ಪ್ರಯಾಗರಾಜದಲ್ಲಿ ಸಂತ ಸಮ್ಮೇಳನ
|
ಪ್ರಯಾಗರಾಜ (ಉತ್ತರಪ್ರದೇಶ) – ಇಲ್ಲಿ ಆಯೋಜಿಸಲಾಗಿದ್ದ ಸಂತ ಸಮ್ಮೇಳನದಲ್ಲಿ ಹಿಂದು ರಾಷ್ಟ್ರದ ಸಂವಿಧಾನವನ್ನು ನಿರ್ಮಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಅದಕ್ಕೆ ‘ಹಿಂದು ರಾಷ್ಟ್ರ ಸಂವಿಧಾನ’ವೆಂದು ಹೆಸರಿಸಲಾಗುವುದು. ಈ ಸಂವಿಧಾನವನ್ನು ಮುಂದಿನ ವರ್ಷದ ಮಾಘ ಮೇಳದಲ್ಲಿ ಸಂತರ ಹಾಗೂ ಭಕ್ತರ ಮುಂದೆ ಮಂಡಿಸಲಾಗುವುದು. ಅಖಿಲ ಭಾರತೀಯ ವಿದ್ವತ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಡಾ. ಕಾಮೇಶ್ವರ ಉಪಾಧ್ಯಾಯರವರನ್ನು ಸಂವಿಧಾನ ನಿರ್ಮಾಣದ ಸಂಯೋಜಕರನ್ನಾಗಿ ನೇಮಿಸಲಾಗಿದೆ. ಅವರ ಅಡಿಯಲ್ಲಿ ಕಾಯಿದೆತಜ್ಞ ಹಾಗೂ ಸುರಕ್ಷಾತಜ್ಞರ ಸೇರಿರುವ ಮೂರು ಸಮಿತಿಗಳನ್ನು ಮಾಡಲಾಗುವುದು. ಪ್ರತಿಯೊಂದು ಸಮಿತಿಯಲ್ಲಿ ೨೫ ಜನರ ಸಮಾವೇಶವಿರಲಿದೆ. ಅದರಲ್ಲಿ ಸಿಖ, ಬೌದ್ಧ, ಜೈನರೂ ಸೇರಿದಂತೆ ೧೨೭ ಪಂಥದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಶ್ರಾವಣ ಮಾಸದವರೆಗೂ ಸಂವಿಧಾನದ ವಿನ್ಯಾಸವನ್ನು ತಯಾರಿಸುವ ಗುರಿಯನ್ನಿಟ್ಟುಕೊಳ್ಳಲಾಗಿದೆ.
Declare India a Hindu Nation Constitutionally !
Hundreds of Saints approve the proposal in Sant Sammelan at #Prayagraj, #UttarPradesh !
https://t.co/5zYviV9Jhp #Need_Hindu_Rashtra #MondayMotivation #Constitution pic.twitter.com/1tpOcX7hrS
— Sanatan Prabhat (Kannada) (@Sanatan_Prabhat) January 31, 2022
೧೬ನೇ ವಯಸ್ಸಿನಿಂದ ಮತದಾನದ ಹಕ್ಕು !
ಸಂತ ಸಮ್ಮೇಳನದ ಸಂಚಾಲನಾ ಸಮಿತಿಯ ಸಂಯೋಜಕರಾದ ಸ್ವಾಮೀ ಆನಂದ ಸ್ವರೂಪರವರು, ಭಾರತವನ್ನು ‘ಹಿಂದು ರಾಷ್ಟ್ರ’ವನ್ನಾಗಿಸುವ ದಿಕ್ಕಿನಲ್ಲಿ ಕೆಲಸ ಪ್ರಾರಂಭವಾಗಿದೆ. ದೇಶದಲ್ಲಿ ಲೋಕಸಭೆಯಲ್ಲಿ ೫೪೩ ಚುನಾವಣಾ ಕ್ಷೇತ್ರಗಳಿವೆ. ಪ್ರತಿಯೊಂದು ಚುನಾವಣಾ ಕ್ಷೇತ್ರದಲ್ಲಿ ‘ಧರ್ಮ ಸಂಸದ’ರನ್ನು ಆರಿಸಲಾಗುವುದು. ಈ ಚುನಾವಣಾ ಕ್ಷೇತ್ರದಲ್ಲಿನ ಅಭ್ಯರ್ಥಿಯ ವಯಸ್ಸು ೨೫ ಕ್ಕಿಂತ ಹೆಚ್ಚಾಗಿರುವುದು. ಅದೇ ರೀತಿ ೧೬ನೇ ವಯಸ್ಸಿನಿಂದ ಮತದಾನದ ಹಕ್ಕು ಇರಲಿದೆ. ನವ ದೆಹಲಿಯಲ್ಲಿರುವ ಸಂಸದ ಭವನದಂತೆಯೇ ಕಾಶಿಯಲ್ಲಿ ಸಂಸದ ಭವನವನ್ನು ನಿರ್ಮಿಸಲಾಗುವುದು. ಅದಕ್ಕಾಗಿ ಕಾಶಿಯಲ್ಲಿನ ಶಲೂಕಂಟೇಶ್ವರದ ಬಳಿ ೪೮ ಏಕರೆ ಭೂಮಿಯನ್ನು ಆರಿಸಲಾಗಿದೆ. ಹಿಂದು ರಾಷ್ಟ್ರದಲ್ಲಿ ಕಾಶಿಯನ್ನೇ ದೇಶದ ರಾಜಧಾನಿಯನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಮುಸಲ್ಮಾನರಿಗಿರಲ್ಲ ಮತದಾನದ ಹಕ್ಕು !
ಮುಸಲ್ಮಾನರಿಗೆ ಗೌರವ ಹಾಗೂ ಸಂರಕ್ಷಣೆ ನೀಡಲಾಗುವುದು; ಆದರೆ ಮತದಾನದ ಅಧಿಕಾರವಿರುವುದಿಲ್ಲ, ಎಂದು ಸ್ವಾಮೀ ಆನಂದ ಸ್ವರೂಪ ಇವರು ಸ್ಪಷ್ಟ ಪಡಿಸಿದ್ದಾರೆ.
ಹಿಂದು ರಾಷ್ಟ್ರದ ಸಂವಿಧಾನವು ಧರ್ಮಗ್ರಂಥದ ಆಧಾರದಲ್ಲಿರಲಿದೆ !
ಹಿಂದು ರಾಷ್ಟ್ರದ ಸಂವಿಧಾನದಲ್ಲಿ ಶ್ರೀಮದ್ಭಗವದ್ಗೀತೆ, ಶ್ರೀರಾಮಚರಿತಮಾನಸ, ಮನುಸ್ಮೃತಿ ಸೇರಿದಂತೆ ವೇದ ಹಾಗೂ ಪುರಾಣಗಳಲ್ಲಿನ ಅಂಶಗಳ ಸಮೇವೇಶವಿರಲಿದೆ. ಹಿಂದು ರಾಷ್ಟ್ರದಲ್ಲಿ ಗುರುಕುಲ ಶಿಕ್ಷಣವನ್ನು ಕಡ್ಡಾಯ ಪಡಿಸಲಾಗುವುದು. ಇದರಲ್ಲಿ ೩ ರಿಂದ ೮ ವರ್ಷ ವಯಸ್ಸಿನ ಮಕ್ಕಳಿಗೆ ಶಿಕ್ಷಣ ಪಡೆದುಕೊಳ್ಳುವುದು ಕಡ್ಡಾಯವಾಗಿರಲಿದೆ. ಅನಂತರ ಅವರಿಗೆ ಬೇರೆ ಶಾಲೆಗಳಿಗೆ ಹೋಗುವ ಅನುಮತಿ ಇರಲಿದೆ.
ಹಿಂದು ರಾಷ್ಟ್ರದ ಮಂತ್ರಿಮಂಡಲವು ಚಂದ್ರಗುಪ್ತ ಮೌರ್ಯನ ಮಂತ್ರಿಮಂಡಲದಂತೆ ಇರಲಿದೆ
ಸ್ವಾಮಿ ಆನಂದ ಸ್ವರೂಪರವರು ತಮ್ಮ ಮಾತನ್ನು ಮುಂದುವರೆಸುತ್ತಾ, ಹಿಂದು ರಾಷ್ಟ್ರದಲ್ಲಿನ ಮಂತ್ರಿಮಂಡಲವು ಚಂದ್ರಗುಪ್ತ ಮೌರ್ಯರ ಮಂತ್ರಿಮಂಡಲದಂತೆ ಇರಲಿದೆ. ಅದರಲ್ಲಿ ಸಂರಕ್ಷಣೆ, ಶಿಕ್ಷಣ, ರಾಜಕೀಯ, ಆರೋಗ್ಯ ಇತ್ಯಾದಿಗಳ ವ್ಯವಸ್ಥೆ ಇರಲಿದೆ ಎಂದು ಹೇಳಿದರು.
ಭಾರತವನ್ನು ಹಿಂದು ರಾಷ್ಟ್ರವಾಗಲು ತಡೆಯಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ರೂಪಿಸಲಾಗುತ್ತಿದೆ ! – ಮಹಾಮಂಡಲೇಶ್ವರ ಅನ್ನಪೂರ್ಣಾ ಭಾರತೀ
ಮಹಾಮಂಡಲೇಶ್ವರ ಅನ್ನಪೂರ್ಣಾ ಭಾರತೀಯವರು ಮಾತನಾಡುತ್ತಾ, ನಮ್ಮನ್ನು ತಡೆಯಲು ದೇಶದಲ್ಲಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ರೂಪಿಸಲಾಗುತ್ತಿದೆ; ಆದರೆ ಭಾರತವನ್ನು ಹಿಂದು ರಾಷ್ಟ್ರವನ್ನಾಗಿಸುವ ಅಭಿಯಾನ ನಿಲ್ಲುವುದಿಲ್ಲ. ಹಿಂದು ರಾಷ್ಟ್ರವನ್ನಾಗಿಸಲು ಹಾಗೂ ಜಿಹಾದ ಅನ್ನು ನಾಶ ಮಾಡಲು ಕೊನೆಯ ಶ್ವಾಸದವರೆಗೂ ಹೋರಾಡುವೆವು. ಮತಾಂತರಿತ ಮುಸಲ್ಮಾನರನ್ನು ಗೌರವಪೂರ್ವಕವಾಗಿ ಹಿಂದೂಧರ್ಮಕ್ಕೆ ಕರೆತರಲಾಗುವುದು, ಅದೇ ರೀತಿ ಮಠ ಹಾಗೂ ದೇವಾಲಯಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಲಾಗುವುದು ಎಂದು ಹೇಳಿದರು.