* ಸರಕಾರವು ಈ ರೀತಿ ಎಂದಾದರೂ ಬೇರೆ ಧರ್ಮದ ಶ್ರದ್ಧಾಸ್ಥಾನಗಳನ್ನು ವಶಪಡಿಸಿಕೊಂಡು ಅದರ ವ್ಯವಸ್ಥಾಪನೆ ಸಮಿತಿಯ ನೇಮಕ ಮಾಡುವ ಧೈರ್ಯ ತೋರಿಸಿದೆಯೇ ? ಸಂಪಾದಕರು * ದೇವಸ್ಥಾನಗಳು ಚೈತನ್ಯದ ಮೂಲ ಆಗಿದ್ದರಿಂದ ಅದು ಸರಕಾರೀಕರಣಗೊಂಡರೆ ದೇವಸ್ಥಾನದ ಚೈತನ್ಯ ಬೇಗ ಕಡಿಮೆಯಾಗುತ್ತದೆ. ಆದ್ದರಿಂದ ದೇವಸ್ಥಾನಗಳು ಭಕ್ತರ ವಶದಲ್ಲಿರುವುದು ಅವಶ್ಯಕವಾಗಿದೆ ! – ಸಂಪಾದಕರು |
ಬೆಳಗಾವಿ– ಜಿಲ್ಲೆಯಲ್ಲಿನ ‘ಎ’ ಪ್ರವರ್ಗದ ಪ್ರಮುಖ ೪ ದೇವಸ್ಥಾನಗಳ ಸಹಿತ ಒಟ್ಟು ೩೪ ದೇವಸ್ಥಾನಗಳ ವ್ಯವಸ್ಥಾಪನೆ ಸಮಿತಿಯ ನೇಮಕದ ನಿರ್ಣಯ ರದ್ದುಪಡಿಸಿರುವ ಮಾಹಿತಿ ಮುಜರಾಯಿ ಇಲಾಖೆ ನೀಡಿದೆ. ಈ ಬಗ್ಗೆ ಪತ್ರದ ಮೂಲಕ ಇಲಾಖೆಯಿಂದ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳಿಗೆ ಕಳುಹಿಸಲಾಗಿದೆ. ಮುಜರಾಯಿ ಇಲಾಖೆಯು ಕೆಲವೇ ಸಮಯದಲ್ಲಿ ದಿಡೀರನೆ ಇಂತಹ ನಿರ್ಣಯ ಏಕೆ ಬದಲಾಯಿಸಿತು, ಎಂಬುದು ತಿಳಿದುಬಂದಿಲ್ಲ.
ಬೆಳಗಾವಿ ಜಿಲ್ಲೆಯಲ್ಲಿನ ‘ಎ’ ಪ್ರವರ್ಗದ ಪರಮಾರ್ಥ ನಿಕೇತನ (ಹರಿ ಮಂದಿರ), ಪಂಥ ಬಾಳೆಕುಂದ್ರಿ ಇಲ್ಲಿಯ ದತ್ತಾತ್ರೇಯ ದೇವಸ್ಥಾನ, ರಾಮದುರ್ಗ ತಾಲೂಕಿನ ಗೊಡಚಿಯಲ್ಲಿನ ವೀರಭದ್ರ ದೇವಸ್ಥಾನ, ಹಾಗೂ ರಾಯಬಾಗ ತಾಲೂಕಿನ ಚಿಂಚಲಿಯಲ್ಲಿರುವ ಮಾಯಕ್ಕಾ ದೇವಿ ದೇವಸ್ಥಾನಗಳ ವ್ಯವಸ್ಥಾಪನೆ ಸಮಿತಿಯ ನೇಮಕ ಮಾಡುವ ನಿರ್ಣಯ ಮುಜರಾಯಿ ಇಲಾಖೆಯು ತೆಗೆದುಕೊಂಡಿತ್ತು, ಈ ನಾಲ್ಕೂ ದೇವಸ್ಥಾನದ ಮೇಲೆ ೯ ಸದಸ್ಯರ ಸಮಿತಿ ನೇಮಕವಾದ ಬೇಕಿತ್ತು.
ಈ ಸಮಿತಿಯ ಕಾಲಾವಧಿ ೩ ವರ್ಷಗಳಾಗಿತ್ತು.
೧. ಸಮಿತಿಯ ಸದಸ್ಯರೆಂದು ಕೆಲಸ ಮಾಡುವ ಇಚ್ಚಿಸುವವರು ಅರ್ಜಿಗಳನ್ನು ಕರೆಯಲಾಗಿತ್ತು. ೨೫ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಸದಸ್ಯರ ನೇಮಕವನ್ನು ಈ ಸಮಿತಿಯಲ್ಲಿ ಮಾಡಲಾಗುವುದ್ದಿತ್ತು.
೨. ಸಮಿತಿಗೆ ಸಂಬಂಧಪಟ್ಟ ದೇವಸ್ಥಾನದ ಮುಖ್ಯ ಅಥವಾ ಸಹಾಯಕ ಅರ್ಚಕ, ಪರಿಶಿಷ್ಟ ಜಾತಿ ಮತ್ತು ಪಂಗಡದ ಒಬ್ಬ ಸದಸ್ಯ, ಹಾಗೂ ಇಬ್ಬರು ಮಹಿಳಾ ಸದಸ್ಯರ ಸಮಾವೇಶ ಮಾಡಲಾಗುತ್ತಿತ್ತು. ಬೇರೆ ಸದಸ್ಯರ ಸಾಮಾನ್ಯ ವರ್ಗದಿಂದ ನೇಮಕ ಮಾಡುವುದಿತ್ತು. ಒಟ್ಟು ೩೯ ದೇವಸ್ಥಾನದಲ್ಲಿ ಸಮಿತಿ ನೇಮಕ ನಿರ್ಣಯ ಡಿಸೆಂಬರ ೨೩ ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು. (ದೇವಸ್ಥಾನದಲ್ಲಿ ಸೇವೆ ಮಾಡುವವರ ಉದ್ದೇಶ ಭಕ್ತರು ಎಂದು ಇರಬೇಕು ಹಾಗೂ ಅವರಿಗೆ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ವಿಧಿ ಯೋಗ್ಯ ರೀತಿಯಲ್ಲಿ ಮಾಡಲು ಬರುತ್ತದೆ ಅಥವಾ ಇಲ್ಲವೇ? ಇದು ನೋಡಬೇಕು. ಮಹಾರಾಷ್ಟ್ರದ ಪಂಡರಪುರದ ದೇವಸ್ಥಾನದಲ್ಲಿ ಹಾಗೂ ಇತರ ಅನೇಕ ದೇವಸ್ಥಾನಗಳಲ್ಲಿ ಸಂಬಳ ಕೊಟ್ಟು ನೇಮಕ ಆಗಿರುವ ಪೂಜಾರಿಗಳಿಂದ ಅಲ್ಲಿಯ ದುರಾವಸ್ಥೆಯು ಬೆಳಕಿಗೆ ಬಂದಿದೆ. ಹೀಗಿರುವಾಗ ತಪ್ಪು ವಿಷಯಕ್ಕಾಗಿ ಸರಕಾರದ ಅಟ್ಟಹಾಸ ಏತಕ್ಕಾಗಿ ? – ಸಂಪಾದಕರು)
ಈ ಮೊದಲು ಸರಕಾರ ದೇವಸ್ಥಾನದಲ್ಲಿ ಆಡಳಿತ ನೇಮಕ ನಿರ್ಣಯಕ್ಕೆ ರದ್ದತಿ ನೀಡಿತ್ತು !
ಫೆಬ್ರವರಿ ೨೦೨೧ ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿನ ೧೬ ದೇವಸ್ಥಾನದಲ್ಲಿ ಆಡಳಿತ ಮಂಡಳಿ ನೇಮಕ ಮಾಡುವ ನಿರ್ಣಯ ಮುಜರಾಯಿ ಇಲಾಖೆಯು ಕೈಗೊಂಡಿತ್ತು. ಈ ಬಗ್ಗೆ ‘ದೇವಸ್ಥಾನ ಮತ್ತು ಧಾರ್ಮಿಕ ಮಹಾಸಂಘ, ಕರ್ನಾಟಕ’ವು ಮಾರ್ಚ್ ೫, ೨೦೨೧ ರಂದು ಪತ್ರಿಕಾಗೋಷ್ಠಿಯನ್ನು ತೆಗೆದೊಕೊಂಡು ಅದಕ್ಕೆ ಬಲವಾಗಿ ವಿರೋಧ ವ್ಯಕ್ತಪಡಿಸಿ ನಿರ್ಣಯ ಹಿಂಪಡೆಯದಿದ್ದರೆ ರಾಜ್ಯವ್ಯಾಪಿ ಆಂದೋಲನ ನಡೆಸುವ ಘೋಷಣೆ ಮಾಡಿತ್ತು. ಈ ವಿರೋಧದಿಂದ ಸರಕಾರಕ್ಕೆ ನಿರ್ಣಯ ರದ್ದು ಪಡಿಸಬೇಕಾಯಿತು.