ಕರ್ನಾಟಕದಂತೆ ಇತರ ರಾಜ್ಯಗಳು ಸಹ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಬೇಕು ! – ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕ

ಬೆಂಗಳೂರು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಕರ್ನಾಟಕದ ಎಲ್ಲ ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ನಿರ್ಧರಿಸಿದ್ದಾರೆ. ಮುಂಬರುವ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ಕಾನೂನು ಮಂಡಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಈ ನಿರ್ಧಾರವನ್ನು ಮನಃಪೂರ್ವಕವಾಗಿ ಸ್ವಾಗತಿಸುತ್ತದೆ. ಇದು ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಲವು ಸಮವಿಚಾರಿ ಸಂಘಟನೆಗಳ ಹಲವು ವರ್ಷಗಳ ಬೇಡಿಕೆಯಾಗಿತ್ತು. ಕರ್ನಾಟಕ ರಾಜ್ಯದಂತೆ ದೇಶದ ಇತರ ರಾಜ್ಯಗಳೂ ರಾಜ್ಯ ಸರಕಾರ ಸ್ವಾಧೀನಪಡಿಸಿಕೊಂಡಿರುವ ಹಿಂದೂಗಳ ಎಲ್ಲ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಿ ಭಕ್ತರಿಗೆ ಒಪ್ಪಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡರವರು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ

ಶ್ರೀ ಮೋಹನ ಗೌಡ ಇವರು ನೀಡಿದ ಪತ್ರಿಕಾಪ್ರಕಣೆಯಲ್ಲಿ ಮುಂದಿನಂತೆ ಹೇಳಿದ್ದಾರೆ,

ಶ್ರೀ. ಮೋಹನ ಗೌಡ

೧. ಭಾಜಪವು ಕಳೆದ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನು ಘೋಷಿಸಿತ್ತು. ಇಂದು ದೇಶದ ಅನೇಕ ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರವು ತಮ್ಮ ಸಂಸ್ಥೆಗಳನ್ನು ಸರಿಯಾಗಿ ನಡೆಸಲು ಸಾಧ್ಯವಾಗದೇ ಅವುಗಳನ್ನು ಖಾಸಗೀಕರಣಗೊಳಿಸುತ್ತಿವೆ. ಅನೇಕ ಸರಕಾರಿ ಉದ್ಯಮಗಳು ಮಾರಾಟವಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ಹಿಂದೂಗಳ ದೇವಸ್ಥಾನಗಳನ್ನು ಮಾತ್ರ ಏಕೆ ಸರಕಾರಿಕರಣ ಮಾಡುತ್ತಿದೆ ಎಂಬು ದರ ಕುರಿತು ನಾವು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದೆವು.

೨. ಸ್ವಾತಂತ್ರ್ಯಾ ನಂತರ ಕಳೆದ ೭೫ ವರ್ಷಗಳಲ್ಲಿ ದೇಶದಲ್ಲಿ ಮಸೀದಿ, ಚರ್ಚ್‌ಗಳನ್ನು ಸರಕಾರಿಕರಣದ ಬಗ್ಗೆ ಚಕಾರವನ್ನೂ ಎತ್ತದ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ದೇವಸ್ಥಾನಗಳ ಮೇಲಿನ ಸರಕಾರಿ ನಿಯಂತ್ರಣವನ್ನು ತೆಗೆದುಹಾಕುವುದನ್ನು ತೀವ್ರವಾಗಿ ವಿರೋಧಿಸಿದೆ. ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಲು ವಿರೋಧಿಸುವುದು ದುರದೃಷ್ಟವಾಗಿದ್ದು ಇದು ಕಾಂಗ್ರೆಸ್‌ನ ‘ವಿನಾಶಕಾಲೆ ವಿಪರೀತ ಬುದ್ಧಿ’ಯಾಗಿದೆ. ಕರ್ನಾಟಕದ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ ಇವರು ದೇವಸ್ಥಾನ ಇದು ಸರಕಾರದ ಆಸ್ತಿಯಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಚರ್ಚ್ ಅಥವಾ ಮಸೀದಿ ಇವು ಸರಕಾರದ ಆಸ್ತಿ ಎಂದು ಹೇಳಲು ಎಂದಾದರೂ ಧೈರ್ಯ ಮಾಡಿದೆಯೇ ?

೩. ೬ ಜನವರಿ ೨೦೧೪ ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಡಾ. ಬಿ.ಎಸ್. ಚವ್ಹಾಣ ಮತ್ತು ನ್ಯಾಯಮೂರ್ತಿ ಶರದ ಬೋಬಡೆ ನೇತೃತ್ವದ ವಿಭಾಗೀಯಪೀಠವು ತಮಿಳುನಾಡಿನ ಶ್ರೀ ನಟರಾಜ ಮಂದಿರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡುತ್ತಾ, ದೇಶದ ಜಾತ್ಯತೀತ ಸರಕಾರಕ್ಕೆ ಹಿಂದೂ ದೇವಸ್ಥಾನಗಳನ್ನು ನಡೆಸುವ ಮತ್ತು ಸ್ವಾಧೀನಪಡಿಸಿಕೊಳ್ಳುವ ಹಕ್ಕಿಲ್ಲ, ಆದರೆ ದೇವಸ್ಥಾನದ ನಿರ್ವಹಣೆಯಲ್ಲಿನ ಲೋಪದೋಷಗಳನ್ನು ದೂರಗೊಳಿಸಿ ಅದನ್ನು ಪುನಃ ಭಕ್ತರಿಗೆ ಅಥವಾ ಸಮಾಜಕ್ಕೆ ನೀಡುವುದು ಅಗತ್ಯವಾಗಿದೆ. ಅದರಂತೆ ಕೇಂದ್ರ ಮತ್ತು ಎಲ್ಲ ರಾಜ್ಯ ಸರಕಾರಗಳು ಮಾಡಬೇಕಾಗುವುದು ಅಗತ್ಯವಾಗಿದೆ, ಎಂದು ಹೇಳಿತ್ತು.

೪. ಹಿಂದೂ ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಿದ ನಂತರ, ಅವುಗಳನ್ನು ಸರಿಯಾಗಿ ನಿರ್ವಹಿಸುವುದು ಅಗತ್ಯವಾಗಿದೆ. ಈಶ್ವರನ ಭಕ್ತರು ಮಾತ್ರ ಉತ್ತಮ ನಿರ್ವಹಣೆಯನ್ನು ಮಾಡಲು ಸಾಧ್ಯ. ಅದಕ್ಕಾಗಿ ಶಂಕರಾಚಾರ್ಯರು, ಧರ್ಮಾಚಾರ್ಯರು, ದೇವಸ್ಥಾನದ ವಿಶ್ವಸ್ಥರು, ಹಿಂದೂ ಸಂಘಟನೆಗಳು, ಸಂತರು ಇವರೊಂದಿಗೆ ರಾಜ್ಯ ಸರಕಾರ ಚರ್ಚಿಸಬೇಕೆಂದು ಸಮಿತಿಯು ಒತ್ತಾಯಿಸಿದೆ.