ದೇವಸ್ಥಾನಗಳ ಸರಕಾರೀಕರಣ ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಯೋಗ್ಯ ದೃಷ್ಟಿಕೋನ !

೧. ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಅವ್ಯವಹಾರಗಳನ್ನು ಟೀಕಿಸಿದ ಬಗ್ಗೆ ರಂಗರಾಜನ್ ನರಸಿಂಹನ ಇವರ ಮೇಲೆ ವಿಶ್ವಸ್ಥರ ದೂರಿನ ಮೇರೆಗೆ ಅಪರಾಧ ದಾಖಲಾಗುವುದು

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

ರಂಗರಾಜನ್ ನರಸಿಂಹನ್ ಇವರ ವಿರುದ್ಧ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ವಿಶ್ವಸ್ಥರು ನೀಡಿದ ದೂರಿಗನ್ವಯ ಪೊಲೀಸರು ೨ ಕ್ರಿಮಿನಲ್ ಅಪರಾಧಗಳನ್ನು ದಾಖಲಿಸಿದ್ದರು. ಅವರ ಮೇಲಿನ ಅಪರಾಧವನ್ನು ರದ್ದುಪಡಿಸುವಾಗ ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ವಿಭಾಗೀಯ ಪೀಠವು ಒಂದು ಮಹತ್ವದ ವಿಷಯವನ್ನು ಸ್ಪರ್ಶ ಮಾಡಿತು. ಶ್ರೀ ರಂಗನಾಥ ಸ್ವಾಮಿ ದೇವಸ್ಥಾನವು ತಮಿಳುನಾಡಿನ ವೈಷ್ಣವರ ಪ್ರಾಚೀನ ದೇವಸ್ಥಾನವಾಗಿದೆ. ಈ ವಿಷಯದಲ್ಲಿ ನ್ಯಾಯಾಧೀಶ ಜಿ.ಆರ್. ಸ್ವಾಮಿನಾಥನ್ ಇವರು ಇತ್ತೀಚೆಗಷ್ಟೇ ತೀರ್ಪು ನೀಡಿದ್ದರು. ಈ ಕ್ರಿಮಿನಲ್ ಯಾಚಿಕೆಯಲ್ಲಿ ರಂಗರಾಜನ್ ನರಸಿಂಹನ್ ಇವರು ಸರಕಾರೀಕರಣವಾಗಿರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಅವ್ಯವಹಾರದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಠೋರವಾಗಿ ಟೀಕಿಸಿದ್ದರು. ಆದ್ದರಿಂದ ದೇವಸ್ಥಾನದ ಅವಮಾನವಾಗಿದೆ; ಎಂದು ದೇವಸ್ಥಾನದ ಪೂರ್ವಾಶ್ರಮದ ವಿಶ್ವಸ್ಥರು ನರಸಿಂಹನ್ ಇವರ ವಿರುದ್ಧ ದೂರು ನೀಡಿದರು ಹಾಗೂ ಕ್ರಿಮಿನಲ್ ದಂಡ ಸಂಹಿತೆಯ ಕಲಮ್ ೫೦೦, ೫೦೨, ೫೦೫ (೨) ಕ್ಕನುಸಾರ ದಂಡಿಸಬೇಕು ಹಾಗೂ ಹೊಸ ಮಾಹಿತಿ ತಂತ್ರಜ್ಞಾನ ಕಾನೂನಿನ ಕಲಮ್ ೪೫ ಕ್ಕನುಸಾರ ಶಿಕ್ಷೆ ನೀಡಬೇಕು ಎನ್ನುವ ಎರಡು ಅಪರಾಧಗಳನ್ನು ಶ್ರೀರಂಗಮ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು.

ಹಿಂದೂಗಳಿಗೆ ಆಶಾದಾಯಕವಾಗಿರುವ ದೇವಸ್ಥಾನ ಸಮಿತಿಯ ವಿಷಯದಲ್ಲಿ ನೀಡಿರುವ ತೀರ್ಪುಪತ್ರ !

೧. ನ್ಯಾಯಾಧೀಶರು ಮಹಾಬಲೀಪುರಮ್ ದೇವಸ್ಥಾನದ ವಿಷಯದಲ್ಲಿ ‘ದ ಹಿಂದೂ’ ಈ ವರ್ತಮಾನಪತ್ರಿಕೆಯಲ್ಲಿ ಬಂದಿರುವ ಲೇಖನವನ್ನು ‘ಸುಮೋಟೋ ಅರ್ಜಿ’ ಎಂದು ಘೋಷಿಸುವುದು

ಮದ್ರಾಸ್ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ ಇವುಗಳ ಅನೇಕ ಹಳೆಯ ತೀರ್ಪುಪತ್ರಗಳನ್ನು ಉಲ್ಲೇಖಿಸಿ ಒಂದು ಅಭ್ಯಾಸಪೂರ್ಣ ತೀರ್ಪುಪತ್ರವನ್ನು ಸಿದ್ಧಪಡಿಸಲಾಯಿತು. ಅದು ಹಿಂದೂಗಳಿಗೆ ಆಶಾದಾಯಕವಾಗಿದೆ. ದೇವಸ್ಥಾನಗಳು, ಹಿಂದೂ ದೇವತೆಗಳು ಮತ್ತು ಸಂತರ ಉಪೇಕ್ಷೆಯಾದರೆ ಹಿಂದೂಗಳು ನ್ಯಾಯಾಲಯದಲ್ಲಿ ನ್ಯಾಯ ಕೇಳಬೇಕು. ಸರಕಾರವು ಮಹಾಬಲಿಪುರಮ್ ದೇವಸ್ಥಾನಕ್ಕಾಗಿ ೧೭ ಸದಸ್ಯರ ಸಮಿತಿಯನ್ನು ನೇಮಕ ಮಾಡಿ ಅದಕ್ಕೆ ಜಾಗತಿಕ ಸ್ಥಾನಮಾನವನ್ನು ಗಳಿಸಿಕೊಡುವೆವು, ಎಂದು ಘೋಷಿಸಿತ್ತು; ಆದರೆ ಅದರ ಅನುಷ್ಠಾನವಾಗಲಿಲ್ಲ. ಈ ವಿಷಯದಲ್ಲಿ ‘ದ ಹಿಂದೂ’ ಈ ನಿಯತಕಾಲಿಕೆಯಲ್ಲಿ ಒಂದು ಲೇಖನ ಪ್ರಕಾಶನವಾಗಿತ್ತು. ಮುಖ್ಯ ನ್ಯಾಯಮೂರ್ತಿಗಳ ಪೀಠವು ಈ ಲೇಖನವನ್ನು ‘ಸುಮೋಟೋ ಅರ್ಜಿ’ ಎಂದು ಘೋಷಿಸಿತು.

೨. ತೀರ್ಪುಪತ್ರದಲ್ಲಿ ನ್ಯಾಯಾಧೀಶರು, “ಮಹಾಬಲೀಪುರಮ್ ಇದು ಪಲ್ಲವ ರಾಜರ ೭ ನೇ ಅಥವಾ ೮ ನೇ ಶತಮಾನದ ರಾಜಧಾನಿಯ ನಗರವಾಗಿತ್ತು. ಅಲ್ಲಿ ಪಲ್ಲವ ರಾಜಾ ‘ನರಸಿಂಹವರ್ಮನ್’ ಆಡಳಿತ ನಡೆಸುತ್ತಿದ್ದನು. ಅವನ ಕಾಲದಲ್ಲಿ ಯಾವ ಪದ್ಧತಿಯಲ್ಲಿ ದೇವಸ್ಥಾನಗಳು ನಿರ್ಮಾಣವಾಗಿದ್ದವೋ, ಆ ದೇವಸ್ಥಾನಗಳಿಗೆ ಪುನರ್ವೈಭವ ಪ್ರಾಪ್ತಿಯಾಗಬೇಕು. ಈ ದೇವಸ್ಥಾನಗಳು ಹಿಂದೂ ರಾಜರ ಸುವರ್ಣಮಯ ಕಾಲವನ್ನು ತೋರಿಸುತ್ತವೆ. ಭವ್ಯದಿವ್ಯವಾದ ಶಿಲೆಗಳಲ್ಲಿ ಕೆತ್ತನೆ ಕೆಲಸ ಮಾಡಿ ದೇವಸ್ಥಾನಗಳನ್ನು ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನಗಳಲ್ಲಿ ಮಹಾಭಾರತದ ಅನೇಕ ಘಟನೆಗಳ ಉಲ್ಲೇಖವಿದೆ. ಅರ್ಜುನ ಮತ್ತು ಪಾಂಡವರ ಕಾರ್ಯದ ಬಗ್ಗೆಯೂ ಉಲ್ಲೇಖವಿದೆ. ಇಂತಹ ದೇವಸ್ಥಾನವನ್ನು ‘ಜಾಗತಿಕ ಸಂಪತ್ತು’ ಎಂದು ಘೋಷಿಸುವ ನಿರ್ಣಯವನ್ನು ಸರಕಾರ ಮಾಡಿದೆ; ಆದರೆ ಅದಕ್ಕಾಗಿ ಏನೂ ಮಾಡಲಿಲ್ಲ. ಆದ್ದರಿಂದ ೧೭ ಸದಸ್ಯರ ಸಮಿತಿಯನ್ನು ನೇಮಕ ಮಾಡಬೇಕು. ಆ ಸಮಿತಿಯಲ್ಲಿ ಪುರಾತತ್ವ ವಿಭಾಗದ ಅಧಿಕಾರಿಗಳು, ಇತಿಹಾಸತಜ್ಞರು, ಶಿಲ್ಪಶಾಸ್ತ್ರ ತಜ್ಞರು, ಯುನೆಸ್ಕೋ ಪ್ರತಿನಿಧಿ ಹಾಗೂ ಅನೇಕ ರಾಜ್ಯಗಳಲ್ಲಿನ ಉಚ್ಚಸ್ತರದ ಅಧಿಕಾರಿಗಳ ಸಮಾವೇಶವಿರಬೇಕು”, ಎಂದು ಹೇಳಿದ್ದಾರೆ.

೩. ಈ ತೀರ್ಪುಪತ್ರವು ೨೦೦ ಕ್ಕಿಂತಲೂ ಹೆಚ್ಚು ಪುಟಗಳದ್ದಾಗಿದೆ. ಅದರ ೫೫ ನೇ ಪರಿಚ್ಛೇದದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಅನೇಕ ಮಾರ್ಗದರ್ಶಕ ತತ್ತ್ವಗಳನ್ನು ನೀಡಲಾಗಿದೆ. ‘ಈ ಸಮಿತಿ ೧೭ ಸದಸ್ಯರದ್ದಾಗಿದ್ದು ನಿರ್ದಿಷ್ಟ ವಾರದಲ್ಲಿ ಅದನ್ನು ನೇಮಿಸಬೇಕು. ಸಮಿತಿಯು ದೇವಸ್ಥಾನಗಳ ಸಮೀಕ್ಷೆ ಮಾಡಬೇಕು. ಅನಂತರ ರಾಜ್ಯಸ್ತರದ ಹಾಗೂ ಜಿಲ್ಲಾಸ್ತರದ ಸಮಿತಿಗಳನ್ನು ನೇಮಿಸಬೇಕು. ಅವರು ತಮ್ಮ ಕ್ಷೇತ್ರಗಳಲ್ಲಿ ಬರುವ ದೇವಸ್ಥಾನಗಳ ಅಭ್ಯಾಸ ಮಾಡಬೇಕು ಹಾಗೂ ೧೦೦ ವರ್ಷಗಳ ಹಿಂದಿನ ದೇವಸ್ಥಾನಗಳನ್ನು ‘ಪುರಾತನ ವಾಸ್ತು’ ಎಂದು ಘೋಷಣೆ ಮಾಡಬೇಕು. ದೇವಸ್ಥಾನ ಸಮಿತಿಯ ನಿರ್ವಹಣೆಯಲ್ಲಿ ಆ ದೇವತೆಗಳಿಗೆ ನೀಡಿರುವ ಭೂಮಿಯ ವಿವರಣೆಯನ್ನು ಇಟ್ಟಿರಬೇಕು, ಇವು ಅದರಲ್ಲಿನ ಕೆಲವು ಮಾರ್ಗದರ್ಶಕ ತತ್ತ್ವಗಳಾಗಿದ್ದವು.

೪. ಯಾವ ರೈತರ ವಶದಲ್ಲಿ ಭೂಮಿಯಿದೆಯೋ, ಅವರಿಂದ ಕಂದಾಯವನ್ನು ವಸೂಲಿ ಮಾಡಬೇಕು. ಈ ಹಣವನ್ನು ದೇವಸ್ಥಾನದ ಪೂಜೆ, ಅದರಲ್ಲಿನ ವಿಶಿಷ್ಟ ಅರ್ಚನೆಯ ಪದ್ಧತಿಗಾಗಿ ಉಪಯೋಗಿಸಬೇಕು. ಭೂಮಿಯನ್ನು ಕಬಳಿಸಿದ್ದರೆ ಕ್ರಿಮಿನಲ್ ಅಪರಾಧವನ್ನು ದಾಖಲಿಸಬೇಕು. ೫ ವರ್ಷಕ್ಕೊಮ್ಮೆ ಕಂದಾಯ ಅಥವಾ ಬಾಡಿಗೆಯನ್ನು ಹೆಚ್ಚಿಸಬೇಕು. ಈ ಹಣದ ಲೆಕ್ಕಪತ್ರವನ್ನಿಡಬೇಕು. ದೇವಸ್ಥಾನಕ್ಕೆ ‘ಸ್ಟ್ರಾಂಗ್ ರೂಮ್’ (ಬೆಲೆ ಬಾಳುವ ವಸ್ತುಗಳನ್ನು ಇಡುವ ಸುರಕ್ಷಿತ ಕೋಣೆ) ಇರಬೇಕು. ಅದರಲ್ಲಿ ದೇವಸ್ಥಾನದ ಬೆಲೆಬಾಳುವ ಆಭರಣಗಳನ್ನು ಹಾಗೂ ಅರ್ಪಣೆಯ ಹಣವನ್ನಿಡಬೇಕು. ದೇವಸ್ಥಾನದಲ್ಲಿ ಎಷ್ಟು ದೇವತೆಗಳಿವೆ ? ಆ ಮೂರ್ತಿಯನ್ನು ಯಾವ ಧಾತುವಿನಿಂದ ತಯಾರಿಸಲಾಗಿದೆ ? ಎನ್ನುವ ವಿವರಣೆ ಇರಬೇಕು. ಅದರಲ್ಲಿನ ಯಾವುದಾದರೊಂದು ಮೂರ್ತಿ ಕಳೆದುಹೋದರೆ, ಕಳ್ಳತನವಾದರೆ ಅಥವಾ ಅದನ್ನು ಕಳ್ಳಸಾಗಾಣಿಕೆ ಮಾಡಿದರೆ ಆಗ ಕ್ರಿಮಿನಲ್ ಅಪರಾಧವನ್ನು ದಾಖಲಿಸಬೇಕು. ಇವೆಲ್ಲ ಪ್ರಕರಣದಲ್ಲಿ ಯಾವುದು ಕ್ರಿಮಿನಲ್ ಹಾಗೂ ದಿವಾಣಿ ಖಟ್ಲೆ ಆಗುವುದೋ, ಅದಕ್ಕಾಗಿ ಒಂದು ಸ್ವತಂತ್ರ ಪ್ರಾಧೀಕರಣವನ್ನು ರೂಪಿಸಬೇಕು. ಜಿಲ್ಲಾ ನ್ಯಾಯಾಧೀಶರು ಅದರ ಅಧ್ಯಕ್ಷರಾಗಿರಬೇಕು. ‘ಮಹಾ ಬಲೀಪುರಮ್’ಗೆ ಜಾಗತಿಕ ಸ್ಥಾನಮಾನವನ್ನು ಗಳಿಸಿಕೊಡಲು ಪ್ರಯತ್ನಿಸಬೇಕು, ಎನ್ನುವ ಸೂಚನೆಯನ್ನೂ ಈ ಸಂಪೂರ್ಣ ತೀರ್ಪುಪತ್ರದಲ್ಲಿ ನೀಡಲಾಗಿದೆ.

– (ಪೂ) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ನ್ಯಾಯವಾದಿಗಳು, ಮುಂಬೈ ಉಚ್ಚ ನ್ಯಾಯಾಲಯ

೨. ಸರಕಾರೀಕರಣವಾಗಿರುವ ಹಿಂದೂ ದೇವಸ್ಥಾನಗಳಲ್ಲಿನ ಅವ್ಯವಹಾರವನ್ನು ತಡೆಗಟ್ಟಿ ಅವುಗಳಿಗೆ ಪುನರ್ವೈಭವವನ್ನು ಪ್ರಾಪ್ತಿಮಾಡಿಕೊಡಬೇಕೆಂದು ಅರ್ಜಿದಾರರಿಗೆ ಅನಿಸಿರುವುದು

ಅರ್ಜಿದಾರ ನರಸಿಂಹನ್ ಇವರು ರಂಗನಾಥ ಸ್ವಾಮಿ ದೇವಸ್ಥಾನದ ಭಕ್ತರಾಗಿದ್ದಾರೆ. ಅವರ ಹೇಳಿಕೆಗನುಸಾರ ಹಿಂದೂಗಳ ದೇವಸ್ಥಾನಗಳು ಅತ್ಯಂತ ಪವಿತ್ರ ಸ್ಥಾನಗಳಾಗಿದ್ದು ಅಲ್ಲಿಂದ ಭಕ್ತರಿಗೆ ಉರ್ಜೆ ಹಾಗೂ ಚೈತನ್ಯ ಸಿಗುತ್ತದೆ. ದೇವಸ್ಥಾನದಲ್ಲಿ ದೇವತೆಗಳ ಪೂಜೆ ಪುರಸ್ಕಾರ ನಡೆಯದಿದ್ದರೆ ಹಾಗೂ ಅಲ್ಲಿನ ನೀತಿನಿಯಮಗಳನ್ನು ಪಾಲಿಸದಿದ್ದರೆ, ಈ ದೇವಸ್ಥಾನಗಳ ಆಡಳಿತವನ್ನು ಬದಲಾಯಿಸಬೇಕು. ದೇವತೆಗೆ ಅರ್ಪಣೆಯಲ್ಲಿ ಬಂದಿರುವ ಭೂಮಿಯನ್ನು ಇತರರು ಕಬಳಿಸುತ್ತಾರೆ. ದೇವಸ್ಥಾನದ ದೇವತೆಗಳ ಪ್ರಾಚೀನ ಮೂರ್ತಿಗಳ ಕಳ್ಳತನವಾಗುತ್ತದೆ ಅಥವಾ ಅವುಗಳ ಕಳ್ಳಸಾಗಾಣಿಕೆಯಾಗುತ್ತದೆ. ಇವೆಲ್ಲ ಅವ್ಯವಹಾರಗಳು ಆಡಳಿತವು ದೇವಸ್ಥಾನದ ಕಡೆಗೆ ದುರ್ಲಕ್ಷ ಮಾಡುವುದರಿಂದಾಗುತ್ತದೆ. ತಮಿಳುನಾಡಿನಲ್ಲಿ ಸರಕಾರ ವಶಪಡಿಸಿಕೊಂಡಿರುವ ಇಂತಹ ಸಾವಿರಾರು ದೇವಸ್ಥಾನಗಳಿವೆ. ಅಲ್ಲಿ ಒಂದು ದೀಪವನ್ನೂ ಸಹ ಹಚ್ಚುವುದಿಲ್ಲ. ಆದ್ದರಿಂದ ಅವುಗಳಿಗೆ ಪುನರ್ವೈಭವವನ್ನು ಗಳಿಸಿಕೊಡುವ ಅವಶ್ಯಕತೆಯಿದೆ.

ಇವೆಲ್ಲ ವಿಷಯಗಳನ್ನು ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ತಾನಾಗಿಯೇ ಗಮನಿಸಿದ, ಅಂದರೆ ‘ಸುಮೋಟೋ ರಿಟ್ ಪಿಟಿಶನ್’ನ (ಸ್ವಯಂಪ್ರೇರಿತ ಅರ್ಜಿ) ತೀರ್ಪು ಪತ್ರದಲ್ಲಿ ನಮೂದಿಸಲಾಗಿದೆ. ಆ ತೀರ್ಪಿನ ಹೆಸರು ೨೦೧೫ ರಲ್ಲಿ ‘ಪೆರಿಯೆಂಬಿ ನರಸಿಂಹನ್ ಗೋಪಾಲನ್’ ವಿರುದ್ಧ ಕೇಂದ್ರ ಸರಕಾರ ಹಾಗೂ ತಮಿಳುನಾಡು ಸರಕಾರ ಇದರಲ್ಲಿ ಸವಿಸ್ತಾರವಾಗಿ ಬಂದಿದೆ.

೩. ನರಸಿಂಹನ್ ಇವರ ವಿರುದ್ಧದ ಅಪರಾಧವನ್ನು ರದ್ದುಪಡಿಸುವಾಗ ನ್ಯಾಯಾಲಯವು ದೇವಸ್ಥಾನ ಸರಕಾರಿಕರಣದ ವಿರುದ್ಧ ಮಹತ್ವಪೂರ್ಣ ಪ್ರಶ್ನೆಯನ್ನು ಮುಂದಿಟ್ಟಿದೆ

ಓರ್ವ ಭಕ್ತರು ದುಃಖಿತರಾಗಿ ಸಾಮಾಜಿಕ ಮಾಧ್ಯಮಗಳಿಂದ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಗಮನದಲ್ಲಿಟ್ಟು ಅದೃಷ್ಟವಶಾತ್ ನ್ಯಾಯಾಧೀಶರು ಅತ್ಯಂತ ಸಕಾರಾತ್ಮಕ ದೃಷ್ಟಿಕೋನದಿಂದ ವಿಚಾರ ಮಾಡಿದರು ಹಾಗೂ ದಾಖಲಿಸಲಾದ ಎರಡೂ ಅಪರಾಧಗಳನ್ನು ರದ್ದುಪಡಿಸಿದರು. ಇದರಲ್ಲಿ ‘ಕ್ರಿಮಿನಲ್ ಪ್ರೊಸಿಜರ್ ಕೋಡ್’ನಲ್ಲಿನ ಕಲಮ್ ೧೯೯ ಕ್ಕನುಸಾರ ಪೀಡಿತ ವ್ಯಕ್ತಿ ಅಪರಾಧವನ್ನು ದಾಖಲಿಸಬಹುದು, ಎನ್ನುವ ವಿಚಾರವು ಮೊತ್ತಮೊದಲು ಆಗಬೇಕು. ಕಲಮ್ ೧೯೯ ಕ್ಕನುಸಾರ ಎಷ್ಟರ ವರೆಗೆ ಪೀಡಿತ ವ್ಯಕ್ತಿಯು ಈ ಅಪರಾಧವನ್ನು ದಾಖಲಿಸುವುದಿಲ್ಲವೋ, ಅಷ್ಟರ ವರೆಗೆ ಯಾವುದೇ ನ್ಯಾಯಾಲಯವೂ ಒಂದು ಅಪರಾಧದ ‘ಕಾಗ್ನಿಝನ್ಸ್’ (ಅರಿವು) ಹಾಗೂ ನೋಂದಣಿ ಮಾಡುವ ಹಾಗಿಲ್ಲ.

ಅರ್ಜಿದಾರರ ಹೇಳಿಕೆಗನುಸಾರ ೧೯೯ ಉಪಕಲಮ್ ೪ ಕ್ಕನುಸಾರ ಇದಕ್ಕೆ ರಾಜ್ಯ ಸರಕಾರದ ಪೂರ್ವಾನುಮತಿ ಬೇಕಾಗುತ್ತದೆ. ಅಷ್ಟರವರೆಗೆ ನ್ಯಾಯಾಲಯವು ಈ ಅಪರಾಧವನ್ನು ನೋಂದಾಯಿಸುವಂತಿಲ್ಲ. ನ್ಯಾಯಾಧೀಶರು ತಮ್ಮ ತೀರ್ಪುಪತ್ರದಲ್ಲಿ ಮುಂದಿನಂತೆ ಹೇಳಿದ್ದಾರೆ, ‘ಇನ್ನೆಷ್ಟು ದಿನ ಹಿಂದೂಗಳ ದೇವಸ್ಥಾನಗಳು ಸರಕಾರದ ವಶದಲ್ಲಿರಬೇಕು ? ಈ ದೇವಸ್ಥಾನಗಳನ್ನು ಎಷ್ಟು ದಿನ ನಿಮ್ಮ ವಶದಲ್ಲಿಟ್ಟುಕೊಳ್ಳುವಿರಿ ? ಅದಕ್ಕೆ ಯಾವುದೇ ಮಿತಿಯಿಲ್ಲವೇ ? ಜಾತ್ಯತೀತ ಸರಕಾರ ಕೇವಲ ಹಿಂದೂಗಳ ದೇವಸ್ಥಾನಗಳನ್ನು ವಶಪಡಿಸಿಕೊಳ್ಳುತ್ತದೆ. ಯಾವಾಗ ತಾವು ಜಾತ್ಯತೀತ ಸರಕಾರವೆಂದು ಹೇಳುತ್ತಿರೋ ಆಗ ಮಸೀದಿ ಹಾಗೂ ಚರ್ಚ್‌ಗಳನ್ನು ಯಾಕೆ ವಶಪಡಿಸಿಕೊಳ್ಳುತ್ತಿಲ್ಲ ? ಅವುಗಳ ಮೇಲೆ ಯಾವತ್ತಾದರೂ ನಿಯಂತ್ರಣವನ್ನು ತಂದಿವೆಯೇ ? ಒಂದು ವೇಳೆ ಭಕ್ತರಿಗೆ ದೇವರ ಬಗ್ಗೆ ಇರುವ ಉತ್ಕಟ ಭಾವದಿಂದ ಏನಾದರೂ ಒಂದು ವಿಷಯವನ್ನು ಹೇಳಿದರೆ ಅವರ ಕಡೆಗೆ ಸಕಾರಾತ್ಮಕ ದೃಷ್ಟಿಯಿಂದ ನೋಡಬೇಕು. ಇದು ಕ್ರಿಮಿನಲ್ ವಿಷಯವಲ್ಲ. ಈ ವಿಷಯವನ್ನು ಸ್ಪಷ್ಟಪಡಿಸುವಾಗ ನ್ಯಾಯಾಲಯವು ಸರ್ವೋಚ್ಚ ನ್ಯಾಯಾಲಯದ ಅನೇಕ ಹಳೆಯ ತೀರ್ಪುಗಳ ಆಧಾರವನ್ನು ಕೊಟ್ಟಿದೆ. ‘ಕ್ರಿಮಿನಲ್ ದೂರನ್ನು ಯೋಗ್ಯವಾದ ವ್ಯಕ್ತಿಯು ನೀಡಿಲ್ಲ ಹಾಗಾಗಿ ನಾನು ಇವೆರಡೂ ಅಪರಾಧಗಳನ್ನು ರದ್ದುಪಡಿಸುತ್ತಿದ್ದೇನೆ’, ಎಂದು ನ್ಯಾಯಾಧೀಶರು ಹೇಳಿದರು.

ಮೇಲ್ನೋಟಕ್ಕೆ ನ್ಯಾಯಾಧೀಶರು ಅರ್ಜಿದಾರರ ಪರವಾಗಿ ತೀರ್ಪು ನೀಡಿದ್ದರೂ ಈ ನಿರ್ಣಯಕ್ಕೆ ವಿವಿಧಾಂಗಗಳಿಂದ ಪ್ರತ್ಯೇಕವಾದ ಮಹತ್ವವಿದೆ. ನ್ಯಾಯಾಧೀಶರು ತಮ್ಮ ತೀರ್ಪುಪತ್ರದಲ್ಲಿ ಹೇಳುತ್ತಾರೆ, ನಮ್ಮ ಹಿಂದೂ ಸಂಸ್ಕೃತಿಯಲ್ಲಿ ದೇವಸ್ಥಾನಗಳ ಪಾತ್ರವು ಮಹತ್ವದ್ದಾಗಿದೆ. ಸದ್ಯ ಸ್ಥಿತಿಯಲ್ಲಿ ಕೆಲವು ವಿಷಯಗಳನ್ನು ದುರ್ಲಕ್ಷ ಮಾಡಲಾಗುತ್ತದೆ.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ವಕೀಲ, ಮುಂಬಯಿ ಉಚ್ಚನ್ಯಾಯಾಲಯ. (೧.೩.೨೦೨೨)

|| ಶ್ರೀಕೃಷ್ಣಾರ್ಪಣಮಸ್ತು ||

ಹಿಂದುತ್ವನಿಷ್ಠ ವಕೀಲರು ಸರ್ವೋಚ್ಚ ನ್ಯಾಯಾಲಯದ ಮಹತ್ವದ ತೀರ್ಪುಪತ್ರಗಳ ಉದಾಹರಣೆಗಳನ್ನು ನೀಡಿ ದೇವಸ್ಥಾನಗಳಲ್ಲಿನ ಅವ್ಯವಹಾರಗಳ ವಿರುದ್ಧ ನ್ಯಾಯಾಲಯಗಳಲ್ಲಿ ಅರ್ಜಿಗಳನ್ನು ದಾಖಲಿಸಬೇಕು !

ಭವ್ಯದಿವ್ಯ ಹಿಂದೂ ಸಂಸ್ಕೃತಿಯ ಸುವರ್ಣ ಇತಿಹಾಸ, ಹಿಂದೂ ರಾಜರ ಪರಾಕ್ರಮ, ಅವರಿಗೆ ದೇವರ ಬಗ್ಗೆ ಇದ್ದ ಶ್ರದ್ಧೆ, ಅದಕ್ಕಾಗಿ ಅವರು ಮಾಡಿರುವ ಸಮರ್ಪಣೆ ಮತ್ತು ಶಿಲ್ಪಕಾರರ ಭವ್ಯ ಕಾರ್ಯಗಳ ವರದಿಯನ್ನು ದಕ್ಷಿಣದಲ್ಲಿನ ದೇವಸ್ಥಾನಗಳಲ್ಲಿ ತೋರಿಸಲಾಗಿರುತ್ತದೆ. ಹೊಸ ಪೀಳಿಗೆಗೆ ಈ ದೇವಸ್ಥಾನಗಳ ಪುನರ್ವೈಭವದ ಮಾಹಿತಿ ಇರಬೇಕು ಎಂಬುದಕ್ಕಾಗಿ ಹಿಂದುತ್ವನಿಷ್ಠ ವಕೀಲರು ಸರ್ವೋಚ್ಚ ನ್ಯಾಯಾಲಯದ ಅನೇಕ ಮಹತ್ವದ ತೀರ್ಪುಪತ್ರಗಳ ಉದಾಹರಣೆಯನ್ನು ನೀಡಿ ಹಿಂದೂಗಳ ದೇವಸ್ಥಾನಗಳು ಮತ್ತು ಅವರ ಭೂಮಿಯ ವಿಷಯದಲ್ಲಿ ಜಾಗರೂಕತೆಯಿಂದ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಅದರಿಂದ ತಮಗೆ ದೇವತೆಯ ಕೃಪೆಯಾಗುವುದು. ಇದೊಂದು ಸಮಷ್ಟಿ ಸೇವೆಯಾಗಿದೆ. ಇದರಲ್ಲಿ ಪ್ರತಿಯೊಬ್ಬ ಹಿಂದೂವು ತನ್ನ ಯೋಗದಾನವನ್ನು ನೀಡಬೇಕು.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ವಕೀಲ, ಮುಂಬಯಿ ಉಚ್ಚನ್ಯಾಯಾಲಯ (೧.೩.೨೦೨೨)