ಹಿಂದೂ ದೇವಸ್ಥಾನಗಳು ವ್ಯವಸ್ಥಾಪಕರ ಮತ್ತು ಸರಕಾರದ ಅಧೀನದಲ್ಲಿ ಇರಬೇಕೆ ? – ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ನ್ಯಾಯ ಪೀಠದ ಪ್ರಶ್ನೆ

ಮಧುರೈ (ತಮಿಳುನಾಡು) – ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ನ್ಯಾಯ ಪೀಠವು ರಂಗರಾಜನ್ ನರಸಿಂಹನ್ ಇವರ ವಿರುದ್ಧ ಮಾನನಷ್ಟಕ್ಕೆ ಸಂಬಮಧಿಸಿದ ದಾಖಲಿಸಿದ್ದ 2 ಅರ್ಜಿಯನ್ನು ತಳ್ಳಿಹಾಕಿದೆ. ರಂಗರಾಜನ್ ಇವರು ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನೆ ನೋಡಿಕೊಳ್ಳುವ ಅಧಿಕಾರಿಗಳ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದರು ಹಾಗೂ ರಾಜ್ಯದಲ್ಲಿನ ಸಾವಿರಾರು ದೇವಸ್ಥಾನಗಳ ಸ್ಥಿತಿಯ ಬಗ್ಗೆ ಧ್ವನಿಯೆತ್ತಿದ್ದರು. ಈ ಸಮಯದಲ್ಲಿ ನ್ಯಾಯಾಧೀಶ ಜಿ.ಆರ್. ಸ್ವಾಮಿನಾಥನ್ ಇವರು, ಭಾರತದಲ್ಲಿನ ದೇವಸ್ಥಾನಗಳ ಜೀರ್ಣೋದ್ಧಾರ ಮಾಡುವ ಅವಶ್ಯಕತೆ ಇದೆ. ಹಿಂದೂ ದೇವಸ್ಥಾನಗಳು ಆಡಳಿತ ಮತ್ತು ಸರಕಾರದ ಅಡಿಯಲ್ಲೇ ಇರಬೇಕೆ ?, ಎಂಬ ಪ್ರಶ್ನೆ ಅವರು ಕೇಳಿದರು.

ರಂಗರಾಜನ್ ನರಸಿಂಹನ್ ಇವರು ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ವ್ಯವಸ್ಥಾಪಕರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಎತ್ತಿದರು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮುಜರಾಯಿ ಇಲಾಖೆಯ ಆಯುಕ್ತರು ಮತ್ತು ದೇವಸ್ಥಾನದ ಕಾರ್ಯದರ್ಶಿ ಸಮಿತಿಯ ಮಾಜಿ ಅಧ್ಯಕ್ಷ ಇವರ ಕಾನೂನುಬಾಹಿರ ಕಾರ್ಯಗಳು ಬೆಳಕಿಗೆ ತಂದರು. ಈ ಆರೋಪವನ್ನು ಸಂಬಂಧಿತರು ತಳ್ಳಿಹಾಕಿ ರಂಗರಾಜನ್ ಇವರ ವಿರುದ್ಧ ಮಾನನಷ್ಟ ಮೊಕದ್ದಮೆಯ ದಾಖಲಿಸಿದರು ಹಾಗೂ ಅವರ ವಿರುದ್ಧ ಆರೋಪ ದಾಖಲಿಸಲು ಒತ್ತಾಯಿಸಿದರು. ರಂಗರಾಜನ್ ಇವರ ಮೇಲೆ ಈ ಮೊದಲು 2 ದೂರು ದಾಖಲಿಸಲಾಗಿತ್ತು. ಆ ಸಮಯದಲ್ಲಿ ನ್ಯಾಯಾಲಯವು `ದೇವಸ್ಥಾನ ನ್ಯಾಯ ಮತ್ತು ಮುಜರಾಯಿ ಇಲಾಖೆ ಇವರ ಕಾರ್ಯವೈಖರಿ ಬೆಳಕಿಗೆ ತಂದಿರುವುದರಿಂದ ಭಕ್ತರನ್ನು ಗುರಿಯಾಗಿಸಿ ಅವರ ವಿರುದ್ಧ ದೂರ ದಾಖಲಿಸಲಾಗಿತ್ತು’, ಎಂದು ಸ್ಪಷ್ಟಪಡಿಸಿದರು.

ಜಾತ್ಯತೀತವೆನ್ನುವ ಸರಕಾರವು ದೇವಸ್ಥಾನಗಳಂತೆ ಚರ್ಚ್ ಮತ್ತು ಮಸೀದಿಯ ಮೇಲೆಯೂ ನಿಯಂತ್ರಣ ಇಡಬೇಕು !

ಈ ಬಗ್ಗೆ ವಿಚಾರಣೆ ನಡೆಸುವಾಗ ನ್ಯಾಯಾಧೀಶ ಸ್ವಾಮಿನಾಥನ್ ಅವರು, ತಮ್ಮನ್ನು ಜಾತ್ಯತೀತವೆಂದು ಹೇಳುವ ಸರಕಾರ ಧಾರ್ಮಿಕ ಸಂಸ್ಥೆಯ ಸಂದರ್ಭದಲ್ಲಿ ಸಮಾನ ವ್ಯವಹಾರ ಮಾಡಬೇಕು. ಟಿ.ಆರ್. ರಮೇಶನಂತೆ ತಿಳಿದಿರುವ ಮತ್ತು ಜವಾಬ್ದಾರಿಯುವತಾದ ಕಾರ್ಯಕರ್ತ ಹೇಳಿರುವ ರೀತಿಯಂತೆ ಜಾತ್ಯತೀತವೆಂದು ಎನಿಸಿಕೊಳ್ಳುವ ಸರಕಾರವು ದೇವಸ್ಥಾನಗಳಂತೆ ಚರ್ಚ್ ಮತ್ತು ಮಸಿದಿ ಮೇಲೆ ನಿಯಂತ್ರಣ ಏಕೆ ಇಡಬಾರದು ? ಎಂದು ಹೇಳಿದರು.

ನೀರ್ಲಕ್ಷಿತ ದೇವಸ್ಥಾನಗಳಿಗೆ ಅದರ ಗೌರವ ಮತ್ತೆ ಗಳಿಸಿಕೊಡುವ ಅವಶ್ಯಕತೆ ಇದೆ !

ನ್ಯಾ. ಸ್ವಾಮಿನಾಥನ್ ತಮ್ಮ ಮಾತನ್ನು ಮುಂದುವರೆಸುತ್ತಾ, ನಮ್ಮ ಸಂಸ್ಕೃತಿಯಲ್ಲಿ ದೇವಸ್ಥಾನಗಳ ಪಾತ್ರ ಬಹಳ ಮಹತ್ವದ್ದಾಗಿದೆ; ಆದರೆ ಪ್ರಸ್ತುತ ಸ್ಥಿತಿಯಲ್ಲಿ ಅದರ ಕೆಲವು ಅವಶ್ಯಕ ವಿಷಯದ ಕಡೆಗೆ ನಿರ್ಲಕ್ಷ ಮಾಡಲಾಗುತ್ತಿದೆ. ಈ ದೇವಸ್ಥಾನಗಳ ಪೋಷಣೆಗಾಗಿ ನೀಡಿರುವ ಭೂಮಿಯನ್ನು ವೈಯಕ್ತಿಕ ಸಾರ್ಥಕ್ಕಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗಿದೆ. ದೇಶದ ಪ್ರಾಚೀನ ಮೂರ್ತಿಗಳು ಕಳವು ಮಾಡಿ ಅವುಗಳನ್ನು ವಿದೇಶಗಳಿಗೆ ಕಳ್ಳ ಸಾಗಾಣಿಕೆ ಮಾಡಲಾಗಿದೆ. ದೇವಸ್ಥಾನದ ಅರ್ಚಕರಿಗೆ ಕಡಿಮೆ ವೇತನ ನೀಡಲಾಗುತ್ತದೆ. ರಾಜ್ಯದಲ್ಲಿನ ಸಾವಿರಾರು ದೇವಸ್ಥಾನಗಳು ನಿರ್ಲಕ್ಷಕ್ಕೆ ಬಲಿಯಾಗಿದ್ದಾವೆ. ಈ ದೇವಸ್ಥಾನಗಳಲ್ಲಿ ಪೂಜೆಯೂ ಆಗುತ್ತಿಲ್ಲ. ಈ ದೇವಸ್ಥಾನಗಳನ್ನು ಮತ್ತೊಮ್ಮೆ ಗೌರವ ಪಡೆಯುವ ಅವಶ್ಯಕತೆ ಇದ್ದು ಅದಕ್ಕಾಗಿ ಏನಾದರೂ ಮಾಡುವುದು ಆವಶ್ಯಕವಾಗಿದೆ ಎಂದು ಹೇಳಿದರು.