ್ರಹಿಕೆ ಮಾಡಿಕೊಂಡಿತ್ತು. ಮೂಲದಲ್ಲಿ ಭಾವೆಯವರಿಗೆ ಭಯೋತ್ಪಾದಕ ಕೃತ್ಯಕ್ಕಾಗಿ ಶಿಕ್ಷೆ ಆಗಿಯೇ ಇರಲಿಲ್ಲ. ಇದನ್ನು ಉಚ್ಚ ನ್ಯಾಯಾಲಯವು ಒಪ್ಪಿಕೊಂಡಿತು ಮತ್ತು ಪುರಾವೆಗಳಿಲ್ಲದಿರುವಾಗ ಕೇವಲ ಹಿಂದಿನ ಹಿನ್ನೆಲೆಯನ್ನು ವಿಚಾರಣೆಗಾಗಿ ಹೇಗೆ ಪರಿಗಣಿಸ ಬಹುದು ಎಂದೂ ವಿಚಾರ ಮಾಡಿತು.
೭. ೨೦೧೮ ನೇ ಇಸವಿಯಲ್ಲಿ ಸತ್ರ ನ್ಯಾಯಾಲಯವು ಸರ್ವೋಚ್ಚ ನ್ಯಾಯಾಲಯದ ರಾಷ್ಟ್ರೀಯ ತನಿಖಾ ದಳದ ವಿರುದ್ಧ ಝಹೂರ ಅಹ್ಮದ ವತಾಲಿ ಈ ತೀರ್ಪಿನ ದೊಡ್ಡ ಆಧಾರವನ್ನೇ ಪಡೆದುಕೊಂಡಿತ್ತು. ಕಾನೂನುಬಾಹಿರ ಚಟುವಟಿಕೆ ಪ್ರತಿಬಂಧಕ ಕಾನೂನುಅನ್ನು ಯಾವ ಖಟ್ಲೆಗಳಿಗಾಗಿ ಜಾರಿಗೊಳಿಸಲಾಗಿದೆಯೋ, ಅಲ್ಲಿ ಈ ತೀರ್ಪನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. ಅದರಲ್ಲಿ ನ್ಯಾಯಾಲಯವು ಜಾಮೀನಿನ ಆಲಿಕೆಯಲ್ಲಿ ಪುರಾವೆಯು ಸತ್ಯವೋ ಅಥವಾ ಸುಳ್ಳು ಎನ್ನುವ ಚರ್ಚೆ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣವೂ ಅದೇ ರೀತಿಯಿತ್ತು. ದೆಹಲಿ ಉಚ್ಚ ನ್ಯಾಯಾಲಯವು ಪುರಾವೆಯ ಮೂಲಭೂತ ತತ್ತ್ವಗಳನ್ನು ಪಕ್ಕಕ್ಕಿಟ್ಟು ಝಹೂರ ವತಾಲಿಗೆ ಜಾಮೀನು ನೀಡಿತ್ತು. ನ್ಯಾಯಮೂರ್ತಿ ಮುರಳೀಧರ ಇವರು ತೀರ್ಪು ನೀಡಿದ್ದರು. ಈ ವಿಷಯದ ಒಂದು ಸ್ವತಂತ್ರ ಚರ್ಚೆ ಮತ್ತು ಲೇಖನವಾಗುವುದು. ಒಂದು ವೇಳೆ ಪುರಾವೆಯು ಅಸಂಬದ್ಧವಾಗಿದ್ದರೆ ಅದರ ವಿಚಾರವಾಗಬೇಕು ಎಂಬ ಅಂಶವು ಆ ತೀರ್ಪಿನ ತತ್ತ್ವವನ್ನು ವಿಕ್ರಮ ಭಾವೆಯವರ ವಿರುದ್ಧ ತೀರ್ಪು ನೀಡುವಾಗ ಪಕ್ಕಕ್ಕೆ ಸರಿಸಲಾಗಿತ್ತು.