ಮದರಸಾಗಳಲ್ಲಿನ ಶಿಕ್ಷಕರಿಗೆ ಪಿಂಚಣಿ ಏಕೆ ನೀಡಲಾಗುತ್ತಿದೆ? – ಕೇರಳ ಉಚ್ಚನ್ಯಾಯಾಲಯದಿಂದ ಪಿಣರಾಯಿ ವಿಜಯನ ಸರಕಾರಕ್ಕೆ ಪ್ರಶ್ನೆ

ಈ ರೀತಿ ಪಿಂಚಣಿಯನ್ನು ವೇದ ಪಾಠಶಾಲೆಗಳಿಗೆ ಎಂದಾದರೂ ನೀಡಲಾಗಿದೆಯೇ ? ಜಾತ್ಯತೀತ ದೇಶದಲ್ಲಿ ಧರ್ಮದ ಆಧಾರದ ಮೇಲೆ ಹೀಗೆ ತಾರತಮ್ಯ ಮಾಡುವುದು ಸರಕಾರ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿ !

ಅನೇಕ ಮದರಸಾಗಳಿಂದ ಭಯೋತ್ಪಾದಕರು ತಯಾರಾಗುತ್ತಿರುವ ಹಾಗೂ ಅವರು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಬಹಿರಂಗವಾಗಿದ್ದರೂ, ಸರಕಾರವು ಅವುಗಳನ್ನು ನಿಷೇಧಿಸುವುದರ ಬಗ್ಗೆ ಚಕಾರ ಎತ್ತುತ್ತಿಲ್ಲ. ತದ್ವಿರುದ್ಧವಾಗಿ, ಅನೇಕ ರಾಜ್ಯ ಸರಕಾರಗಳು ಅವರಿಗೆ ಅನುದಾನ, ಅದೇರೀತಿ ಶಿಕ್ಷಕರಿಗೆ ಪಿಂಚಣಿಗಳನ್ನು ನೀಡುತ್ತವೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ತಿರುವನಂತಪುರಂ – ಮದರಸಾಗಳಲ್ಲಿ ಶಿಕ್ಷಕರಿಗೆ ಪಿಂಚಣಿ ಏಕೆ ನೀಡಲಾಗುತ್ತಿದೆ ಎಂಬ ಪ್ರಶ್ನೆಯನ್ನು ಕೇರಳ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎ. ಮೊಹಮ್ಮದ್ ಮತ್ತು ನ್ಯಾಯಮೂರ್ತಿ ಕೌಸರ್ ಎಡಪ್ಪಾಗಥ ಅವರ ನ್ಯಾಯಪೀಠವು ರಾಜ್ಯದ ಪಿಣರಾಯಿ ವಿಜಯನ್ ಸರಕಾರವನ್ನು ಕೇಳಿದೆ. ಮದರಸಾ ಶಿಕ್ಷಕರಿಗೆ ಪಿಂಚಣಿ ನೀಡುವ ಕೇರಳ ರಾಜ್ಯ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಇಲ್ಲಿನ ನಾಗರಿಕ ಸಂಘದ ಸಚಿವ ಮನೋಜ್ ಅವರು ತಮ್ಮ ನ್ಯಾಯವಾದಿ ಸಿ. ರಾಜೇಂದ್ರ ಇವರ ಮೂಲಕ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ. ಈ ಕುರಿತು ಇತ್ತೀಚೆಗೆ ನಡೆದ ವಿಚಾರಣೆಯ ವೇಳೆ ನ್ಯಾಯಾಲಯವು ಮೇಲಿನ ಪ್ರಶ್ನೆಯನ್ನು ಸರಕಾರಕ್ಕೆ ಕೇಳಿದೆ. ಇದರೊಂದಿಗೆ ನ್ಯಾಯಾಲಯವು `ಕೇರಳ ಮದರಸಾ ಶಿಕ್ಷಣ ಕಲ್ಯಾಣ ನಿಧಿ’ಗೆ ಸರಕಾರವು ಯೋಗದಾನ ನೀಡಿದೆಯೇ ಅಥವಾ ಇಲ್ಲವೇ ?, ಎಂದೂ ಸಹ ಪ್ರಶ್ನಿಸಿದೆ. ‘ಕೇರಳ ಮದರಸಾ ಶಿಕ್ಷಣ ಕಲ್ಯಾಣ ನಿಧಿ’ ಇದನ್ನು ಮದರಸಾಗಳಲ್ಲಿನ ಶಿಕ್ಷಕರಿಗೆ ಪಿಂಚಣಿ ಸೇರಿದಂತೆ ಇನ್ನೂ ಅನೇಕ ಸೌಲಭ್ಯಗಳನ್ನು ಒದಗಿಸಲು ಎಡಪಂಥಿಯ ಸರಕಾರವು ೨೦೧೯ ರಲ್ಲಿ ಸ್ಥಾಪಿಸಿತ್ತು. ಆದ್ದರಿಂದ ಅರ್ಜಿದಾರರು ಈ ನಿಧಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.

ಈ ಸಮಯದಲ್ಲಿ ಯುಕ್ತಿವಾದ ಮಾಡುವಾಗ, ನ್ಯಾಯವಾದಿ ಸಿ. ರಾಜೇಂದ್ರನ್ ಅವರು, ಈ ಅಧಿನಿಯಮವನ್ನು ಓದಿದ ನಂತರ ‘ಮದರಸಾಗಳು ಕುರಾನ್ ಮತ್ತು ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಶಿಕ್ಷಣವನ್ನು ಮಾತ್ರ ನೀಡುತ್ತವೆ’, ಎಂದು ಸ್ಪಷ್ಟವಾಯಿತು. ಹೀಗಿರುವಾಗ ಅವುಗಳಿಗೆ ಹಣಕಾಸು ಒದಗಿಸುವುದು ಸಂಪೂರ್ಣವಾಗಿ ಅಸಂವಿಧಾನಿಕ ಮತ್ತು ಜಾತ್ಯತೀತ ತತ್ತ್ವಗಳಿಗೆ ವಿರುದ್ಧವಾಗಿದೆ. ಎಂದು ಹೇಳಿದರು. ನ್ಯಾಯಪೀಠವು, ಕೇರಳದ ಮದರಸಾಗಳು ಒಂದು ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿರುವುದರಿಂದ, ರಾಜ್ಯ ಸರಕಾರವು ಅವರಿಗೆ ಆರ್ಥಿಕ ನೆರವು ನೀಡಲು ಕಾರಣವೇನು ಎಂದು ಕೇಳಿದೆ.