ಓಹಾಯೋ (ಅಮೇರಿಕಾ) – ಅಮೇರಿಕಾದ ಓಹಾಯೋ ರಾಜ್ಯದಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ದೀಪಾವಳಿಯ ರಜೆ ಘೋಷಣೆಯಾಗಿದೆ ಹಾಗೂ ಹಿಂದೂ ವಿದ್ಯಾರ್ಥಿಗಳು ಅವರ ಶೈಕ್ಷಣಿಕ ವರ್ಷದಲ್ಲಿ ಧಾರ್ಮಿಕ ಉತ್ಸವದ ಸಮಯದಲ್ಲಿಯೂ ಕೂಡ ೨ ರಜೆ ಪಡೆಯಬಹುದು. ಭಾರತೀಯ ಮೂಲದ ಅಮೇರಿಕ ಸಂಸದ ನೀರಜ್ ಆಂಟನಿ ಇವರು ಈ ಘೋಷಣೆ ಮಾಡಿದರು. ನೀರಜ್ ಅವರು ಈ ಬಗ್ಗೆ ಮಾತನಾಡಿ, ನನ್ನಿಂದ ಮಂಡಿಸಲಾದ ಈ ವಿಧೇಯಕವು ಓಹಾಯೋ ಸ್ಟೇಟ್ ಹೌಸ್ ಮತ್ತು ಸಿನೆಟ್ ಅಂಗೀಕರಿಸಿತ್ತು. ಈಗ ಓಹಾಯೋದ ರಾಜ್ಯಪಾಲ ಮಾಯಿಕ್ ಡಿವಿನ್ ಅವರು ಅದನ್ನು ಅಂಗೀಕರಿಸಿದ್ದಾರೆ ಎಂದು ತಿಳಿಸಿದರು.
ಸಂಸದ ನೀರಜ್ ಆಂಟನಿ ಅವರು ಮುಂದೆ ಮಾತನಾಡಿ,
೧. ನೂತನ ವಿಧೇಯಕದಿಂದ ಓಹಾಯೋ ದಲ್ಲಿನ ಪ್ರತಿಯೊಂದು ವಿದ್ಯಾರ್ಥಿಯು ೨೦೨೫ ರಲ್ಲಿ ದೀಪಾವಳಿ ರಜೆ ಪಡೆಯಬಹುದು. ಹಾಗೂ ಇತರ ೨ ಹಬ್ಬಗಳಲ್ಲಿಯೂ ಕೂಡ ರಜೆ ಪಡೆಯಬಹುದು. ಇದು ಓಹಾಯೋ ದಲ್ಲಿನ ಹಿಂದೂಗಳ ಅವಿಸ್ಮರಣೀಯ ಗೆಲುವಾಗಿದೆ. ವಿದ್ಯಾರ್ಥಿಗಳಿಗೆ ದೀಪಾವಳಿ ರಜೆ ನೀಡಿದ ಓಹಾಯೋ ಅಮೇರಿಕಾದ ಇತಿಹಾಸದಲ್ಲಿಯೇ ಮೊದಲ ರಾಜ್ಯವಾಗಿದೆ.
೨. ನಮ್ಮ ಕಾನೂನಿನ ಪ್ರಕಾರ ವಿದ್ಯಾರ್ಥಿಗಳಿಗೆ ಇತರ ೨ ಧಾರ್ಮಿಕ ರಜೆಗಳನ್ನು ಪಡೆಯಲು ಅನುಮತಿ ನೀಡಲಾಗುವುದು, ಇದರ ಅರ್ಥ ಏನೆಂದರೆ ಗುಜರಾತಿ ಹಿಂದೂ ವಿದ್ಯಾರ್ಥಿ ನವರಾತ್ರಿ ಅಥವಾ ಅನ್ನಕೂಟ ಮಹೋತ್ಸವದ (ಗೋವರ್ಧನ ಪೂಜೆ) ವೇಳೆ ಒಂದು ದಿನ ರಜೆ ಪಡೆಯಬಹುದು. ತೆಲುಗು ಹಿಂದೂ ವಿದ್ಯಾರ್ಥಿಗಳು ಯುಗಾದಿ, ತಮಿಳು ಹಿಂದೂ ವಿದ್ಯಾರ್ಥಿಗಳು ಪೊಂಗಲ್, ಬಂಗಾಲಿ ಹಿಂದೂ ವಿದ್ಯಾರ್ಥಿಗಳು ದುರ್ಗಾ ಪೂಜೆಗಾಗಿ, ಪಂಜಾಬಿ ಹಿಂದು ವಿದ್ಯಾರ್ಥಿಗಳು ಲೋಹರಿ ಹಾಗೂ ಇಸ್ಕಾನ್ ಸಂಪ್ರದಾಯದ ಪ್ರಕಾರ ಸಾಧನೆ ಮಾಡುವ ಹಿಂದೂ ವಿದ್ಯಾರ್ಥಿಗಳು ಕೃಷ್ಣ ಜನ್ಮಾಷ್ಟಮಿಗೆ ರಜೆ ಪಡೆಯಬಹುದು.
೩. ಓಹಾಯೋದಲ್ಲಿ ಯಾವುದೇ ಹಿಂದೂ ವಿದ್ಯಾರ್ಥಿಗಳಿಗೆ ಈ ಹಬ್ಬಗಳಿಂದ ತಮ್ಮ ವಿದ್ಯಾಭ್ಯಾಸದಲ್ಲಿ ಸಮಸ್ಯೆ ಉಂಟಾಗುವುದಿಲ್ಲ. ಈ ವಿಧೇಯಕದ ಪ್ರಕಾರ ಪೋಷಕರು ಶಾಲೆಯ ಮುಖ್ಯೋಪಾಧ್ಯಾಯರಿಗೆ ರಜೆ ಪಡೆಯುವ ಬಗ್ಗೆ ಸಹಿ ಮಾಡಿರುವ ಪತ್ರ ನೀಡಬೇಕು. ಈ ಪತ್ರದಲ್ಲಿ ವಿದ್ಯಾರ್ಥಿಯು ಪಡೆದಿರುವ ಧಾರ್ಮಿಕ ರಜೆಯ ಉಲ್ಲೇಖ ಮಾಡಲಾಗುವುದು. ಸಹಿ ಮಾಡಿರುವ ಪತ್ರ ಶಾಲೆಯ ವರ್ಷದ ಮೊದಲ ದಿನದಿಂದ ೧೪ ದಿನದಲ್ಲಿ ಮುಖ್ಯೋಪಾಧ್ಯಾಯರಿಗೆ ಕಳುಹಿಸಲಾಗುವುದು.