ಮೀಸಲಾತಿಯಲ್ಲಿಯೂ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವ ಕೇರಳದ ಕಮ್ಯುನಿಸ್ಟ್ ಸರಕಾರ ಸಾಮ್ಯವಾದವನ್ನು ತರುತ್ತದೆಯಂತೆ !
|
ತಿರುವನಂತಪುರಂ (ಕೇರಳ) – ಮುಸಲ್ಮಾನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದಲ್ಲಿ ಶೇ. ೮೦ ರಷ್ಟು ಮತ್ತು ಲ್ಯಾಟಿನ್ ಕ್ಯಾಥೊಲಿಕರಿಗೆ ಮತ್ತು ಮತಾಂತರಗೊಂಡ ಕ್ರೈಸ್ತರಿಗೆ ಶೇ. ೨೦ ರಷ್ಟು ಮೀಸಲಾತಿ ನೀಡುವ ರಾಜ್ಯ ಸರಕಾರದ ಆದೇಶವನ್ನು ಕೇರಳ ಉಚ್ಚ ನ್ಯಾಯಾಲಯವು ರದ್ದುಪಡಿಸಿದೆ. ನ್ಯಾಯಾಲಯವು, ರಾಜ್ಯ ಸರಕಾರದ ಆದೇಶವು ಕಾನೂನಿನ ಮುಂದೆ ನಿಲ್ಲುವುದಿಲ್ಲ ಆದ್ದರಿಂದ ಸರಕಾರವು ಸೂಚಿಸಿದ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಗುಣಮಟ್ಟದ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂದು ಹೇಳಿದೆ.
High court scraps 80% share for Muslims in Kerala minority scholarships https://t.co/0FOHTkpccJ
— TOI India (@TOIIndiaNews) May 29, 2021
೧. ನ್ಯಾಯಾಲಯವು, ಸರಕಾರದಿಂದ ದುರ್ಬಲ ವರ್ಗದವರಿಗೆ ಮೀಸಲಾತಿ ನೀಡುವುದು ತಪ್ಪಲ್ಲ ಆದರೆ ಸೂಚಿಸಿದ ಅಲ್ಪಸಂಖ್ಯಾತರ ವಿಷಯಕ್ಕೆ ಬಂದಾಗ, ಅವರೊಂದಿಗೆ ಸಮಾನವಾಗಿ ವ್ಯವಹರಿಸಬೇಕು. ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡುವ ಯಾವುದೇ ಹಕ್ಕು ಸರಕಾರಕ್ಕೆ ಇಲ್ಲ. ಈ ಪ್ರಕರಣದಲ್ಲಿ ರಾಜ್ಯದ ಕ್ರೈಸ್ತರ ಜನಸಂಖ್ಯೆಯ ಆಧಾರದ ಮೇಲೆ ಅವರಿಗೆ ಮೀಸಲಾತಿಯ ಅಧಿಕಾರವನ್ನು ಕಡೆಗಣಿಸಿ ಮುಸಲ್ಮಾನರಿಗೆ ಶೇ. ೮೦ ರಷ್ಟು ಮೀಸಲಾತಿ ನೀಡಲಾಗುತ್ತಿದ್ದು, ಇದು ಅಸಂವಿಧಾನಿಕ ಮತ್ತು ಯಾವುದೇ ಕಾನೂನು ಅದನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದೆ.
೨. ನ್ಯಾಯವಾದಿ ಜಸ್ಟಿನ್ ಪಲ್ಲೀವಾಥುಕಲ ಇವರು ಸರಕಾರದ ಆದೇಶದ ವಿರುದ್ಧ ಅರ್ಜಿಯನ್ನು ದಾಖಲಿಸಿ ‘ಸರಕಾರವು ಮುಸಲ್ಮಾನರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ’ ಎಂದು ಹೇಳಿದ್ದರು.
ಸರಕಾರವು ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ತೆಗೆದುಕೊಳ್ಳುವ ಅಲ್ಪಸಂಖ್ಯಾತ ಧರ್ಮದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತದೆ.