ಕರ್ನಾಟಕದಲ್ಲಿನ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತ ಗೊಳಿಸಲಾಗುವುದು !

ಕರ್ನಾಟಕದ ವಿಧಾನಸಭೆಯಲ್ಲಿ ಸರಕಾರದಿಂದ ಪ್ರಸ್ತಾವ ಪ್ರಸ್ತುತ !

ಕರ್ನಾಟಕದಲ್ಲಿನ ಭಾಜಪ ಸರಕಾರದ ಶ್ಲಾಘನೀಯ ನಿರ್ಣಯ ! ಇನ್ನು ದೇಶದಲ್ಲಿನ ಇತರ ರಾಜ್ಯಗಳು ಸಹ ಈ ರೀತಿಯ ನಿರ್ಣಯ ತೆಗೆದುಕೊಳ್ಳಬೇಕು, ಅದಕ್ಕಾಗಿ ಹಿಂದೂಗಳು ಮತ್ತು ಅವರ ಸಂಘಟನೆಗಳು ಪ್ರಯತ್ನ ಮಾಡಬೇಕು !

ಬೆಂಗಳೂರು – ರಾಜ್ಯದ ಭಾಜಪ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನದಲ್ಲಿ ಸರಕಾರಿಕರಣಗೊಂಡಿರುವ ದೇವಸ್ಥಾನಗಳನ್ನು ಮುಕ್ತ ಮಾಡುವ ಪ್ರಸ್ತಾವ ಪ್ರಸ್ತುತಪಡಿಸಿದರು. ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ೩೪ ಸಾವಿರ ದೇವಸ್ಥಾನಗಳಿವೆ.

ದೇವಸ್ಥಾನಗಳನ್ನು ಅಭಿವೃದ್ಧಿಗೊಳಿಸುವ ಅಧಿಕಾರ ದೇವಸ್ಥಾನಗಳಿಗೆ ಒಪ್ಪಿಸಲಾಗುವುದು !

ಮುಖ್ಯಮಂತ್ರಿ ಬೊಮ್ಮಾಯಿಯವರು ದೇವಸ್ಥಾನ ಬಗ್ಗೆ ಮಾತನಾಡುತ್ತಾ, ದೇವಸ್ಥಾನದ ಸರಕಾರೀಕರಣ ರದ್ದುಪಡಿಸುವ ಬೇಡಿಕೆ ಅನೇಕ ವರ್ಷಗಳಿಂದ ಮಾಡಲಾಗುತ್ತಿತ್ತು. ಭಕ್ತರ ಈ ಬೇಡಿಕೆಯ ವಿಚಾರ ಮಾಡಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತ ಗೊಳಿಸಲಾಗುವುದು. ದೇವಸ್ಥಾನಗಳನ್ನು ಅಭಿವೃದ್ಧಿಗೊಳಿಸುವ ಅಧಿಕಾರವನ್ನು ದೇವಸ್ಥಾನಗಳಿಗೆ ಒಪ್ಪಿಸಲಾಗುವುದು.

ಕಾಶಿಯಾತ್ರೆಗೆ ಹೋಗುವಾಗ ‘ಪವಿತ್ರ ಯಾತ್ರೆ’ ಯೋಜನೆ ಆರಂಭಿಸಲಾಗುವುದು !

ಕಾಶಿ ಯಾತ್ರೆಗೆ ಹೋಗುವ ೩೦ ಸಾವಿರ ಯಾತ್ರಿಕರಿಗೆ ಪ್ರತಿಯೊಬ್ಬರಿಗೂ ೫ ಸಾವಿರ ರೂಪಾಯಿ ಅನುದಾನ ನೀಡಲಾಗುವುದು, ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರು ಘೋಷಿಸಿದರು. ಅದಕ್ಕಾಗಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ‘ಪವಿತ್ರ ಯಾತ್ರೆ’ ಯೋಜನೆ ಆರಂಭಿಸಲಾಗುವುದು.

ಹನುಮಂತನ ಜನ್ಮಸ್ಥಳದ ಅಭಿವೃದ್ಧಿಗಾಗಿ ೧೦೦ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು

ರಾಜ್ಯದ ಕೊಪ್ಪಳ ಜಿಲ್ಲೆಯ ಶ್ರೀ ಹನುಮಂತನ ಜನ್ಮಸ್ಥಳವೆಂದು ನಂಬಿರುವ ಅಂಜನಾದ್ರಿ ಪರ್ವತದ ಅಭಿವೃದ್ಧಿಗಾಗಿ ೧೦೦ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು.

ರೈತರಿಗೆ ೨ ಸಾವಿರ ದೇಶಿ ಹಸುಗಳನ್ನು ವಿತರಿಸಲಾಗುವುದು

ಮುಖ್ಯಮಂತ್ರಿಗಳು ಗೋಶಾಲೆಯಲ್ಲಿನ ಹಸುಗಳನ್ನು ದತ್ತು ಪಡೆಯಲು ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಮನವಿ ಮಾಡುವ ಯೋಜನೆ ರೂಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿಯವರು, ‘ದೇಶಿ ಹಸುಗಳ ವಂಶ ರಕ್ಷಣೆ ಮಾಡುವುದು ಮತ್ತು ಅದನ್ನು ಬೆಳೆಸುವುದು ಅದಕ್ಕಾಗಿ ಕರ್ನಾಟಕ ಹಾಲು ಮಾರಾಟ ಮಹಾಸಂಘದ ವತಿಯಿಂದ ರೈತರಿಗೆ ೨ ಸಾವಿರ ದೇಶಿ ಹಸುಗಳನ್ನು ವಿತರಿಸಲಾಗುವುದು. ಗೋಶಾಲೆಯಲ್ಲಿ ಕಸದಿಂದ ಪರಿಸರ ಸ್ನೇಹಿ ಉತ್ಪಾದನೆಗಳು ಮಾಡಲಾಗುವುದು. ಇದಕ್ಕಾಗಿ ಸರಕಾರ ಆರ್ಥಿಕ ಸಹಾಯ ನೀಡಲಿದೆ.’