(ಅಂತೆ) `ನಮಗೆ ಗರ್ಭಗುಡಿಗೆ ಹೋಗುವ ಇಚ್ಛೆಯಿರಲಿಲ್ಲ, ಕೇವಲ ತ್ರ್ಯಂಬಕೇಶ್ವರಿಗೆ ಧೂಪವನ್ನು ತೋರಿಸಬೇಕು ಎಂದಿದ್ದೆವು – ಉರೂಸ್ ಆಯೋಜಕರ ಸ್ಪಷ್ಟೀಕರಣ
ಇಲ್ಲಿ ಮೇ 13 ರಂದು ರಾತ್ರಿ ಮುಸಲ್ಮಾನರ ಸ್ಥಳೀಯ ಉರೂಸನ ನಿಮಿತ್ತದಿಂದ ನಡೆದ ಮೆರವಣಿಗೆಯಲ್ಲಿ ಕೆಲವು ಮುಸಲ್ಮಾನರು ಉತ್ತರ ಮಹಾದ್ವಾರದಿಂದ ಶ್ರೀ ತ್ರ್ಯಂಬಕೇಶ್ವರ ಮಂದಿರವನ್ನು ಪ್ರವೇಶಿಸಲು ಹಟ ಹಿಡಿದು ಶಿವಲಿಂಗದ ಮೇಲೆ ಹಸಿರು ಶಾಲನ್ನು ಹೊದಿಸುವುದಾಗಿ ಹಟ ಹಿಡಿದರು.