ಮದ್ರಾಸ್ ಉಚ್ಚನ್ಯಾಯಾಲಯ ಮತ್ತು ಚುನಾವಣಾ ಆಯೋಗದ ನಡುವಿನ ವಿವಾದದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪು

‘ಉಚ್ಚ ನ್ಯಾಯಾಲಯದ ಭಾಷೆ ಸಂವೇದನಾಶೀಲವಾಗಿರಬೇಕು’, ಹಾಗೂ ‘ಚುನಾವಣಾ ಆಯೋಗವೂ ಆದೇಶವನ್ನು ಪಾಲಿಸಬೇಕು’ !

ನವ ದೆಹಲಿ – ದೇಶದಲ್ಲಿ ಇತ್ತೀಚೆಗೆ ನಡೆದ ಐದು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮದ್ರಾಸ್ ಉಚ್ಚನ್ಯಾಯಾಲಯವು ಚುನಾವಣಾ ಆಯೋಗವನ್ನು ಹೊಣೆಗಾರರನ್ನಾಗಿ ಮಾಡಿ, ‘ಕೊಲೆಯ ಅಪರಾಧವನ್ನು ನೋಂದಾಯಿಸಬೇಕು’, ಎಂಬ ಶಬ್ದಗಳಲ್ಲಿ ಹೇಳಿತ್ತು. ಇದರ ವಿರುದ್ಧ ಚುನಾವಣಾ ಆಯೋಗವು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ, ಸರ್ವೋಚ್ಚ ನ್ಯಾಯಾಲಯವು ಮದ್ರಾಸ್ ಉಚ್ಚನ್ಯಾಯಾಲಯದ ಪ್ರತಿಕ್ರಿಯೆ ತುಂಬಾ ಪ್ರಬಲವಾಗಿದೆ ಮತ್ತು ಘಟನೆಯನುಸಾರ ಈ ಭಾಷೆಯು ಸಂವೇದನಾಶೀಲವಾಗಿರಬೇಕಿತ್ತು ಎಂದು ಹೇಳಿದೆ. ಅದೇರೀತಿ ಚುನಾವಣಾ ಆಯೋಗವೂ ಆದೇಶವನ್ನು ಪಾಲಿಸಬೇಕಾಗಿತ್ತು. ಮದ್ರಾಸ್ ಉಚ್ಚ ನ್ಯಾಯಾಲಯವು ಈ ರೀತಿಯ ಪ್ರತಿಕ್ರಿಯೆಯನ್ನು ತೀರ್ಪಿನ ಭಾಗವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.