|
ಕನ್ನೌಜ (ಉತ್ತರ ಪ್ರದೇಶ) – ಇಲ್ಲಿನ ಬಾಲಾಪೀರ ಪ್ರದೇಶದಲ್ಲಿ 200 ವರ್ಷಗಳಷ್ಟು ಹಳೆಯ ಶ್ರೀ ಜಗೇಶ್ವರನಾಥ ಶಿವ ದೇವಸ್ಥಾನವನ್ನು ಅತಿಕ್ರಮಣ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸಮಾಜವಾದಿ ಪಕ್ಷದ ನಾಯಕ ಕೈಶ ಖಾನ್ ಪುರಾತನ ಜಾಗೇಶ್ವರನಾಥ ಶಿವ ದೇವಸ್ಥಾನವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದಾನೆ ಮತ್ತು ಅಲ್ಲಿ 3 ಅಂತಸ್ತಿನ ಮನೆಯನ್ನು ನಿರ್ಮಿಸಿದ್ದಾನೆ ಎಂದು ಆರೋಪಿಸಲಾಗಿದೆ. ಸಮಾಜವಾದಿ ಪಕ್ಷದ ಸರಕಾರದ ಅವಧಿಯಲ್ಲಿ ದೇವಸ್ಥಾನದಿಂದ ಶಿವಲಿಂಗ ಮತ್ತು ಮೂರ್ತಿಗಳನ್ನು ತೆಗೆದು ಬಾವಿಗೆ ಎಸೆಯಲಾಯಿತು ಮತ್ತು ಅಲ್ಲಿ ಕಟ್ಟಡನಿರ್ಮಾಣ ಮಾಡಲಾಗಿದೆ ಎಂದು ಸ್ಥಳೀಯರು ಮತ್ತು ಭಾಜಪ ಮುಖಂಡರು ಆರೋಪಿಸಿದ್ದಾರೆ.
Samajwadi Party leader Kaish Khan encroached on a 200 year old Shiva temple in Kannauj (Uttar Pradesh), and threw the Shivling and idols into the well.
The fanatical leader went on to threaten the opposing Hindus to implicate them in false cases.
This is not in Afghanistan,… pic.twitter.com/Oqbin8erQL
— Sanatan Prabhat (@SanatanPrabhat) December 27, 2024
1. ಅತಿಕ್ರಮಣವನ್ನು ಸ್ಥಳೀಯರು ಪ್ರತಿಭಟಿಸಿದಾಗ ಕೈಶ ಖಾನ್ ಅವರಿಗೆ ಬೆದರಿಕೆ ಹಾಕಿ, ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಹೇಳಿದ್ದಾನೆ. ತದನಂತರ ಭೂರಾ ಖಾನ್ ಮತ್ತು ಇತರ ಸ್ಥಳೀಯ ನಿವಾಸಿಗಳು ಈ ಪ್ರಕರಣದ ದೂರನ್ನು ಭಾಜಪ ಮುಖಂಡರಿಗೆ ನೀಡಿದರು. ಭಾಜಪ ಮಾಜಿ ಸಂಸದ ಸುಬ್ರತ ಪಾಠಕ, ತಿರ್ವಾ ಕ್ಷೇತ್ರದ ಶಾಸಕ ಕೈಲಾಶ ರಾಜಪೂತ್ ಮತ್ತು ಇತರ ಕಾರ್ಯಕರ್ತರು ಡಿಸೆಂಬರ್ 26 ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದರು.
2. ಭಾಜಪ ಮುಖಂಡರು ಮಾತನಾಡಿ, ಇಲ್ಲಿರುವ ಬಾವಿ ತೋಡಿದರೆ ಅದರಲ್ಲಿ ಶಿವಲಿಂಗ ಮತ್ತಿತರ ಮೂರ್ತಿಗಳು ಸಿಗುತ್ತವೆ. ಇದು ನೇರ ಹಿಂದೂ ಧರ್ಮದ ಮೇಲಿನ ದಾಳಿಯಾಗಿದೆ ಎಂದು ಹೇಳಿದ್ದಾರೆ.
3. ಮಾಜಿ ಸಂಸದರು ಜಿಲ್ಲಾಧಿಕಾರಿ ಶುಭ್ರಾಂತ ಕುಮಾರ ಶುಕ್ಲಾ ಅವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು. ದೇವಸ್ಥಾನದ ಭೂಮಿ ಕಬಳಿಸಿದ ನಾಯಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
4. ಜಿಲ್ಲಾಧಿಕಾರಿ ಶುಕ್ಲಾ ಶೀಘ್ರವೇ ಅಧಿಕಾರಿಗಳ ತಂಡವನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗುವುದು ಮತ್ತು ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಪ್ರಕರಣದ ಗಂಭೀರತೆ ಪರಿಗಣಿಸಿ ತನಿಖೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆಶಿಶ್ ಕುಮಾರ್ ಅವರಿಗೆ ವಹಿಸಲಾಗಿದೆ. 2 ದಿನಗಳಲ್ಲಿ ವರದಿ ತರಿಸಿಕೊಳ್ಳಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
5. ಮಾಜಿ ಸಂಸದ ಸುಬ್ರತಾ ಪಾಠಕ್ ಮಾತನಾಡಿ, ಒಂದು ವೇಳೆ ಆಡಳಿತ ದೇವಸ್ಥಾನವನ್ನು ಮುಕ್ತಗೊಳಿಸಿ ಶಿವಲಿಂಗದ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳದಿದ್ದರೆ ನಾನು ನನ್ನ ಬೆಂಬಲಿಗರೊಂದಿಗೆ ಬಾಲಾಪೀರ್ ಮೊಹಲ್ಲಾದಲ್ಲಿ ಧರಣಿ ಆಂದೋಲನ ನಡೆಸುತ್ತೇನೆ ಎಂದು ಹೇಳಿದ್ದಾರೆ.
6. ವಿಶ್ವ ಹಿಂದೂ ಪರಿಷತ್ ದೇವಸ್ಥಾನದ ಭೂಮಿಯ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿದೆ. ‘ಇಂತಹ ಘಟನೆಗಳಿಂದ ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ’ ಎಂದು ಹೇಳಿದೆ.
7. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮಾತನಾಡಿ, ಇದು ಹುರುಳಿಲ್ಲದ ಆರೋಪ ಎಂದು ಹೇಳಿದ್ದಾರೆ. ಅವರು ಮಾತನಾಡಿ, ಕೈಶ್ ಭೂಮಿಯನ್ನು ಖರೀದಿಸಿದ್ದು, ಧಾರ್ಮಿಕ ಕ್ಷೇತ್ರವು ಇನ್ನೂ ಸುರಕ್ಷಿತವಾಗಿದೆ, ಭಾಜಪ ವಾತಾವರಣವನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿದರು.
ಸಂಪಾದಕೀಯ ನಿಲುವು
|