ಕ್ರೈಸ್ತ ಧರ್ಮಪ್ರಚಾರಕರು ಇತರ ಧರ್ಮಗಳನ್ನು, ವಿಶೇಷವಾಗಿ ಹಿಂದೂ ಧರ್ಮವನ್ನು ವಿರೋಧಿಸುತ್ತಾರೆ. ಅದರ ಅವಮಾನವನ್ನು ಮಾಡಲಾಗುತ್ತದೆ. ಈ ಬಗ್ಗೆ ದೇಶದಲ್ಲಿನ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಎಂದಿಗೂ ಬಾಯಿ ತೆರೆಯುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಕ್ರೈಸ್ತ ಧರ್ಮಪ್ರಚಾರಕರು ಭಗವದ್ಗೀತೆ ಮತ್ತು ಕುರಾನ್ ಅನ್ನು ಅವಮಾನಿಸಿದ್ದಕ್ಕಾಗಿ ಅವರ ವಿರುದ್ಧ ಹಿಂದೂ ಮಹಿಳೆ ಸಲ್ಲಿಸಿದ್ದ ದೂರನ್ನು ಹಿಂಪಡೆಯಲು ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ !
ಬೆಂಗಳೂರು – ತಮ್ಮ ಧರ್ಮದ ಪ್ರಚಾರ ಮಾಡುವಾಗ ಇತರೆ ಧರ್ಮಗಳನ್ನು ಅವಮಾನಿಸುವ ಮೂಲಭೂತ ಅಧಿಕಾರವನ್ನು ಯಾವುದೇ ಧರ್ಮಕ್ಕೆ ನೀಡಲಾಗುವುದಿಲ್ಲ. ಯಾವುದೇ ಧರ್ಮಗುರುಗಳು ಅಥವಾ ಯಾವುದೇ ವ್ಯಕ್ತಿಯು ಸ್ವಂತ ಧರ್ಮದ ಪ್ರಚಾರ ಮಾಡುವಾಗ ಇತರ ಧರ್ಮದ ಅವಮಾನ ಆಗದಂತೆ ಎಚ್ಚರ ವಹಿಸಬೇಕು ಎಂದು ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಎಚ್.ಪಿ. ಸಂದೇಶ ಇವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ’ಧರ್ಮದ ಅವಹೇಳನೆಯನ್ನು ಆರೋಪಿಸಿ’ ದಾಖಲಾದ ಕ್ರಿಮಿನಲ್ ದೂರನ್ನು ವಜಾಗೊಳಿಸ ಬೇಕೆಂದು ಆರೋಪಿಗಳು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸುತ್ತಾ ಈ ಹೇಳಿಕೆಯನ್ನು ನೀಡಿದ್ದಾರೆ.
೧. ಓರ್ವ ಹಿಂದೂ ಮಹಿಳೆಯು ನೀಡಿದ ದೂರಿನಲ್ಲಿ, ಕ್ರೈಸ್ತ ಧರ್ಮಪ್ರಚಾರಕರು ಆಕೆಯ ನಿವಾಸಕ್ಕೆ ಬಂದು ಇತರ ಧರ್ಮ ಗಳನ್ನು ನಿಂದಿಸಿದ್ದಾರೆ. ’ಭಗವದ್ಗೀತೆ ಅಥವಾ ಕುರಾನ್ ಇವುಗಳಿಂದ ಶಾಂತಿ ಸಿಗದು. ಆಪತ್ಕಾಲದಲ್ಲಿ ಯೇಸುಕ್ರಿಸ್ತನನ್ನು ಹೊರತುಪಡಿಸಿ ಬೇರೆ ಯಾರೂ ಸಂಕಟದಿಂದ ಪಾರು ಮಾಡಲಾರರು’ ಎಂದು ಅವರು ಹೇಳಿದರು ಎಂದು ಆರೋಪಿಸಿದ್ದಾಳೆ. (ಇದು ನಿಜವೆಂದಾದರೆ, ಇಂದು ಅಮೆರಿಕ ಮತ್ತು ಯುರೋಪಿನ ಲಕ್ಷಾಂತರ ಕ್ರೈಸ್ತರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಯೇಸು ಅವರನ್ನು ಏಕೆ ಕಾಪಾಡಲಿಲ್ಲ ? ಎಂದು ಹೇಳಬಹುದೇ ? – ಸಂಪಾದಕರು)
೨. ನಿಂದನೆಯ ಆರೋಪ ಹೊತ್ತಿರುವ ಕ್ರೈಸ್ತ ಧರ್ಮಪ್ರಚಾರಕರು ಈ ದೂರನ್ನು ದಾಖಲಿಸಬಾರದು ಎಂಬ ಆದೇಶ ನೀಡಬೇಕೆಂದು ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಆದೇಶದಿಂದ ಭಾರತೀಯ ಸಂವಿಧಾನದ ೧೪, ೨೧ ಮತ್ತು ೨೫ ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದರು.
೩. ಅರ್ಜಿಗೆ ಸ್ಪಂದಿಸದ ಉಚ್ಚ ನ್ಯಾಯಾಲಯವು, ಆರೋಪಿಯ ಹೇಳಿಕೆಗಳು ಇತರ ಧರ್ಮದ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶದಿಂದ ನೀಡಲಾಗಿದೆ ಎಂದು ಕಂಡು ಬರುತ್ತದೆ. ಇಂತಹ ಸಂದರ್ಭದಲ್ಲಿ ಸತ್ಯ ಇದ್ದಾಗ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೨೯೮ ರ (ಧರ್ಮವನ್ನು ನೋಯಿಸುವುದು) ಅಡಿಯಲ್ಲಿ ಅದು ಅಪರಾಧವಾಗುತ್ತದೆ. ಆದ್ದರಿಂದ ಕ್ರಿಮಿನಲ್ ದೂರನ್ನು ವಜಾಗೊಳಿಸ
ಬೇಕೆಂಬ ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ ಎಂದು ಹೇಳಿದೆ.