ಅಯೋಧ್ಯಾ, ಕಾಶಿ ಮತ್ತು ಮಥುರಾದ ದೇವಸ್ಥಾನಗಳ ಮುಕ್ತಿಗಾಗಿ ನಡೆಸಿದ ನ್ಯಾಯಾಂಗ ಹೋರಾಟ !

ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ೨೩/೩೩ ರ ಸಂಚಿಕೆಯಲ್ಲಿ ಮುದ್ರಣವಾದ ಭಾಗದಲ್ಲಿ ಪೂ (ನ್ಯಾಯವಾದಿ) ಹರಿ ಶಂಕರ ಜೈನ್ ಇವರು ಅಲಹಾಬಾದ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ ನಂತರ ನ್ಯಾಯಾಲಯ ಪ್ರಭು ಶ್ರೀರಾಮನ ಮಂದಿರವನ್ನು ಭಕ್ತರಿಗಾಗಿ ತೆರೆಯಲು ಆದೇಶ ನೀಡುವುದು, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ರಮಾಸ್ವಾಮಿ ಇವರು ತೀರ್ಪುಪತ್ರದಲ್ಲಿ ‘ಕಾಶಿಯ ಶಿವಲಿಂಗವನ್ನು ಸ್ವತಃ ಶಿವನೇ ನಿರ್ಮಿಸಿದ್ದಾನೆ’, ಎಂದು ನಮೂದಿಸಿದರು ಹಾಗೂ ಕಾಶಿ ವಿಶ್ವನಾಥ ಮಂದಿರದ ಸಂಪೂರ್ಣ ಭೂಮಿ ಮಂದಿರದ ಆಸ್ತಿ ಆಗಿದೆಯೆಂದು ೧೯೮೩ ರಲ್ಲಿ ಘೋಷಿಸಲಾಗಿತ್ತು ಎನ್ನುವ ವಿಷಯ ಓದಿದೆವು. ಇಂದು ಅದರ ಮೂಂದಿನ ಭಾಗವನ್ನು ನೊಡೋಣ.                      (ಉತ್ತರಾರ್ಧ)

೫. ಕಾಶಿ ಮತ್ತು ಮಥುರಾದ ವಿಷಯದಲ್ಲಿ ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್’ನಲ್ಲಿ ತಿದ್ದುಪಡಿ ಮಾಡಲು ಸಮಸ್ತ ಹಿಂದೂಗಳು ಸರಕಾರಕ್ಕೆ ಆಗ್ರಹಿಸಬೇಕು !

ಅ. ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ ಸೆಕ್ಷನ್-೪’ ಎಂಬುದರಲ್ಲಿ ‘೧೫ ಅಗಸ್ಟ್ ೧೯೪೭ ರ ವರೆಗೆ ಧಾರ್ಮಿಕ ಸ್ಥಳಗಳ ಸ್ಥಿತಿ ಹೇಗಿತ್ತೊ, ಅದು ಹಾಗೆಯೆ ಮುಂದುವರಿಯುವುದು. ಅದಕ್ಕಾಗಿ ಯಾರೂ ನ್ಯಾಯಾಲಯದಲ್ಲಿ ಖಟ್ಲೆಯನ್ನು ದಾಖಲಿಸುವಂತಿಲ್ಲ’, ಎನ್ನಲಾಗಿದೆ. ಈ ರೀತಿ ಹಿಂದೂಗಳ ಅಧಿಕಾರವನ್ನು ಕಸಿದುಕೊಳ್ಳಲಾಯಿತು. ನಾವು ಈ ಕಾನೂನಿನ ಸಂವಿಧಾನಾತ್ಮಕ ಸ್ಥಾನಮಾನದ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪಾಟಿಸವಾಲು ಹಾಕಿದ್ದು ಅದು ವಿಚಾರಾಧೀನವಾಗಿದೆ. ಕಾಶಿ ವಿಶ್ವನಾಥ ಮಂದಿರದ ವಿಷಯ ನೋಡಿದರೆ ೧೫ ಆಗಸ್ಟ್ ೧೯೪೭ ರ ವರೆಗೆ ಸ್ಥಳದ ಧಾರ್ಮಿಕ ಪರಿಚಯ ದೇವಸ್ಥಾನ ಎಂದಿತ್ತು ಮತ್ತು ಅದು ಹಾಗೆಯೆ ಇರುವುದು. ಕಾಶಿ ಮತ್ತು ಮಥುರಾ ಪ್ರಕರಣದಲ್ಲಿ ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್’ ಅಡ್ಡಿಯಾಗುವುದಿಲ್ಲ.

ಆ. ರಾಮಮಂದಿರದ ವಿಷಯದಲ್ಲಿ ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ನ ಸೆಕ್ಷನ್ ೪’ ಕ್ಕೆ ವಿನಾಯಿತಿ ನೀಡಲಾಗಿತ್ತು. ಇಂದು ಆರ್ಟಿಕಲ್ ೨೫೪ (೨) ರ ಅಂತರ್ಗತ ರಾಜ್ಯ ಸರಕಾರವು ಇದರಲ್ಲಿ ತಿದ್ದುಪಡಿ ಮಾಡಿ ಅದಕ್ಕೆ ಕಾಶಿ ಮತ್ತು ಮಥುರಾವನ್ನೂ ಜೋಡಿಸಬೇಕು ಮತ್ತು ರಾಷ್ಟ್ರಪತಿಗಳು ಅದಕ್ಕೆ ಹಸ್ತಾಕ್ಷರ ಮಾಡುವರು. ಉತ್ತರಪ್ರದೇಶ ಸರಕಾರ ಮತ್ತು ಕೇಂದ್ರ ಸರಕಾರಕ್ಕೆ ನಮ್ಮ ಬೇಡಿಕೆಯೆಂದರೆ, ಅವರು ಈ ಕಾನೂನಿನಲ್ಲಿ ತಿದ್ದುಪಡಿ ಮಾಡಬೇಕು. ೧೯೯೧ ರಲ್ಲಿ ಮುಸಲ್ಮಾನರು ಈ ಖಟ್ಲೆಗೆ ಆಕ್ಷೇಪವೆತ್ತಿ ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್’ಗನುಸಾರ ಈ ಖಟ್ಲೆ ನಡೆಯಲು ಸಾಧ್ಯವಿಲ್ಲ, ಎಂದಿತ್ತು. ಈ ಕಾರಣದಿಂದ ಕಳೆದ ೩೦ ವರ್ಷಗಳಿಂದ ಈ ಖಟ್ಲೆ ಮುಂದುವರಿಯಲು ಸಾಧ್ಯವಾಗಲಿಲ್ಲ.

ಇ. ಸರಕಾರ ಕಾಶಿಯಲ್ಲಿ ಉತ್ಖನನ ಕಾರ್ಯವನ್ನು ಮಾಡಿ ಅದರ ಧಾರ್ಮಿಕ ಸ್ವರೂಪವನ್ನು ಸ್ಪಷ್ಟಪಡಿಸಲು ‘ಭಾರತೀಯ ಪುರಾತತ್ವ ಸಮೀಕ್ಷಾ ವಿಭಾಗ’ಕ್ಕೆ ಆದೇಶವನ್ನು ಕೊಡಬೇಕು; ಆದರೆ ಅದು ಕೂಡ ಆಗುತ್ತಿಲ್ಲ. ಇದರಿಂದ ಸ್ಪಷ್ಟವಾಗುವುದೆಂದರೆ ಸರಕಾರಕ್ಕೆ ಈ ಖಟ್ಲೆಗೆ ನಿರ್ಣಯವನ್ನು ನೀಡುವ ಇಚ್ಛೆಯಿಲ್ಲ. ಈ ವಿಷಯದಲ್ಲಿ ಸಂಪೂರ್ಣ ಹಿಂದೂ ಸಮಾಜ ಜಾಗೃತವಾಗಿ ಕಾಶಿ ಮತ್ತು ಮಥುರಾದ ವಿಷಯದಲ್ಲಿ ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್’ನಲ್ಲಿ ತಿದ್ದುಪಡಿ ಮಾಡಬೇಕು, ಎಂದು ಸರಕಾರಕ್ಕೆ ಆಗ್ರಹಿಸಬೇಕು. ಕಾಶಿ ದೇವಸ್ಥಾನದ ವಿಷಯದಲ್ಲಿ ೭ ಖಟ್ಲೆಗಳನ್ನು ಸ್ವೀಕರಿಸಲಾಗಿದ್ದು ಸದ್ಯ ಅವುಗಳು ನೆನೆಗುದಿಯಲ್ಲಿವೆ. ಹಿಂದೂ ಸಮಾಜ ಹೇಗೆ ರಾಮ ಮಂದಿರದ ವಿಷಯದಲ್ಲಿ ಆಗ್ರಹಿಸಿತ್ತೋ ಹಾಗೆಯೇ ಈ ವಿಷಯದಲ್ಲಿಯೂ ಮಾಡಬೇಕು, ಇದೊಂದೇ ಮಾರ್ಗವಿದೆ.

೬. ಮಥುರಾದ ಶ್ರೀಕೃಷ್ಣ ಮಂದಿರವನ್ನು ಕೆಡವಿದ ನಂತರ ಅಲ್ಲಿನ ಮೂರ್ತಿಯನ್ನು ಆಗ್ರಾದ ಬೇಗಮ್ ಶಾಹೀ ಮಸೀದಿಯ ಮೆಟ್ಟಿಲಿನ ಕೆಳಗೆ ಇಡಲಾಗಿತ್ತು ಹಾಗೂ ಮತಾಂಧರು ಅದನ್ನು ಕಾಲಿನಲ್ಲಿ ತುಳಿಯುವ ಉದ್ದೇಶವಿತ್ತು

ನಾವು ಶ್ರೀಕೃಷ್ಣನ ವತಿಯಿಂದ ಶ್ರೀಕೃಷ್ಣಜನ್ಮ ಭೂಮಿಯನ್ನು ಮುಕ್ತಗೊಳಿಸುವ ವಿಷಯದಲ್ಲಿ ಖಟ್ಲೆಯನ್ನು ದಾಖಲಿಸಿದ್ದೇವೆ. ಇತಿಹಾಸವು ಏನು ಹೇಳುತ್ತದೆಯೆಂದರೆ, ಆಕ್ರಮಕರು ಮಥುರಾದ ಶ್ರೀಕೃಷ್ಣ ಮಂದಿರವನ್ನು ಅನೇಕ ಬಾರಿ ಕೆಡವಿದ್ದರು. ಅನಂತರ ಕೊನೆಯದಾಗಿ ೧೬೧೮ ರಲ್ಲಿ ರಾಜಾ ವೀರಸಿಂಹ ಬುಂದೇಲಾ ಇವರು ೩೩ ಲಕ್ಷ ರೂಪಾಯಿಗಳಷ್ಟು ಖರ್ಚು ಮಾಡಿ ಅದನ್ನು ಪುನಃ ನಿರ್ಮಿಸಿದರು. ೧೬೭೦ ರಲ್ಲಿ ಔರಂಗಜೇಬನು ೧೦೮೦ ಹಿಜರಿಯ ರಂಜಾನ್ ತಿಂಗಳಲ್ಲಿ ಈ ಮಂದಿರವನ್ನು ಕೆಡವಲು ಆದೇಶ ನೀಡಿದನು. ಅದೇ ಪ್ರಕಾರ ಕ್ರಮಕೈಗೊಳ್ಳಲಾಯಿತು. ಅನಂತರ ಅಲ್ಲಿ ಭವ್ಯ ಮಸೀದಿಯನ್ನು ಕಟ್ಟಲಾಯಿತು. ಅಲ್ಲಿನ ಮೂರ್ತಿಗಳನ್ನು ಆಗ್ರಾದ ಬೇಗಮ್ ಶಾಹೀ ಮಸೀದಿಯ ಮೆಟ್ಟಿಲಿನ ಕೆಳಗೆ ಇಡಲಾಯಿತು. ಮತಾಂಧರು ನಮಾಜು ಪಠಣಕ್ಕಾಗಿ ಹೋಗುವಾಗ ಅವರು ಮೂರ್ತಿಯನ್ನು ತುಳಿದು ಹೋಗಬೇಕು, ಎಂಬುದಕ್ಕಾಗಿ ಇಂತಹ ಕೃತ್ಯವನ್ನು ಮಾಡಲಾಗಿತ್ತು. ‘ಮಆಸಿರ್-ಎ-ಆಲಮಗಿರಿ’ ಈ ಪುಸ್ತಕದ ಪುಟ ಕ್ರಮಾಂಕ ೯೫ ಮತ್ತು ೯೬ರಲ್ಲಿ ‘ಮಥುರಾದ ಹೆಸರು ಇಸ್ಲಾಮಾಬಾದ ಎಂದು ಇಡಬೇಕು’, ಎಂದು ಕೂಡ ಬರೆಯಲಾಗಿದೆ.

೭. ‘ಶ್ರೀಕೃಷ್ಣ ಜನ್ಮಭೂಮಿ ಸೇವಾ ಸಂಘ ಹೆಸರಿನ ನಕಲಿ ಸಂಸ್ಥೆಯು ‘ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್’ನ ಭೂಮಿ ವಿಷಯದಲ್ಲಿ ಮುಸಲ್ಮಾನರೊಂದಿಗೆ ಒಪ್ಪಂದ ಮಾಡಿಕೊಳ್ಳುವುದು’

ಅ. ೫ ಎಪ್ರಿಲ್ ೧೭೭೦ ರಂದು ಮರಾಠರು ಗೋವರ್ಧನ ಯುದ್ಧವನ್ನು ಮಾಡಿದರು. ಅವರು ಆ ಸ್ಥಳವನ್ನು ಪುನಃ ಜಯಿಸಿದರು. ಅನಂತರ ಅವರು ಮುಸಲ್ಮಾನರನ್ನು ಅಲ್ಲಿಂದ ಹೊರ ದಬ್ಬಿದರು. ೧೮೦೩ ರಲ್ಲಿ ಅಲ್ಲಿ ಬ್ರಿಟಿಷ ಸರಕಾರ ಬಂತು. ೧೮೧೫ ರಲ್ಲಿ ಅವರು ಆ ಸ್ಥಳವನ್ನು ಹರಾಜು ಮಾಡಿದರು. ಅದರಲ್ಲಿ ಈ ೧೩.೩೭ ಎಕ್ರೆ ಭೂಮಿಯನ್ನು ವಾರಣಾಸಿಯ ರಾಜಾ ಪಟನಿಮಲ ಇವರು ಖರೀದಿಸಿದರು. ಅದರ ಕಾಗದಪತ್ರ ನಮ್ಮಲ್ಲಿದೆ. ಅನಂತರ ನ್ಯಾಯಾಲಯದಲ್ಲಿ ೧೦ ಬಾರಿ ಖಟ್ಲೆ ನಡೆದು ಈ ಖಟ್ಲೆಯಲ್ಲಿ ಹಿಂದೂಗಳು ವಿಜಯಿಯಾದರು. ೮ ಫೆಬ್ರವರಿ ೧೯೪೪ ರಂದು ರಾಜಾ ಪಟನಿಮಲ ಇವರ ವಂಶಜರಾದ ರಾಯ ಕಿಶನ್ ದಾಸ ಮತ್ತು ರಾಯ ಆನಂದ ದಾಸ ಇವರು ಈ ಭೂಮಿಯನ್ನು ಜುಗಲ ಕಿಶೋರ ಬಿರ್ಲಾ ಇವರಿಗೆ ೧೩ ಸಾವಿರದ ೪೦೦ ರೂಪಾಯಿಗಳಿಗೆ ಮಾರಾಟ ಮಾಡಿದರು. ೨೧ ಫೆಬ್ರವರಿ ೧೯೫೧ ರಂದು ಜುಗಲ ಕಿಶೋರ ಬಿರ್ಲಾ ಇವರು ‘ಶ್ರೀಕೃಷ್ಣ ಜನ್ಮ ಭೂಮಿ ಟ್ರಸ್ಟ್’ ಎಂಬ ನ್ಯಾಸವನ್ನು ನಿರ್ಮಾಣ ಮಾಡಿದರು.

ಆ. ೧ ಮೇ ೧೯೫೮ ರಂದು ‘ಶ್ರೀಕೃಷ್ಣ ಜನ್ಮಭೂಮಿ ಸೇವಾ ಸಂಘ’ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಯಿತು. ‘ಕೆಲವರು ಈ ಮಂದಿರದ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ, ಇದನ್ನು ನಿಲ್ಲಿಸಬೇಕು’, ಎಂದು ಈ ಸೇವಾ ಸಂಘವು ೧೯೬೪ ರಲ್ಲಿ ದಿವಾಣಿ ಖಟ್ಲೆಯನ್ನು ದಾಖಲಿಸಿತು. ೧೨ ಅಕ್ಟೋಬರ ೧೯೬೮  ರಂದು ಸೇವಾ ಸಂಘವು ಮುಸಲ್ಮಾನರೊಂದಿಗೆ ಒಪ್ಪಂದ ಮಾಡಿಕೊಂಡಿತು. ಇದರ ಹಿಂದಿನ ಷಡ್ಯಂತ್ರವು ನಮಗೆ ತಿಳಿಯಬೇಕು. ಯಾವ ಭೂಮಿ ‘ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್’ದ್ದಾಗಿತ್ತೊ, ಆ ವಿಷಯದಲ್ಲಿ ‘ಶ್ರೀಕೃಷ್ಣ ಜನ್ಮ ಭೂಮಿ ಸೇವಾ ಸಂಘ’ ಎಂಬ ನಕಲಿ ಸಂಸ್ಥೆ ಹೇಗೆ ಖಟ್ಲೆ ದಾಖಲಿಸಲು ಸಾಧ್ಯ ? ಅದು ಹೇಗೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯ ? ಒಪ್ಪಂದದ ವಿಷಯದಲ್ಲಿ ನಾವು ನ್ಯಾಯಾಲಯದಲ್ಲಿ ಸವಾಲನ್ನು ನೀಡಿ ಅದನ್ನು ಬಿಡಿಸಬೇಕೆಂದು ವಿನಂತಿಸಿದ್ದೇವೆ.

ಇ. ನ್ಯಾಯಾಲಯವು ನಮಗೆ, ‘ನೀವು ೬೦ ವರ್ಷಗಳ ನಂತರ ಏಕೆ ಬಂದಿದ್ದೀರಿ ?’, ಎಂದು ಕೇಳಿತು. ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ಣಯವೇನೆಂದರೆ, ‘ಎಲ್ಲಿ ಷಡ್ಯಂತ್ರ ನಡೆದಿದೆಯೋ, ಅಲ್ಲಿ ನಾವು ಯಾವತ್ತೂ ಸವಾಲು ಹಾಕಬಹುದು. ಸದ್ಯ ‘ಮಥುರಾ’ದ ವಿಷಯದಲ್ಲಿ ೩೦ ಖಟ್ಲೆಗಳನ್ನು ದಾಖಲಿಸಲಾಗಿದೆ. ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರ ಮೊದಲ ಖಟ್ಲೆಯನ್ನು ನ್ಯಾಯಾಲಯ ತಳ್ಳಿ ಹಾಕಿತು. ಇದರ ಹಿಂದೆ ಹಾಸ್ಯಾಸ್ಪದ ಕಾರಣವನ್ನು ನೀಡಲಾಯಿತು ಅದೆಂದರೆ, ‘ಶ್ರೀಕೃಷ್ಣನ ಅಸಂಖ್ಯ ಭಕ್ತರಿದ್ದಾರೆ. ಅವರೆಲ್ಲರೂ ನ್ಯಾಯಾಲಯಕ್ಕೆ ಬಂದರೆ ನ್ಯಾಯವ್ಯವಸ್ಥೆಯಲ್ಲಿ ಗೊಂದಲ ನಿರ್ಮಾಣವಾಗಬಹುದು’. ‘ಈ ಪ್ರಕರಣದಲ್ಲಿ ಖಟ್ಲೆಯನ್ನು ನಡೆಸಿ ೬ ತಿಂಗಳ ಒಳಗೆ ಅಂತಿಮ ನಿರ್ಣಯ ನೀಡಬೇಕು, ಎಂಬುದು ನಮ್ಮ ಬೇಡಿಕೆಯಾಗಿದೆ. ನಾವು ನ್ಯಾಯಾಲಯದಲ್ಲಿ ‘ದೂಧ್ ಕಾ ದೂಧ್ ಪಾನೀ ಕಾ ಪಾನೀ’ ಮಾಡುವೆವು !

೮. ವಕ್ಫ್ ಬೋರ್ಡ್‌ಗೆ ವಿಪರೀತ ಅಧಿಕಾರವನ್ನು ನೀಡಿರುವುದರಿಂದ ಅದು ಯಾವುದೇ ಆಸ್ತಿಯನ್ನು ‘ವಕ್ಫ್‌ನ ಆಸ್ತಿ’ ಎಂದು ಘೋಷಿಸಲು ಸಾಧ್ಯವಿದೆ

ಅ. ‘ವಕ್ಫ್ ಆಕ್ಟ್ ೧೯೯೫’ ರ ಮೂಲ ರೂಪ ‘ಮುಸಲ್ಮಾನ ವಕ್ಫ್ ಆಕ್ಟ್ ೧೯೨೩’ ಎಂದಿತ್ತು. ಇದರಲ್ಲಿ ಮುಸಲ್ಮಾನರಿಗೆ ಅಷ್ಟೇನೂ ಅಧಿಕಾರಗಳನ್ನು ನೀಡಿರಲಿಲ್ಲ. ಈ ಕಾನೂನು ಅವರ ಆಂತರಿಕ ಆಸ್ತಿಯ ವಿಷಯದಲ್ಲಿತ್ತು. ರಾಜಕೀಯ ಹಸ್ತಕ್ಷೇಪದ ನಂತರ ಇದರಲ್ಲಿ ಅನೇಕ ತಪ್ಪು ತಿದ್ದುಪಡಿಗಳನ್ನು ಮಾಡಲಾಯಿತು. ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದ ಒಂದು ತೀರ್ಪುಪತ್ರಕ್ಕನುಸಾರ ಭಾರತದಲ್ಲಿ ರೈಲ್ವೆ ಮತ್ತು ಸೈನ್ಯದ ನಂತರ ಅತೀ ಹೆಚ್ಚು ಭೂಮಿಯು ವಕ್ಫ್ ಬೋರ್ಡ್‌ನ ವಶದಲ್ಲಿದೆ, ಎಂದು ಹೇಳಲಾಗಿದೆ. ಭಾರತದಲ್ಲಿ ವಕ್ಫ್ ಬೋರ್ಡ್‌ಗೆ ವಿಪರೀತ ಅಧಿಕಾರವನ್ನು ನೀಡಲಾಗಿದೆ. ಅದಕ್ಕನುಸಾರ ಅದು ಯಾವುದೇ ಅಸ್ತಿಯನ್ನು ಕಬಳಿಸಿ ಅದನ್ನು ವಕ್ಫ್‌ನ ಆಸ್ತಿಯೆಂದು ಘೋಷಿಸಬಹುದು. ಅದೇ ರೀತಿ ೨೦೦೫ ರಲ್ಲಿ ವಕ್ಫ್ ಬೋರ್ಡ್ ತಾಜಮಹಲನ್ನು ‘ವಕ್ಫ್‌ನ ಆಸ್ತಿ’ ಎಂದು ಘೋಷಿಸಿದೆ. ಇದರ ವಿರುದ್ಧ ಭಾರತೀಯ ಪುರಾತತ್ವ ವಿಭಾಗವು ಸರ್ವೋಚ್ಚ ನ್ಯಾಯಾಲಯದಲ್ಲಿ ಆವ್ಹಾನ ನೀಡಿದೆ. ಈಗ ಸರ್ವೋಚ್ಚ ನ್ಯಾಯಾಲಯವು, ‘ಶಾಹಜಹಾನನು ವಕ್ಫ್ ಒಪ್ಪಂದಪತ್ರವನ್ನು ತಯಾರಿಸಿದ್ದರೆ ಅದನ್ನು ತಂದು ತೋರಿಸಿರಿ’, ಎಂದು ಕೇಳಿದೆ. ೨ ವರ್ಷಗಳಿಂದ ಅವರ ವಕೀಲರಿಗೆ ಇದರ ಬಗ್ಗೆ ಏನೂ ಮಾಡಲು ಸಾಧ್ಯವಾಗಿಲ್ಲ.

ಆ. ‘ವಕ್ಫ್ ಆಕ್ಟ್ ಸೆಕ್ಷನ್ ೪’ ರ ಅನಿಯಂತ್ರಿತ ಹಾಗೂ ವಿಪರೀತ ಅಧಿಕಾರದಿಂದಾಗಿ ಬೋರ್ಡ್

ಯಾವುದೇ ಆಸ್ತಿಯನ್ನು ಸಮೀಕ್ಷೆ ಮಾಡಬಹುದು. ಆ ಸಮೀಕ್ಷೆಯ ಖರ್ಚನ್ನು ರಾಜ್ಯ ಸರಕಾರ ನೀಡುತ್ತದೆ. ಅದೇ ರೀತಿ ಪ್ರತಿ ೧೦ ವರ್ಷಕ್ಕೊಮ್ಮೆ ವಕ್ಫ್ ಬೋರ್ಡ್‌ನ ಅಸ್ತಿಯ ಸಮೀಕ್ಷೆಯಾಗುತ್ತದೆ. ಸೆಕ್ಷನ್ ೪ ಮತ್ತು ೫ ಕ್ಕನುಸಾರ ರಾಜ್ಯ ಸರಕಾರ ಸಮೀಕ್ಷೆ ಮಾಡುವಾಗ ಸರಕಾರ ಯಾರ ಆಸ್ತಿಯನ್ನು ಕೂಡ ‘ವಕ್ಫ್ ಆಸ್ತಿ’ಯೆಂದು ಘೋಷಿಸಬಹುದು. ಅನಂತರ ಅದು ವಕ್ಫ್ ಬೋರ್ಡ್‌ಗೆ ‘ಈ ಆಸ್ತಿಯನ್ನು ಸರಕಾರ ‘ವಕ್ಫ್ ಆಸ್ತಿ’ಯೆಂದು ಘೋಷಿಸಿದೆ’, ಎಂಬ ಮಾಹಿತಿ ನೀಡುತ್ತದೆ. ಒಂದು ವೇಳೆ ಆ ವ್ಯಕ್ತಿಗೆ ಈ ಆದೇಶ ಒಪ್ಪಿಗೆ ಇಲ್ಲದಿದ್ದರೆ, ಆ ವ್ಯಕ್ತಿ ‘ವಕ್ಫ್’ ಪ್ರಾಧಿಕರಣಕ್ಕೆ ಹೋಗಿ ಕಾನೂನು ಪ್ರಕಾರ ಹೋರಾಟ ಮಾಡಬೇಕಾಗುವುದು.

ಇ. ಕಾಂಗ್ರೆಸ್ ಸರಕಾರ ‘ವಕ್ಫ್ ಆಕ್ಟ್ ಸೆಕ್ಷನ್ ೬’ರಲ್ಲಿ ತಿದ್ದುಪಡಿ ಮಾಡಿ ‘ಪರ್ಸನ್ ಇಂಟರೆಸ್ಟೆಡ್’ ಸ್ಥಳದಲ್ಲಿ ‘ಪರ್ಸನ್ ಅಗ್ರೀವ್ಡ್’ ಎಂದು ಮಾಡಿದೆ.

‘ಪರ್ಸನ್ ಇಂಟರೆಸ್ಟೆಡ್’ ಅಂದರೆ ‘ಮುಸಲ್ಮಾನ ಸಮಾಜದ ವ್ಯಕ್ತಿ’ ಎಂಬ ಅರ್ಥವಾಗಿತ್ತು. ಆದ್ದರಿಂದ ವಕ್ಫ್ ಕೇವಲ ಮುಸಲ್ಮಾನ ಸಮಾಜದ ಆಸ್ತಿಗೆ ಸಂಬಂಧಿಸಿದ ವ್ಯವಹಾರ ಮಾಡಲು ಸಾಧ್ಯವಿತ್ತು; ಆದರೆ ಯಾವಾಗ ‘ಪರ್ಸನ್ ಅಗ್ರೀವ್ಡ್’ ಎಂದು ಬರೆಯಲಾಯಿತೊ, ಆಗ ಅದರಲ್ಲಿ ನಮ್ಮೆಲ್ಲರ ಸಮಾವೇಶವಾಯಿತು. ಆದ್ದರಿಂದ ನಮ್ಮೆಲ್ಲರ ಆಸ್ತಿ ‘ವಕ್ಫ್‌ನ ಆಸ್ತಿ’ ಎಂದು ಘೋಷಣೆಯಾಗಬಹುದು. ಹಾಗೆ ಆದರೆ ನಾವು ಹಕ್ಕು ಸಾಧಿಸಲು ದಿವಾಣಿ ನ್ಯಾಯಾಲಯಕ್ಕಲ್ಲ, ಕೇವಲ ವಕ್ಫ್ ಪ್ರಾಧಿಕರಣಕ್ಕೆ ಹೋಗಬೇಕಾಗುತ್ತದೆ. ಆದ್ದರಿಂದ ‘ಆಸ್ತಿ’ ಮುಸಲ್ಮಾನೇತರರಾಗಿದ್ದರೂ, ಅಂದರೆ ಹಿಂದೂಗಳದ್ದಾಗಿದ್ದರೂ ಖಟ್ಲೆ ‘ಕಾಮನ್’ (ಸಾಮಾನ್ಯ) ದಿವಾಣಿ ನ್ಯಾಯಾಲಯದಲ್ಲಿಯೇ ನಡೆಯಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ.

೯. ವಕ್ಫ್ ಬೋರ್ಡ್‌ಗೆ ಸಮನಾಂತರ ಸರಕಾರದ ಅಧಿಕಾರವನ್ನು ನೀಡಿರುವುದರಿಂದ ಜಿಲ್ಲಾ ದಂಡಾಧಿಕಾರಿಗಳಿಗೂ ‘ವಕ್ಫ್’ ಹೇಳುವುದನ್ನು ಪಾಲಿಸಿ, ಎಂದು ಆದೇಶ ನೀಡಲು ಸಾಧ್ಯವಿದೆ.

ಅ. ಸೆಕ್ಷನ್ ೨೮ ಮತ್ತು ೨೯ ರಲ್ಲಿ ವಕ್ಫ್ ಬೋರ್ಡ್‌ಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅದಕ್ಕನುಸಾರ ಅದು ಜಿಲ್ಲಾ ದಂಡಾಧಿಕಾರಿಗಳಿಗೂ ‘ವಕ್ಫ್ ಹೇಳುವುದನ್ನು ಪಾಲಿಸಿ’, ಎಂದು ಆದೇಶ ನೀಡಲು ಸಾಧ್ಯವಿದೆ. ಇದರಿಂದ ಹಿಂದೂ ಸಮಾಜಕ್ಕೆ ಎಷ್ಟೆಲ್ಲ ಅನ್ಯಾಯವಾಗುತ್ತಿದೆ, ಎಂಬುದು ಅರಿವಾಗುತ್ತದೆ. ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್’ನ ಅಂತರ್ಗತ ಹಿಂದೂಗಳು ಅವರ ಮಂದಿರಗಳನ್ನೇ ಹಿಂತಿರುಗಿ ಪಡೆಯಲು ನ್ಯಾಯಾಲಯಕ್ಕೆ ಹೋಗಲು ಸಾಧ್ಯವಿಲ್ಲ ಹಾಗೂ ಇನ್ನೊಂದೆಡೆ ವಕ್ಫ್ ಬೋರ್ಡ್ ಯಾವುದೇ ಆಸ್ತಿ ‘ವಕ್ಫ್‌ನ ಆಸ್ತಿ’ ಎಂದು ಘೋಷಿಸಲು ಸಾಧ್ಯವಿದೆ. ಅಂದರೆ ಒಂದು ಬದಿಯಲ್ಲಿ ಎಲ್ಲ ಮಾರ್ಗಗಳನ್ನು ತೆರೆದಿಡಲಾಗಿದೆ ಹಾಗೂ ಹಿಂದೂಗಳಿಗೆ ನ್ಯಾಯಾಲಯದ ಮಾರ್ಗವನ್ನೂ ಮುಚ್ಚಲಾಗಿದೆ.

ಆ. ‘ಸೆಕ್ಷನ್ ೪೦ ಉಪಕಲಮ್ ೩’ ರಲ್ಲಿ ಒಂದು ಏರ್ಪಾಡು ಹೇಗಿದೆಯೆಂದರೆ, ವಕ್ಫ್ ಯಾವುದೇ ಸೊಸೈಟಿಯ ಆಸ್ತಿಯನ್ನು ‘ವಕ್ಫ್‌ನ ಆಸ್ತಿ’ಯೆಂದು ಘೋಷಿಸಲು ಸಾಧ್ಯವಿದೆ. ‘ಯಾವುದೇ ನೊಂದಣಿಯಾಗಿರುವ ಸೊಸೈಟಿಯ ಆಸ್ತಿಯನ್ನು ಕಬಳಿಸಬೇಕೆಂದು ‘ವಕ್ಫ್‌’ಗೆ ಅನಿಸಿದರೆ, ಅದು ಅದೇ ವಿಶ್ವಸ್ಥರೊಂದಿಗೆ ಚರ್ಚೆ ಮಾಡಿ ನೋಟೀಸ್ ಕಳುಹಿಸಬಹುದು. ಸೊಸೈಟಿ ರಿಜಿಸ್ಟ್ರಾರರಿಗೆ ಮತ್ತು ಆ ರಿಜಿಸ್ಟ್ರಾರ್ ನನಗೆ ‘ನೋಟೀಸ್ ನೀಡಲು ಸಾಧ್ಯವಿದೆ ಅಥವಾ ಕೊಡದಿರಲೂ ಸಾಧ್ಯವಿದೆ. ಕಾಲಕ್ರಮೇಣ ನಮ್ಮ ಆಸ್ತಿ ‘ವಕ್ಫ್‌ನ ಆಸ್ತಿ’ ಎಂದು ಘೋಷಣೆಯಾಗುವುದು ಹಾಗೂ ಅದು ನಮಗೆ ತಿಳಿಯುವುದೂ ಇಲ್ಲ. ಈ ರಗಳೆ ನನಗೆ ತಿಳಿದಾಗ ನನಗೆ ಕೇವಲ ‘ವಕ್ಫ್’ ಪ್ರಾಧಿಕರಣದಲ್ಲಿ ಸವಾಲು ನೀಡುವಷ್ಟೆ ಅಧಿಕಾರವಿರುತ್ತದೆ ಹಾಗೂ ಅದು ಕೂಡ ಒಂದು ನಿರ್ಧಿಷ್ಟ ಅವಧಿಯ ಒಳಗೆ. (ಅಂದರೆ ೧ ಅಥವಾ ೩ ವರ್ಷಗಳ ಒಳಗೆ) ಇದರ ಅರ್ಥ ಹೇಗಿದೆಯೆಂದರೆ, ಕಾಂಗ್ರೆಸ್ ಸರಕಾರ ವಕ್ಫ್ ಬೋರ್ಡ್‌ಗೆ ಮಿತಿಮೀರಿದ ಅಧಿಕಾರವನ್ನು ನೀಡಿದೆ. ಆದ್ದರಿಂದ ತಾಜಮಹಲನ್ನು ಕೂಡ ‘ವಕ್ಫ್‌ನ ಆಸ್ತಿ’ ಎಂದು ಘೋಷಿಸಿದೆ ಎಂದು ತಿಳಿಯಿತು.

ಇ. ‘ವಕ್ಫ್ ಆಕ್ಟ್ ಸೆಕ್ಷನ್’ ೫೨ ಮತ್ತು ೫೪ ರಲ್ಲಿ ಹೇಗೆ ಅಧಿಕಾರವನ್ನು ನೀಡಲಾಗಿದೆಯೆಂದರೆ, ಒಂದು ವೇಳೆ ವಕ್ಫ್‌ನ ಸ್ಥಳವನ್ನು ಯಾರಾದರೂ ತೆಗೆದುಕೊಂಡರೆ, ವಕ್ಫ್ ಬೋರ್ಡ್ ಅವರಿಗೆ ಸ್ವತಃ ‘ಡಿಸ್ಪೋಸ್’ ಮಾಡುವ ಆದೇಶವನ್ನು ನೀಡಲು ಸಾಧ್ಯವಿದೆ ಹಾಗೂ ಜಿಲ್ಲಾ ದಂಡಾಧಿಕಾರಿಗಳಿಗೆ ನೀವು ನಮ್ಮ ಆದೇಶವನ್ನು ಪಾಲಿಸಿ ಹಾಗೂ ಆ ಆಸ್ತಿಯನ್ನು ನಮಗೆ ಹಿಂತಿರುಗಿಸಿರಿ ಎಂದು ಹೇಳಬಹುದು. ತದ್ವಿರುದ್ಧ ಯಾರಾದರೂ ಮಂದಿರದ ಆಸ್ತಿಯನ್ನು ನಿಯಂತ್ರಿಸುತ್ತಿದ್ದರೆ, ಆಗ ಹಿಂದೂಗಳಿಗೆ ಒಂದು ದಿವಾಣಿ ಖಟ್ಲೆಯನ್ನು ದಾಖಲಿಸಿ ಜೀವಮಾನವಿಡೀ ಕಾನೂನಿನ ಹೋರಾಟ ಮಾಡಬೇಕಾಗುತ್ತದೆ.

ಈ. ಸೆಕ್ಷನ್ ೮೯ ರಲ್ಲಿ ವ್ಯವಸ್ಥೆ ಹೇಗಿದೆಯೆಂದರೆ, ಒಂದು ವೇಳೆ ನಮಗೆ ವಕ್ಫ್‌ನ ಆಸ್ತಿಯ ವಿಷಯದಲ್ಲಿ ಸವಾಲು ನೀಡಲಿಕ್ಕಿದ್ದರೆ, ಅವರಿಗೆ ೨ ತಿಂಗಳು ಮೊದಲೆ ನೋಟಿಸ್ ನೀಡಬೇಕು. ಇವೆಲ್ಲ ವಿಷಯಗಳನ್ನು ನೋಡಿದಾಗ, ಅವರಿಗೆ ಒಂದು ಸಮನಾಂತರ ಸರಕಾರದ ಅಧಿಕಾರವನ್ನು ನೀಡಲಾಗಿದೆ, ಎಂದರಿವಾಗುತ್ತದೆ. ಇಂತಹ ಅಧಿಕಾರವನ್ನು ಯಾವುದೇ ಮಠಾಧೀಶರಿಗೆ, ಪುರೋಹಿತರಿಗೆ ಅಥವಾ ಸಂತರಿಗೆ ನೀಡಲಾಗಿದೆಯೇ ? ಇದು ಧರ್ಮದ ಆಧಾರದಲ್ಲಿ ತಾರತಮ್ಯವಾಗಿದೆ.

ಉ. ಸೆಕ್ಷನ್ ೧೦೭ ರಲ್ಲಿ ಅವರಿಗೆ ಸಮಯಮಿತಿಯಲ್ಲಿಯೂ ರಿಯಾಯಿತಿ ನೀಡಲಾಗಿದೆ, ಅಂದರೆ ಒಂದು ವೇಳೆ ಹಿಂದೂಗಳು ತಮ್ಮ ಮಂದಿರಕ್ಕಾಗಿ ನಿರ್ದಿಷ್ಟ ಸಮಯದೊಳಗೆ ನ್ಯಾಯಾಲಯಕ್ಕೆ ಹೋಗದಿದ್ದರೆ, ಅವರು ಖಟ್ಲೆಯನ್ನು ದಾಖಲಿಸಲು ಸಾಧ್ಯವಿಲ್ಲ. ಇಂತಹ ಸಮಯಮಿತಿ ವಕ್ಫ್‌ಗೆ ಇಲ್ಲ. ಅವರಿಗೆ ಯಾವಾಗ ಅವರ ಆಸ್ತಿ ಇದೆಯೆಂದು ತಿಳಿಯುವುದೊ, ಆಗ ಅವರು ನ್ಯಾಯಾಲಯದ ಬಾಗಿಲು ತಟ್ಟಬಹುದು. ಭಾರತದ ಹಿಂದೂ ಸಮಾಜ ಜಾಗೃತವಾಗಿ ತನ್ನ ಅಧಿಕಾರಕ್ಕಾಗಿ ಹೋರಾಡಬೇಕು ಹಾಗೂ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಭಾಗವಹಿಸಬೇಕು, ಎಂಬುದೇ ಇವೆಲ್ಲ ವಿಷಯಗಳನ್ನು ಹೇಳುವುದರ ಹಿಂದಿನ ಉದ್ದೇಶವಾಗಿದೆ.

– ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ (ಮುಕ್ತಾಯ)

ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು ನ್ಯಾಯಾಂಗ ಹೋರಾಟ ಮಾಡಿ ಕ್ರಾಂತಿಕಾರಿ ಚಂದ್ರಶೇಖರ ಆಝಾದ್ ಇವರು ಆತ್ಮಸಮರ್ಪಣೆ ಮಾಡಿರುವ ‘ಅಲ್ಫೋರ್ಡ್ ಪಾರ್ಕ’ನ್ನು ಮಜಾರ್ ಮತ್ತು ಮಸೀದಿಯಿಂದ ಮುಕ್ತಗೊಳಿಸುವುದು

ನ್ಯಾಯವಾದಿ ವಿಷ್ಣುಶಂಕರ ಜೈನ್

ಪ್ರಯಾಗರಾಜನಲ್ಲಿ ಕ್ರಾಂತಿ ಕಾರಿ ಚಂದ್ರಶೇಖರ ಆಝಾದ್ ಇವರು ಆತ್ಮಸಮರ್ಪಣೆ ಮಾಡಿದ ಸ್ಥಾನವನ್ನು ‘ಅಲ್ಫೋರ್ಡ್ ಪಾರ್ಕ್’ ಎಂದು ಸಂಬೋಧಿಸಲಾಗುತ್ತದೆ. ಅಲ್ಲಿ ೨೦ ಮಜಾರ್ (ಇಸ್ಲಾಮೀ ಪೀರ ಅಥವಾ ಫಕೀರರ ಗೋರಿ) ಮತ್ತು ೧ ಮಸೀದಿಯನ್ನು ನಿರ್ಮಿಸಲಾಗಿತ್ತು. ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ದಾಖಲಿಸಿ, ‘ಇದು ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ಇವರ ಪುಣ್ಯಭೂಮಿಯಾಗಿದೆ. ಆದ್ದರಿಂದ ಅಲ್ಲಿಂದ ಎಲ್ಲ ಮಜಾರ್ ಗಳನ್ನು ತೆರವುಗೊಳಿಸಬೇಕು’, ಎಂದರು. ಅನಂತರ ವಕ್ಫ್ ಈ ವಿಷಯದಲ್ಲಿ ಪ್ರತಿಜ್ಞಾಪತ್ರವನ್ನು ಸಲ್ಲಿಸಿ, ‘ಈ ಸ್ಥಳವನ್ನು ೧೯೯೧ ರಲ್ಲಿ ‘ವಕ್ಫ್ ಆಕ್ಟ್ ೧೯೯೫ ರ ಅಂತರ್ಗತ ನೋಂದಣಿ ಮಾಡಿದೆ’, ಎಂದಿತು. ೧೯೯೫ರಲ್ಲಿ ವಕ್ಫ್ ಆಕ್ಟ್ ಜ್ಯಾರಿಯಾಗಿದೆ ಹಾಗೂ ೧೯೯೧ ರಲ್ಲಿ ವಕ್ಫ್‌ನ ಆಸ್ತಿಯೆಂದು ನೋಂದಣಿಯಾಗಿದೆ ಇದು ಎಷ್ಟು ಹಾಸ್ಯಾಸ್ಪದವಾಗಿದೆ ?

ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಹೀಗೆ ಮೊದಲ ಬಾರಿ, ‘ಅಲಹಾಬಾದ್ ಉಚ್ಚ ನ್ಯಾಯಾಲಯವು ಅಲ್ಲಿಂದ ೨೦ ಮಜಾರ್ ಮತ್ತು ೧ ಮಸೀದಿಯನ್ನು ತೆರವುಗೊಳಿಸಬೇಕು’, ಎಂದು ಆದೇಶ ನೀಡಿತು. ಆದ್ದರಿಂದ ಇಂದು ಸಂಪೂರ್ಣ ಮೈದಾನ ‘ಕ್ರಾಂತಿಕಾರಿ ಚಂದ್ರಶೇಖರ ಆಝಾದ್ ಪಾರ್ಕ್’ ಆಗಿದೆ.

– ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ