ಅಯೋಧ್ಯಾ, ಕಾಶಿ ಮತ್ತು ಮಥುರಾದ ದೇವಸ್ಥಾನಗಳ ಮುಕ್ತಿಗಾಗಿ ನಡೆಸಿದ ನ್ಯಾಯಾಂಗ ಹೋರಾಟ !

ಅನಂತರ ಕೊನೆಯದಾಗಿ ೧೬೧೮ ರಲ್ಲಿ ರಾಜಾ ವೀರಸಿಂಹ ಬುಂದೇಲಾ ಇವರು ೩೩ ಲಕ್ಷ ರೂಪಾಯಿಗಳಷ್ಟು ಖರ್ಚು ಮಾಡಿ ಅದನ್ನು ಪುನಃ ನಿರ್ಮಿಸಿದರು. ೧೬೭೦ ರಲ್ಲಿ ಔರಂಗಜೇಬನು ೧೦೮೦ ಹಿಜರಿಯ ರಂಜಾನ್ ತಿಂಗಳಲ್ಲಿ ಈ ಮಂದಿರವನ್ನು ಕೆಡವಲು ಆದೇಶ ನೀಡಿದನು.

ದೇವಾಲಯ ಸಲಹಾಸಮಿತಿಯ ನಾಸ್ತಿಕತೆಯ ಮೇಲೆ ಛೀಮಾರಿ ಹಾಕಿದ ಕೇರಳ ಉಚ್ಚ ನ್ಯಾಯಾಲಯ !

ಕೊಟ್ಟಯಮ್ ಜಿಲ್ಲೆಯಲ್ಲಿ ವಾಯಿಕೋಮ ಮಹಾದೇವ ದೇವಾಲಯದಲ್ಲಿ ಕಳಪೆ ದರ್ಜೆಯ ಪೂಜಾಸಾಮಗ್ರಿಗಳ ಮಾರಾಟ ನಡೆಯುತ್ತಿರುವುದಾಗಿ ಒಂದು ವಾರ್ತೆಯಿಂದ ಗಮನಕ್ಕೆ ಬಂದ ಮೇಲೆ ಕೇರಳ ಉಚ್ಚ ನ್ಯಾಯಾಲಯವು ಅದನ್ನು ಸ್ವತಃ ನೋಂದಿಸಿಕೊಂಡಿತು.

ಚೆನ್ನೈಯಲ್ಲಿರುವ ‘ಅಯೋಧ್ಯಾ ಮಂಡಪಮ್‌’ ಎಂಬ ಧಾರ್ಮಿಕ ಸ್ಥಳದ ಸರಕಾರೀಕರಣ !

ತಮಿಳುನಾಡು ಸರಕಾರದ ಧಾರ್ಮಿಕ ದತ್ತಿ ವಿಭಾಗವು ಚೆನ್ನೈಯಲ್ಲಿರುವ ಪಶ್ಚಿಮ ಮಾಂಬಲಮ್‌ನಲ್ಲಿರುವ ‘ಅಯೋಧ್ಯಾ ಮಂಡಪಮ್‌’ವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ೬೪ ವರ್ಷ ಹಳೆದಾದ ಈ ಧಾರ್ಮಿಕ ಸ್ಥಳಕ್ಕೆ ‘ಅಯೋಧ್ಯಾ ಅಶ್ವಮೇಧ ಮಹಾ ಮಂಡಪಮ್‌’ ಎಂದು ಕರೆಯಲಾಗುತ್ತದೆ.

ದೇವಸ್ಥಾನಗಳ ಸರಕಾರೀಕರಣ ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಯೋಗ್ಯ ದೃಷ್ಟಿಕೋನ !

ಮೇಲ್ನೋಟಕ್ಕೆ ನ್ಯಾಯಾಧೀಶರು ಅರ್ಜಿದಾರರ ಪರವಾಗಿ ತೀರ್ಪು ನೀಡಿದ್ದರೂ ಈ ನಿರ್ಣಯಕ್ಕೆ ಪ್ರತ್ಯೇಕವಾದ ಮಹತ್ವವಿದೆ. ನ್ಯಾಯಾಧೀಶರು ತಮ್ಮ ತೀರ್ಪುಪತ್ರದಲ್ಲಿ ಹೇಳುತ್ತಾರೆ, ನಮ್ಮ ಹಿಂದೂ ಸಂಸ್ಕೃತಿಯಲ್ಲಿ ದೇವಸ್ಥಾನಗಳ ಪಾತ್ರವು ಮಹತ್ವದ್ದಾಗಿದೆ. ಸದ್ಯ ಸ್ಥಿತಿಯಲ್ಲಿ ಕೆಲವು ವಿಷಯಗಳನ್ನು ದುರ್ಲಕ್ಷ ಮಾಡಲಾಗುತ್ತದೆ.

ಭಕ್ತರಿಗೆ ದೇವಸ್ಥಾನದ ವ್ಯವಸ್ಥಾಪನೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಂಪೂರ್ಣ ಹಕ್ಕಿದೆ ! – ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ

ದೇವಸ್ಥಾನದ ಭಕ್ತರಿಗೆ ದೇವಸ್ಥಾನದ ವ್ಯವಸ್ಥಾಪನೆಯ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಲು ಸಂಪೂರ್ಣ ಹಕ್ಕಿದೆ. ಎಂದು ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯ ಒಂದು ಅರ್ಜಿಯ ಮೇಲಿನ ತೀರ್ಪು ನೀಡುವಾಗ ಅಭಿಪ್ರಾಯ ವ್ಯಕ್ತಪಡಿಸಿತು.

ಕರ್ನಾಟಕದಲ್ಲಿನ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತ ಗೊಳಿಸಲಾಗುವುದು !

ರಾಜ್ಯದ ಭಾಜಪ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನದಲ್ಲಿ ಸರಕಾರಿಕರಣಗೊಂಡಿರುವ ದೇವಸ್ಥಾನಗಳನ್ನು ಮುಕ್ತ ಮಾಡುವ ಪ್ರಸ್ತಾವ ಪ್ರಸ್ತುತಪಡಿಸಿದರು. ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ೩೪ ಸಾವಿರ ದೇವಸ್ಥಾನಗಳಿವೆ.

ಹಿಂದೂ ದೇವಸ್ಥಾನಗಳು ವ್ಯವಸ್ಥಾಪಕರ ಮತ್ತು ಸರಕಾರದ ಅಧೀನದಲ್ಲಿ ಇರಬೇಕೆ ? – ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ನ್ಯಾಯ ಪೀಠದ ಪ್ರಶ್ನೆ

ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ನ್ಯಾಯ ಪೀಠವು ರಂಗರಾಜನ್ ನರಸಿಂಹನ್ ಇವರ ವಿರುದ್ಧ ಮಾನನಷ್ಟಕ್ಕೆ ಸಂಬಮಧಿಸಿದ ದಾಖಲಿಸಿದ್ದ 2 ಅರ್ಜಿಯನ್ನು ತಳ್ಳಿಹಾಕಿದೆ.

ಹಿಂದು ರಾಷ್ಟ್ರದ ಸಂವಿಧಾನವನ್ನು ನಿರ್ಮಿಸಲಾಗುವುದು !

ಯೋಜಿಸಲಾಗಿದ್ದ ಸಂತ ಸಮ್ಮೇಳನದಲ್ಲಿ ಹಿಂದು ರಾಷ್ಟ್ರದ ಸಂವಿಧಾನವನ್ನು ನಿರ್ಮಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಅದಕ್ಕೆ ‘ಹಿಂದು ರಾಷ್ಟ್ರ ಸಂವಿಧಾನ’ವೆಂದು ಹೆಸರಿಸಲಾಗುವುದು.

ಬೆಳಗಾವಿ ಜಿಲ್ಲೆಯಲ್ಲಿನ ೪ ದೇವಸ್ಥಾನಗಳ ವ್ಯವಸ್ಥಾಪನೆ ಸಮಿತಿ ನೇಮಿಸುವ ನಿರ್ಣಯ ಕೆಲವೇ ಸಮಯದಲ್ಲೇ ರದ್ದು !

ದೇವಸ್ಥಾನಗಳು ಚೈತನ್ಯದ ಮೂಲ ಆಗಿದ್ದರಿಂದ ಅದು ಸರಕಾರೀಕರಣಗೊಂಡರೆ ದೇವಸ್ಥಾನದ ಚೈತನ್ಯ ಬೇಗ ಕಡಿಮೆಯಾಗುತ್ತದೆ. ಆದ್ದರಿಂದ ದೇವಸ್ಥಾನಗಳು ಭಕ್ತರ ವಶದಲ್ಲಿರುವುದು ಅವಶ್ಯಕವಾಗಿದೆ !

ಕರ್ನಾಟಕದಂತೆ ಇತರ ರಾಜ್ಯಗಳು ಸಹ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಬೇಕು ! – ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕ

ಕರ್ನಾಟಕದ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ ಇವರು ದೇವಸ್ಥಾನ ಇದು ಸರಕಾರದ ಆಸ್ತಿಯಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಚರ್ಚ್ ಅಥವಾ ಮಸೀದಿ ಇವು ಸರಕಾರದ ಆಸ್ತಿ ಎಂದು ಹೇಳಲು ಎಂದಾದರೂ ಧೈರ್ಯ ಮಾಡಿದೆಯೇ ?