ಭಕ್ತರಿಗೆ ದೇವಸ್ಥಾನದ ವ್ಯವಸ್ಥಾಪನೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಂಪೂರ್ಣ ಹಕ್ಕಿದೆ ! – ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ

ಅಮರಾವತಿ (ಆಂಧ್ರಪ್ರದೇಶ) – ದೇವಸ್ಥಾನದ ಭಕ್ತರಿಗೆ ದೇವಸ್ಥಾನದ ವ್ಯವಸ್ಥಾಪನೆಯ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಲು ಸಂಪೂರ್ಣ ಹಕ್ಕಿದೆ. ಎಂದು ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯ ಒಂದು ಅರ್ಜಿಯ ಮೇಲಿನ ತೀರ್ಪು ನೀಡುವಾಗ ಅಭಿಪ್ರಾಯ ವ್ಯಕ್ತಪಡಿಸಿತು. ರಾಜ್ಯದ ಗುಂಟೂರು ಜಿಲ್ಲೆಯ ಶ್ರೀ ಮಹಾಕಾಳಿ ಅಮ್ಮಾವರಿ ದೇವಸ್ಥಾನದ ಪುನರ್ ನಿರ್ಮಾಣದ ವಿರೋಧದಲ್ಲಿ ಎಲ್ಲಂತಿ ರೇಣುಕಾ ಇವರು ದಾಖಲಿಸಿದ ಅರ್ಜಿಯ ಕುರಿತು ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.