ಯುವತಿಯ ಕುಟುಂಬದವರಿಂದ ಜೀವ ಬೆದರಿಕೆ
|
ಪ್ರಯಾಗರಾಜ (ಉತ್ತರ ಪ್ರದೇಶ) – ಮುಸ್ಲಿಂ ಯುವತಿಯೊಬ್ಬಳು ಹಿಂದೂ ಧರ್ಮವನ್ನು ಸ್ವೀಕಾರ ಮಾಡಿ ಹಿಂದೂ ಯುವಕನನ್ನು ಮದುವೆಯಾದ ನಂತರ ಆಕೆಗೆ ಭದ್ರತೆ ಒದಗಿಸುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯ ಮೆರಠ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶಿಸಿದೆ. ಆಕೆಯ ವೈವಾಹಿಕ ಜೀವನದಲ್ಲಿ ಪೊಲೀಸರು ಹಸ್ತಕ್ಷೇಪ ಮಾಡಬಾರದು ಎಂದೂ ಸಹ ನ್ಯಾಯಾಲಯವು ಆದೇಶಿಸಿದೆ. ಜೊತೆಗೆ ಆಕೆಯ ತಂದೆ ಅಥವಾ ಕುಟುಂಬ ಸದಸ್ಯರು, ಸ್ನೇಹಿತರು ಅಥವಾ ಪ್ರಸಾರ ಮಾಧ್ಯಮದ ಸದಸ್ಯರು ಆಕೆಗೆ ದೈಹಿಕವಾಗಿ ತೊಂದರೆನೀಡದಂತೆ ನೋಡಿಕೊಳ್ಳಲು ಸಹ ಹೇಳಲಾಗಿದೆ. ಮುಂದಿನ ನಾಲ್ಕು ವಾರಗಳಲ್ಲಿ ಈ ವಿಷಯದಲ್ಲಿ ಪ್ರತಿಜ್ಞಾಪತ್ರ ಸಲ್ಲಿಸುವಂತೆ ನ್ಯಾಯಾಲಯ ವುರಾಜ್ಯ ಸರಕಾರಕ್ಕೆ ಆದೇಶ ನೀಡಿದೆ.
Allahabad High Court orders protection for woman who converted from Islam to Hindu religion, married as per Hindu rites
report by @Areebuddin14#allahabadhighcourt #religiousfreedom
https://t.co/UQwBtSFSoH— Bar & Bench (@barandbench) May 27, 2021
ಹಿಂದೂ ಆದ ನಂತರ ಯುವತಿಯು ತನ್ನ ಹೆಸರನ್ನು ‘ಯತಿ’ ಎಂದು ಬದಲಾಯಿಸಿಕೊಂಡಳು. ಆಕೆಯು ತಾನು ಮತಾಂತರಗೊಂಡಿರುವ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಳು ಮತ್ತು ಮಾಹಿತಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದಳು. ಆಕೆ ಏಪ್ರಿಲ ತಿಂಗಳಲ್ಲಿ ಹಿಂದೂ ಯುವಕನನ್ನು ವಿವಾಹವಾಗಿದ್ದಳು. ನಂತರ ಆಕೆಯ ಕುಟುಂಬದಿಂದ ಜೀವ ಬೆದರಿಕೆ ಬಂದ ನಂತರ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಳು.